ಬೀದರ್: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕೈ ಕಮಲ ಅಭ್ಯರ್ಥಿಗಳು ಮತ ಸೆಳೆಯಲು ವಿನೂತನ ಪ್ಲಾನ್ ಮಾಡಿದ್ದು, ಗಡಿ ಜಿಲ್ಲೆ ಬೀದರ್ ನಲ್ಲಿ ಮತಬೇಟೆ ನಡೆಸಿರುವ ಉಭಯ ಪಕ್ಷದ ಅಭ್ಯರ್ಥಿಗಳು ಡ್ಯಾನ್ಸ್ ವಾರ್ ಶುರುಮಾಡಿದ್ದಾರೆ.
Advertisement
ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ಗುರುವಾರದಂದು ನಡೆದಿದೆ. ಇನ್ನೂ ಎರಡನೇ ಹಂತದ ಮತದಾನವೂ ಏ.23ರಂದು ನಡೆಯಲಿದ್ದು, ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಬೀದರ್ ನಲ್ಲಿ ನೃತ್ಯ ತಂಡದಿಂದ ಡ್ಯಾನ್ಸ್ ಮಾಡಿಸಿ ಮತಬೇಟೆ ಮಾಡುತ್ತಿದ್ದಾರೆ. ಜಿಲ್ಲೆಯ ಪ್ರಮುಖ ವೃತ್ತಗಳಲ್ಲಿ ಡ್ಯಾನ್ಸ್ ಮೂಲಕ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
Advertisement
Advertisement
ಒಂದೆಡೆ ಬಿಜೆಪಿ ಅವರು ನೃತ್ಯತಂಡವನ್ನು ಕರೆಸಿ ತಮ್ಮ ಪರ ಪ್ರಚಾರ ಮಾಡಿಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಖಂಡ್ರೆ ತವರು ಕ್ಷೇತ್ರದಲ್ಲೂ ಡ್ಯಾನ್ಸ್ ಮೂಲಕ ಮತಬೇಟೆ ಮಾಡಲಾಗುತ್ತಿದೆ. ರಾಹುಲ್ ಗಾಂಧಿಯ ಟಿಶರ್ಟ್ ತೊಟ್ಟು ನೃತ್ಯತಂಡ ಡಾನ್ಸ್ ಮಾಡಿ ಪ್ರಚಾರದಲ್ಲಿ ತೊಡಗಿದ್ದಾರೆ. ಒಟ್ಟಿನಲ್ಲಿ ಎರಡೂ ಪಕ್ಷದವರೂ ಡಾನ್ಸ್ ವಾರ್ ಮಾಡಿ ಜನರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.