Connect with us

Bengaluru City

ಮತ್ತೊಮ್ಮೆ ಬಂತು ದಂಡುಪಾಳ್ಯ ಗ್ಯಾಂಗ್-ಮುಮೈತ್ ಐಟಂ ಹಾಡಿಗೆ ಪಡ್ಡೆ ಗ್ಯಾಂಗ್ ಫಿದಾ

Published

on

ಬೆಂಗಳೂರು: ದಂಡುಪಾಳ್ಯ ಗ್ಯಾಂಗ್ ಮತ್ತೊಮ್ಮೆ ಬೆಳ್ಳಿತೆರೆಗೆ ಲಗ್ಗೆ ಇಡೋಕೆ ತಯಾರಿ ನಡೆಸುತ್ತಿದೆ. ‘ಕೆವ್ವು ಕೇಕಾ’ ಅಂತ ಕೇಕೆ ಹಾಕಿ ಪಡ್ಡೆ ಹುಡುಗರ ಹಾರ್ಟ್ ಗೆ ಲಗ್ಗೆ ಇಟ್ಟ ಬ್ಯೂಟಿ ಮುಮೈತ್ ಖಾನ್, ದಂಡುಪಾಳ್ಯ ಅಖಾಡದಲ್ಲಿ ಸೆಕ್ಸಿ ಸೊಂಟ ಬಳುಕಿಸಿದ್ದಾರೆ.

ನಿರ್ದೇಶಕ ಶ್ರೀನಿವಾಸ್ ರಾಜು ಮೂರು ಭಾಗಗಳಲ್ಲಿ ‘ದಂಡುಪಾಳ್ಯ’ದ ಕಥೆಯನ್ನು ಬಿಚ್ಚಿಟ್ಟಿದ್ದರು. ಮೂರು ಭಾಗ ತೆರೆಕಂಡ ಮೇಲೆ ‘ದಂಡುಪಾಳ್ಯ’ ಹಂತಕರ ಕಥೆಗೆ ಅವರು ಪೂರ್ಣ ವಿರಾಮ ಇಟ್ಟಿದ್ದರು. ಇದೀಗ ಕೆ.ಟಿ.ನಾಯಕ್ ಎಂಬವರು ‘ದಂಡುಪಾಳ್ಯ-4’ ಗ್ಯಾಂಗ್ ಜೊತೆಗೆ ಗಾಂಧಿನಗರ ಪ್ರವೇಶಿಸುತ್ತಿದ್ದಾರೆ.

ಶ್ರೀನಿವಾಸ್ ರಾಜು ತೆರೆಗೆ ತಂದ ‘ದಂಡುಪಾಳ್ಯ’ ಸರಣಿಗೂ ‘ದಂಡುಪಾಳ್ಯ-4’ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲವಂತೆ. ಜೈಲಿನಿಂದ ತಪ್ಪಿಸಿಕೊಳ್ಳಲು ‘ದಂಡುಪಾಳ್ಯ’ ಗ್ಯಾಂಗ್ ಮಾಡಿದ ತಂತ್ರಗಳೇ ‘ದಂಡುಪಾಳ್ಯ-4’ ಚಿತ್ರದ ಕಥೆಯಂತೆ. ಪ್ರಮುಖ ಪಾತ್ರದಲ್ಲಿ ನಟಿ ಸುಮನ್ ರಂಗನಾಥ್ ಮಿಂಚಿದ್ದಾರೆ. ಸ್ಪೆಷಲ್ ಹಾಡಿಗೆ ಮುಮೈತ್ ಸೊಂಟ ಬಳುಕಿಸಿದ್ದಾರೆ.

‘ರಾಜಧಾನಿ’ ಹಾಗೂ ‘ ಪೊರ್ಕಿ’ ಐಟಂ ಹಾಡಿಗೆ ಸ್ಪೆಪ್ ಹಾಕಿದ್ದ ಮುಮೈತ್, ದಂಡುಪಾಳ್ಯ 4 ಮೂಲಕ ಸ್ಯಾಂಡಲ್‍ವುಡ್ ಗೆ ಕಮ್‍ಬ್ಯಾಕ್ ಮಾಡಿದ್ದಾರೆ. ತೆಲುಗು ನಟ ಸಂಜೀವ್, ವಿಠಲ್ ರಾಮದುರ್ಗ, ಮುಲೇಟ್ ಓಮು, ಸ್ನೇಹಾ, ರಿಚಾ ಶಾಸ್ತ್ರಿ, ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವೆಂಕಟ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿವೆ. ಎಲ್ಲಾ ಅಂದುಕೊಂಡಂತೆ ಆದರೆ ಶೀಘ್ರದಲ್ಲೇ ಗ್ಯಾಂಗ್ ದರ್ಶನವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *