– ಸ್ಟಾರ್ ನಟನ ತಂಗಿ ಪಾತ್ರದ ಆಡಿಶನ್ ಅಂತ ಸುಳ್ಳು ಹೇಳಿದ್ದ
ಬೆಂಗಳೂರು: ಕನ್ನಡದ ಖ್ಯಾತ ರಿಯಾಲಿಟಿ ಶೋಗಳ ಕೊರಿಯೋಗ್ರಾಫರ್ ಒಬ್ಬ ಸ್ಟಾರ್ ನಟನ ತಂಗಿಯ ಪಾತ್ರಕ್ಕೆ ಚಿತ್ರದ ಆಡಿಶನ್ ಇದೆ ಎಂದು ಕರೆಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಕನ್ನಡದ ಫೇಮಸ್ ಡ್ಯಾನ್ಸ್ ಮಾಸ್ಟರ್ ಪವನ್ ಯುವತಿಯನ್ನ ನಂಬಿಸಿ ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ಇದೀಗ ಈತನನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪವನ್ ಅನೇಕ ರಿಯಾಲಿಟಿ ಶೋಗಳಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದನು.
Advertisement
Advertisement
ಏನಿದು ಪ್ರಕರಣ?
ಆರೋಪಿ ಪವನ್ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಬಳಿ ಡ್ಯಾನ್ಸ್ ಕ್ಲಾಸ್ ಹೊಂದಿದ್ದನು. ಇದೇ ಡ್ಯಾನ್ಸ್ ಕ್ಲಾಸ್ನಲ್ಲಿ ಕಳೆದ ಮೂರು ವರ್ಷಗಳಿಂದ ಸಂತ್ರಸ್ತ ಯುವತಿ ಡ್ಯಾನ್ಸ್ ಕಲಿಯುತ್ತಿದ್ದರು. ಕಳೆದ ಜನವರಿ 12 ರಂದು ಯುವತಿಗೆ ಪವನ್ ಫೋನ್ ಮಾಡಿದ್ದನು. ಆಗ ಸ್ಟಾರ್ ನಟರೊಬ್ಬರ ಹೊಸ ಸಿನಿಮಾಗೆ ತಂಗಿ ಪಾತ್ರದ ಆಡಿಶನ್ ಇದೆ ಎಂದು ಹೇಳಿ ತನ್ನ ಡ್ಯಾನ್ಸ್ ಕ್ಲಾಸಿಗೆ ಯುವತಿಯನ್ನು ಕರೆಸಿಕೊಂಡಿದ್ದನು.
Advertisement
ಯುವತಿ ಬರುವ ಮೊದಲೇ ಆರೋಪಿ ಪವನ್ ತನ್ನ ಗೆಳೆಯನೊಬ್ಬನಿಗೆ ಫೋನ್ ಮಾಡಿ ನಿರ್ದೇಶಕನ ಸೋಗಿನಲ್ಲಿ ಯುವತಿಯ ಜೊತೆ ಮಾತನಾಡುವಂತೆ ಹೇಳಿದ್ದಾನೆ. ಅದರಂತೆಯೇ ಆತನ ಗೆಳೆಯ ನೀನು ಸ್ಟಾರ್ ನಟನ ಮುಂದಿನ ಸಿನಿಮಾಗೆ ತಂಗಿ ಪಾತ್ರಕ್ಕೆ ಆಯ್ಕೆಯಾಗಿದ್ದೀಯಾ ಎಂದು ನಂಬಿಸಿದ್ದಾನೆ. ನಂತರ ಮತ್ತು ಬರುವ ಔಷಧಿಯನ್ನು ನೀರಿನಲ್ಲಿ ಬೆರೆಸಿ ಯುವತಿಗೆ ಕುಡಿಸಿದ್ದಾನೆ. ಈ ವೇಳೆ ಡ್ಯಾನ್ಸ್ ಕ್ಲಾಸ್ನಲ್ಲಿ ಯುವತಿಗೆ ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳನ್ನ ತೋರಿಸಿದ್ದಾನೆ. ನೀರು ಕುಡಿದ ಬಳಿಕ ಯುವತಿ ಪ್ರಜ್ಞೆ ತಪ್ಪಿದ್ದಾಗ ಆರೋಪಿ ಪವನ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
Advertisement
ಇದೀಗ ಸಂತ್ರಸ್ತ ಯುವತಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಪವನ್ ವಿರುದ್ಧ ಐಪಿಸಿ ಸೆಕ್ಷನ್ 354 (ಲೈಂಗಿಕ ಕಿರುಕುಳ), 376(ಅತ್ಯಾಚಾರ) ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದು, ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.