ನವದೆಹಲಿ: ದಂಗಲ್, ಸೀಕ್ರೆಟ್ ಸೂಪರ್ ಸ್ಟಾರ್ ಖ್ಯಾತಿಯ ಝೈರಾ ವಾಸಿಂ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುವಾಗ ಕಿರಾತಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ತನ್ನ ಮೇಲೆ ಆದ ಈ ಕಿರುಕುಳದ ಬಗ್ಗೆ ನಟಿ ಜೈರಾ ವಾಸೀಮ್ ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.
ವಿಮಾನದಲ್ಲಿ ಕಿಡಿಗೇಡಿಯೊರ್ವ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ಮನನೊಂದ ‘ದಂಗಲ್’ ನಟಿ ಝೈರಾ ವಾಸಿಂ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏರ್ ವಿಸ್ತಾರ್ ದಲ್ಲಿ ಪ್ರಯಾಣಿಸುತ್ತಿದ್ದ 17 ವರ್ಷದ ನಟಿ ಝೈರಾ ಫ್ಲೈಟ್ ನಲ್ಲಿ ನಿದ್ರೆಗೆ ಜಾರಿದ್ದರು. ಈ ವೇಳೆ ಹಿಂಬದಿ ಸೀಟ್ ನಲ್ಲಿ ಕುಳಿತುಕೊಂಡಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊರ್ವ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಝೈರಾಳನ್ನು ಹಿಂದಿನಿಂದ ಕಾಲಿನಲ್ಲಿ ಸ್ಪರ್ಶಿಸಿದ್ದಾನೆ.
https://www.youtube.com/watch?v=QLYr2Kq4FtI
https://www.youtube.com/watch?v=V08GqgaR9kE
ಇದರಿಂದ ನಾನು ಕೂಡಲೇ ಎಚ್ಚರಗೊಂಡು ಆ ವ್ಯಕ್ತಿಯ ಅಸಭ್ಯ ಚಟುವಟಿಕೆಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದೆ. ಆದರೆ ಅಲ್ಲಿ ಬೆಳಕು ಕಡಿಮೆ ಇದಿದ್ದರಿಂದ ನಾನು ಅವನ ಮುಖವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಆಗಲಿಲ್ಲ. ಆ ವ್ಯಕ್ತಿ ಸುಮಾರು 5-10 ನಿಮಿಷವರೆಗೂ ನನ್ನ ಕತ್ತನ್ನು ಸವರಿದ್ದಾನೆ ಹಾಗೂ ನನ್ನ ಕಾಲುಗಳನ್ನು ಸವರಿದ್ದಾನೆ ಎಂದು ಝೈರಾ ಪೋಸ್ಟ್ ಮಾಡಿದ್ದಾರೆ.
ನಾನು ಈಗ ತಾನೇ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಿದ್ದೇನೆ. ವಿಮಾನದಲ್ಲಿ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಹುಡುಗಿಯರ ಜೊತೆ ಈ ರೀತಿ ಮಾಡುವುದು ಸರಿಯಿಲ್ಲ. ನಾವು ನಮ್ಮನ್ನು ರಕ್ಷಿಸಿಕೊಳ್ಳಲಿಲ್ಲ ಎಂದರೆ ನಮಗೆ ಯಾರು ಸಹಾಯ ಮಾಡುತ್ತಾರೆ. ಇದು ಬಹಳ ಕೆಟ್ಟದ್ದು ಎಂದು ಝೈರಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಅಲ್ಲದೇ ಝೈರಾ ಸಹಾಯಕ್ಕಾಗಿ ಕ್ಯಾಬೀನ್ ಸಿಬ್ಬಂದಿಯನ್ನು ಕರೆದಿದ್ದಾರೆ. ಆದರೆ ಯಾವುದೇ ಪ್ರಯೋಜವಾಗಿಲ್ಲ. ಝೈರಾ ಸಹಾಯಕ್ಕೆ ಯಾರು ಬಾರದೇ ಇದ್ದಿದ್ದು, ಅವರಿಗೆ ತುಂಬಾ ಬೇಸರ ಮೂಡಿಸಿದೆ. ಹೀಗಾಗಿ ಮುಂಬೈಗೆ ಬಂದ ಝೈರಾ ಮರುಕ್ಷಣವೇ ಇನ್ ಸ್ಟಾಗ್ರಾಂನಲ್ಲಿ ಫ್ಲೈಟ್‍ನಲ್ಲಿ ನಡೆದ ಘಟನೆ ಬಗ್ಗೆ ಅಳುತ್ತಾ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.