ಬೆಂಗಳೂರು: ಡ್ಯಾನ್ಸ್ ಕ್ಲಾಸ್ ಗೆ ವಿದ್ಯಾರ್ಥಿಗಳು ಬರುತ್ತಿಲ್ಲವೆಂದು ಮನನೊಂದು ಮಾಸ್ಟರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
38 ವರ್ಷದ ಸಂದೀಪ್ ಆತ್ಮಹತ್ಯೆ ಮಾಡಿಕೊಂಡ ಡ್ಯಾನ್ಸ್ ಮಾಸ್ಟರ್. ವಿಪರೀತವಾಗಿ ಕುಡಿಯುತ್ತಾ ಓಡಾಡಿಕೊಂಡಿದ್ದ ಡ್ಯಾನ್ಸ್ ಮಾಸ್ಟರ್ ಸಂದೀಪ್, ಆರು ತಿಂಗಳ ಹಿಂದೆ ಮಡದಿ ಹಾಗೂ ಮಗುವನ್ನು ತೊರೆದು ಒಬ್ಬನೇ ವಾಸ ಮಾಡುತ್ತಿದ್ದರು.
Advertisement
Advertisement
ಈತ ಡ್ಯಾನ್ಸ್ ಕ್ಲಾಸ್ ನಡೆಸುತ್ತಿದ್ದು, ಇತ್ತೀಚೆಗೆ ಕ್ಲಾಸ್‍ಗೆ ಮಕ್ಕಳು ಬಾರದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಇದರಿಂದ ಬೇಸತ್ತು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Advertisement
ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.