ಮೈಸೂರು: ವಿವಾಹಿತ ಮಹಿಳೆಗೆ ಪತಿಯ ಸಹಕಾರದಿಂದಲೇ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನ್ಸ್ ಸ್ವಾಮೀಜಿಯ ಶಿಷ್ಯನನ್ನು ಕುವೆಂಪುನಗರ ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿ ಶ್ರೀ ವಿದ್ಯಾಹಂಸ ಭಾರತಿ ಸ್ವಾಮೀಜಿಯ ಶಿಷ್ಯ ಅನಿಲ್ ಆಚಾರ್ಯ ಬಂಧಿತ ಆರೋಪಿ. ರಾಮಕೃಷ್ಣ ನಗರದಲ್ಲಿರುವ ಮನೆಗೆ ಮಧ್ಯರಾತ್ರಿ ತೆರಳಿ ಲೈಂಗಿಕ ಕಿರುಕುಳ ನೀಡಿತ್ತಿದ್ದನು ಎಂದು ಮಹಿಳೆ ಆರೋಪ ಮಾಡಿದ್ದರು. ಅಲ್ಲದೇ ಸ್ವಾಮೀಜಿಯ ಲೈಂಗಿಕ ಕಿರುಕುಳಕ್ಕೆ ತನ್ನ ಪತಿ ಸಹಕಾರವನ್ನು ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದರು.
Advertisement
Advertisement
ಸೆಪ್ಟೆಂಬರ್ 4ರಂದು ಈ ಘಟನೆ ನಡೆದಿದ್ದು ಸ್ವಾಮೀಜಿ, ರಾಜೇಶ್ ಬೋರೆ ಹಾಗೂ ಇತರ 5 ಮಂದಿಯಿಂದ ಕಿರುಕುಳ ನೀಡಿದ್ದರೆಂದು ಗೃಹಿಣಿ ಆರೋಪಿಸಿದ್ದರು. ಈ ಬಗ್ಗೆ ಸೆಪ್ಟೆಂಬರ್ 7ರಂದು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Advertisement
ಘಟನೆ ನಡೆದ ದಿನದಿಂದ ಸ್ವಾಮೀಜಿ ಹಾಗೂ ದೂರದಾರ ಮಹಿಳೆ ಪತಿ ನಾಪತ್ತೆಯಾಗಿದ್ದರು. ಈ ಘಟನೆ ನಡೆದ ವೇಳೆ ಸ್ವಾಮೀಜಿ ಶಿಷ್ಯ ಅನಿಲ್ ಆಚಾರ್ಯ ಸಹ ಇದ್ದರು. ಸದ್ಯ ಸಂತ್ರಸ್ತೆ ಅನಿಲ್ ಆಚಾರ್ಯರನ್ನು ಗುರುತಿಸಿದ್ದು, 5 ಮಂದಿ ಪೈಕಿ ಅನಿಲ್ ಆಚಾರ್ಯ ಸಹ ಇದ್ದರು.
Advertisement
ಏನಿದು ಪ್ರಕರಣ?
ನನ್ನ ಪತಿ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ರಾಮಮಂದಿದಲ್ಲಿ ವಿದ್ಯಾಹಂಸ ಭಾರತಿ ಸ್ವಾಮೀಜಿ ಪರಿಚಯ ಇದ್ದಾರೆ. ಅವರು ಹೇಳಿದಂತೆ ಕೇಳಿದರೆ ನಮ್ಮ ಸಾಲವನ್ನೆಲ್ಲಾ ತೀರಿಸಿಕೊಳ್ಳಬಹುದು ಎಂದು ಹೇಳಿದ್ದನು. ಅದಕ್ಕೆ ನಾನು ನಿರಾಕರಿಸಿದೆ. ಮಂಗಳವಾರ ರಾತ್ರಿ ಸುಮಾರು 1 ಗಂಟೆಗೆ ಮನೆಗೆ ಬಂದು ಬೆಲ್ ಮಾಡಿದರು. ನಾನು ನನ್ನ ಪತಿ ಬಂದಿರಬೇಕು ಎಂದು ಬಾಗಿಲು ತೆಗೆದೆ. ಆದರೆ ನಮ್ಮ ಗಂಡನ ಜೊತೆ ಸ್ವಾಮೀಜಿ ಮತ್ತು ಆತನ ಚೇಲಾಗಳು ಸುಮಾರು 5 ಜನ ಏಕಾಏಕಿ ಮನೆಗೆ ನುಗ್ಗಿದ್ದರು.
ನಮ್ಮ ಪತಿ ಮತ್ತು ಸ್ವಾಮೀಜಿ ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಸ್ವಾಮೀಜಿ ನನ್ನ ಸೇವೆಗೆ ಬರುವುದಿಲ್ಲ ಎಂದು ನಿರಾಕರಿಸುತ್ತೀಯಾ ಎಂದು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿ ರೂಮಿಗೆ ಎಳೆದುಕೊಂಡು ಹೋಗಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ನಾನು ದೇವಿ ಸ್ವರೂಪದವನು ನನ್ನ ಬೇಡಿಕೆಯನ್ನು ತಿರಸ್ಕರಿಸುತ್ತೀಯಾ ಎಂದು ಮೃಗನಂತೆ ವರ್ತಿಸಿದ್ದನು. ಇದಕ್ಕೆ ನನ್ನ ಪತಿ ಕುಮ್ಮಕ್ಕು ಕೊಟ್ಟಿದ್ದಾನೆ.
ಅಷ್ಟೇ ಅಲ್ಲದೇ ನನ್ನ ಬಟ್ಟೆ, ಹಾಸಿಗೆ, ಮಂಚಕ್ಕೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದನು. ಕೊನೆಗೆ ನಾನು ತಪ್ಪಿಸಿಕೊಂಡು ಪಕ್ಕದ ಮನೆಗೆ ಹೋಗಲು ಯತ್ನಸಿದೆ. ಅಷ್ಟರಲ್ಲಿ ಎಳೆದುಕೊಂಡು ಕಾರಿನಲ್ಲಿ ತನ್ನ ತೊಡೆ ಮೇಲೆ ಕೂರಿಸಿಕೊಂಡು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಇನ್ನು ಮೂರು ದಿನದಲ್ಲಿ ನನ್ನ ಸೇವೆಗೆ ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನನ್ನ ಪತಿಯ ಸಹೋದರನ ಮನೆಗೆ ಬಿಟ್ಟು ಹೋಗಿದ್ದಾನೆ. ಆದ್ದರಿಂದ ಸ್ವಾಮೀಜಿ, ಪತಿ ಮತ್ತು ಮೇಲ್ಕಂಡವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv