Connect with us

ದಾನಮ್ಮ ಮೇಲೆ ರೇಪ್ ಆಗಿಲ್ಲ – ಇಡೀ ಪ್ರಕರಣವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಹಿರಿಯ ಐಪಿಎಸ್

ದಾನಮ್ಮ ಮೇಲೆ ರೇಪ್ ಆಗಿಲ್ಲ – ಇಡೀ ಪ್ರಕರಣವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟ ಹಿರಿಯ ಐಪಿಎಸ್

ವಿಜಯಪುರ: ರಾಜ್ಯಾದ್ಯಂತ ಸದ್ದು ಮಾಡಿದ್ದ ಅಪ್ರಾಪ್ತ ಬಾಲಕಿ ದಾನಮ್ಮ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಮೆಗಾ ಟ್ವಿಸ್ಟ್ ಸಿಕ್ಕಿದ್ದು, ದಾನಮ್ಮ ಮೇಲೆ ಅತ್ಯಾಚಾರವೇ ನಡೆದಿಲ್ಲ ಎನ್ನುವ ವಿಚಾರ ಈಗ ಲಭ್ಯವಾಗಿದೆ.

ಉತ್ತರ ವಲಯ ಐಜಿಪಿ ಆಗಿದ್ದ ರಾಮಚಂದ್ರರಾವ್ ಫೋನ್ ಕರೆಯಲ್ಲಿ ಈ ವಿಚಾರವನ್ನು ತಿಳಿಸಿದ್ದು. ಆರೋಪಿಯಾಗಿರುವ ದೀಪಕ್ ಮುಳಸಾವಳಗಿ ಜೊತೆ ಆಕೆಗೆ ಸ್ನೇಹವಿತ್ತು. ದಾನಮ್ಮ  ಮತ್ತು ದೀಪಕ್ ಸಹಮತದ ಸೆಕ್ಸ್ ನಡೆಸಿದ್ದರು. ಸೆಕ್ಸ್ ನಡೆಸಿದ ಬಳಿಕ ಆಕೆ ಪ್ರಜ್ಞೆ ತಪ್ಪಿ, ನಂತರ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ.

ದಾನಮ್ಮ ಹೋರಾಟ ಸಮಿತಿಯ ಭಾಸ್ಕರ್ ಪ್ರಸಾದ್ ಅವರ ಜೊತೆಗೆ ರಾಮಚಂದ್ರರಾವ್ ಫೋನ್ ಕರೆಯ ಆಫ್ ದಿ ರೆಕಾರ್ಡ್ ಮಾತನಾಡಿರುವ ಸಂಭಾಷಣೆಯನ್ನು ಇಲ್ಲಿ ನೀಡಲಾಗಿದೆ.

ಭಾಸ್ಕರ್: ಸರ್ ಹಲೋ..
ರಾಮಚಂದ್ರರಾವ್: ಯಾರು?
ಭಾಸ್ಕರ್: ಸರ್ ನಮಸ್ತೆ ನಾನು ಪ್ರಸಾದ್ ಅಂತಾ ನ್ಯೂಸ್ 91 ಎಡಿಟರ್ ಮಾತೋಡೊದು
ರಾಮಚಂದ್ರರಾವ್: ಹೇಳಿ ಪ್ರಸಾದ್
ಭಾಸ್ಕರ್: ದಾನಮ್ಮಳ ಪೋಸ್ಟ್ ಮಾರ್ಟಂ ಪ್ರಕರಣದ್ದು ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಿದ್ಯಾ ಸಾರ್?
ರಾಮಚಂದ್ರರಾವ್: ಇಲ್ಲ ಇನ್ನು ಕಳಿಸಬೇಕು.
ಭಾಸ್ಕರ್: ಅಲ್ಲ ಸರ್ ಆಕೆ ಮರಣ ಹೊಂದಿರೋದು ಹೇಗೆ ಅಂತಾ? ಯಾವ ಕಾರಣಕ್ಕೆ ಮರಣ ಹೊಂದಿದ್ದಾಳೆ ಅಂತಾ? ನಿಮಗೆ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದಿಯಾ ಅಂತ?

ರಾಮಚಂದ್ರರಾವ್: ಪೋಸ್ಟ್ ಮಾರ್ಟಂ ರಿಪೋರ್ಟ್ ಇನ್ನು ಅಫಿಶೀಯಲ್ ಆಗಿ ಕೊಟ್ಟಿಲ್ಲ, ಆದ್ರೆ ವೈದ್ಯರು ನನ್ನ ಜೊತೆ ಎಲ್ಲವನ್ನು ಮಾತನಾಡಿದ್ದಾರೆ.
ಭಾಸ್ಕರ್: ಓಕೆ…ಓಕೆ… ಕೆಲ ನ್ಯೂಸ್ ಪೋರ್ಟಲ್ ಗಳಲ್ಲಿ ಆಕೆ ಉಸಿರು ಕಟ್ಟಿ ಸತ್ತಿದ್ದಾಳೆ ಮತ್ತೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಅಂತಾ ಪೋಲಿಸ್ ನವರು ವರದಿ ಕೊಡತಿದ್ದಾರೆ ಅಂತಾ ಬರ್ತಾ ಇದೆ ಸರ್. ಪೋಸ್ಟ್ ಮಾರ್ಟಂ ವರದಿ ಬರದೆ ಈ ರೀತಿ ಹೇಳಿಕೆ ಕೊಡ್ತಾ ಇದ್ದಿರಲ್ಲ ಅದು ಹೇಗೆ? ಏನು ಅಂತಾ?
ರಾಮಚಂದ್ರರಾವ್: ಈಗ ಸಿಐಡಿಗೆ ಎಲ್ಲ ಹ್ಯಾಂಡ್ ಓವರ್ ಮಾಡಿದ್ದೀವಿ. ಇಲ್ಲಾ ಅಂದ್ರೆ ನಿಮಗೆ ಎಲ್ಲ ನಾನೇ ಕ್ಲೀಯರ್ ಆಗಿ ಹೇಳ್ಬಿಡ್ತಾ ಇದ್ದೆ.
ಭಾಸ್ಕರ್: ಅದೇ ಸರ್ ವರದಿ ಬರದೆ ಹೇಗೆ ಅಂತ?

ರಾಮಚಂದ್ರರಾವ್: ಈಗ ಆಫ್ ದಿ ರೆಕಾರ್ಡ್ ಹೇಳಿ ಅಂದ್ರೆ ಹೇಳ್ತಿನಿ.
ಭಾಸ್ಕರ್: ಓಕೆ ಹೇಳಿ ಸರ್
ರಾಮಚಂದ್ರರಾವ್: ಆದರೆ ರೆಕಾರ್ಡ್ ಮಾಡಬೇಡಿ.
ಭಾಸ್ಕರ್: ಹೇಳಿ ಸರ್
ರಾಮಚಂದ್ರರಾವ್: ಒಂದು ಅವಳು ಅಪ್ರಾಪ್ತೆ ಅದು ನಿಜ. ಅವಳು ಸತ್ತಿದ್ದಾಳೆ ಅದು ನಿಜ. ಆದರೆ ಕಳೆದ ಒಂದು ವರ್ಷದಿಂದ ಅವಳು ದೀಪಕ್ ಮುಳಸಾವಳಗಿ ಜೊತೆ ಸ್ನೇಹ ಹೊಂದಿದ್ದಳು. ಇದು ನನ್ನ ಹೇಳಿಕೆ ಅಲ್ಲ ಇದು ವೈದ್ಯರು ಪರೀಕ್ಷಿಸಿದಾಗ ಹೇಳಿದ್ದು. ಅವರು ಹೇಳೋದೇನೆಂದರೆ ಅವಳು ಪ್ರೆಗ್ನೆಂಟ್ ಇದ್ದಳು ಅಂತಾ. ಪ್ರೆಗ್ನೆನ್ಸಿ ಹೋಗೋದಕ್ಕೆ ಕೆಲ ಮಾತ್ರೆ ಕೂಡ ತಗೆದುಕೊಂಡಿದ್ದಳು.
ಭಾಸ್ಕರ್: ಓಕೆ ಸರ್
ರಾಮಚಂದ್ರರಾವ್: ಆದ್ರೆ ಪ್ರೆಗ್ನೆನ್ಸಿ ಸಂಪೂರ್ಣವಾಗಿ ಕ್ಲಿಯರ್ ಆಗಿರಲಿಲ್ಲ. ಆಗ ಅದು ಲಂಗ್ಸ್ ಮೇಲೆ ಪರಿಣಾಮ ಬೀರಿ, ಲಂಗ್ ಇನ್ಫೆಕ್ಷನ್ ಅಂಥರಾ ನಿಮೋನಿಯಾ ತರಹ ಆಗಿದೆ.
ಭಾಸ್ಕರ್: ಓಕೆ ಸರ್

ರಾಮಚಂದ್ರರಾವ್: ಇನ್ನು ಘಟನೆ ನಡೆದ ಹಿಂದಿನ ದಿನ ರಾತ್ರಿ ಅಪ್ರಾಪ್ತೆ ದಾನಮ್ಮ ದೀಪಕ್ ಮುಳಸಾವಳಗಿಗೆ ಕಾಲ್ ಮಾಡಿ ನಾಳೆ 10 ಗಂಟೆಗೆ ಬನ್ನಿ ನಾವು ತ್ರಿಬಲ್ ಎಕ್ಸ್ ಮಾಡೋಣ ಅಂತಾ ಹೇಳ್ತಾಳೆ. ಅಂದ್ರೆ ಸೆಕ್ಸ್ ಗೆ ಬನ್ನಿ ಅನ್ನೋದನ್ನೆ ಅವರು ತ್ರಿಬಲ್ ಎಕ್ಸ್ ಅಂತಾ ಕೋಡ್ ವರ್ಡ್ ಬಳಸ್ತಿದ್ರು.
ಭಾಸ್ಕರ್: ಸರಿ ಸರ್ ಸರಿ ಸರ್
ರಾಮಚಂದ್ರರಾವ್: ಆಗ ಹುಡುಗ ನಾಳೆ 10 ಗಂಟೆಗೆ ಆಗಲ್ಲ ಸ್ವಲ್ಪ ಕೆಲಸ ಇದೆ ಮಧ್ಯಾಹ್ನ 1 ಗಂಟೆಗೆ ಬರ್ತೇನೆ ಅಂತಾ ಹೇಳ್ತಾನೆ.
ಭಾಸ್ಕರ್: ಓಕೆ…ಓಕೆ
ರಾಮಚಂದ್ರರಾವ್: ಆಗ 1 ಗಂಟೆಗೆ ಶಾಲೆಯ ಲಂಚ್ ಬ್ರೇಕ್ ನಲ್ಲಿ ನನಗೆ ಹಸಿವಿಲ್ಲ ಬೇರೆ ಕೆಲಸ ಇದೆ ಅಂತಾ ಹೇಳಿ ಅವಳು ಶಾಲೆಯಿಂದ ಹೊರಗೆ ಬರ್ತಾಳೆ.
ಭಾಸ್ಕರ್: ಓ..ಓ.. ಓಕೆ

ರಾಮಚಂದ್ರರಾವ್: ಆಗ ಹುಡುಗ ಕೂಡ ಅವಳ ಶಾಲೆಯವರೆಗೆ ಫ್ರೆಂಡ್ ಬೈಕಲ್ಲಿ ಡ್ರಾಪ್ ತಗೆದುಕೊಳ್ತಾನೆ. ಆ ಹುಡುಗ, ಆಕೆ ಹಾಗೂ ಇಬ್ಬರು ಮತ್ತು ಅನುಷಾ ಅಂತಾ. ಈಗೇನು ಕಿಡ್ನಾಪ್ ಆಯ್ತು, ಮೂರು ಜನರು ಹುಡುಗರು ಬಂದು ಕಿಡ್ನಾಪ್ ಮಾಡಿದರು ಅಂತಾ ಹೇಳ್ತಿದ್ದಾಳೆ ಇವಳು, ದಾನಮ್ಮ ಮತ್ತೆ ಆ ಹುಡುಗ ಮೂವರು ನಡೆದುಕೊಂಡು ಶಾಲೆಯಿಂದ 200 ಮೀಟರ್ ದೂರದಲ್ಲಿರೊ ದೀಪಕ್‍ನ ಆಂಟಿ ಮನೆಗೆ ಮೂವರು ನಡೆದುಕೊಂಡು ಹೋಗುತ್ತಾರೆ. ದೀಪಕ್ ನ ಆಂಟಿ ವಿಧವೆನೋ, ಡಿವೋರ್ಸೋ ಆಗಿರೋ ಆಂಟಿ ಮನೆಗೆ ಹೋಗುತ್ತಾರೆ.
ಭಾಸ್ಕರ್: ಆಂಟಿ ಹೆಸರು ಸರ್
ರಾಮಚಂದ್ರರಾವ್: ಅದು ಅವಳ ಹೆಸರು ಗೊತ್ತಿಲ್ಲ ನನಗೆ
ಭಾಸ್ಕರ್: ಓಕೆ ಸರ್…. ಓಕೆ….

ರಾಮಚಂದ್ರರಾವ್: ಆಂಟಿ ಮನೆಗೆ ಹೋಗಿ ಮುಂದಿನ ಬಾಗಿಲು ಮುಚ್ಚಿ ಹಿಂದಿನ ಬಾಗಿಲಿನಿಂದ ಮನೆ ಒಳಗೆ ಹೋಗ್ತಾರೆ. ಆಗ ಬೇಗ ಮುಗಿಸಿ ಅಂತಾ ಹೇಳಿ ದೀಪಕ್ ಆಂಟಿ ಮತ್ತು ಅನುಷಾ ಹೊರಗಡೆ ಕಾಯ್ತಾ ಕೂಡ್ತಾರೆ.
ಭಾಸ್ಕರ್: ಓಕೆ ಸರ್
ರಾಮಚಂದ್ರರಾವ್: ನಂತರ ಮನೆಯ ಮಧ್ಯದ ಕೋಣೆ ಹೋಗಿ ಚಾಪೆ ಹಾಕಿಕೊಂಡು ಸೆಕ್ಸ್ ಮಾಡ್ತಾರೆ. ಅವನು ಕಳೆದ ಬಾರಿ ಪ್ರೆಗ್ನೆಂಟ್ ಆಗಿ ಅಂತಾ ಹೇಳಿ ಅವನು ಎರಡು ಕಾಂಡೋಮ್ ತಂದಿರುತ್ತಾನೆ. ಪರಿಶೀಲನೆ ವೇಳೆ ಅಲ್ಲಿ ಎರಡು ಕಾಂಡೋಮ್ ಕೂಡ ಸಿಕ್ಕಿದೆ. ಇನ್ನು ಸೆಕ್ಸ್ ಮಾಡಿ ಸ್ವಲ್ಪ ನೀರು ಕುಡಿಯೋಣ ಅಂತಾ ಅವನು ಎದ್ದು ಬೇರೆ ರೂಮ್ ಗೆ ಬರ್ತಾನೆ.
ಭಾಸ್ಕರ್: ಹಾ ಹಾ ಓಕೆ ಸರ್ ಓಕೆ

ರಾಮಚಂದ್ರರಾವ್: ಆಗ ಅವಳು ಸ್ವಲ್ಪ ಪ್ರಜ್ಞೆ ತಪ್ಪಿದ ಥರ ಆಗ್ತಾಳೆ. ಆಗ ಅವನು ಏನಾಗಿದೆ ಅಂತಾ ಕೇಳ್ತಾ ಅವಳನ್ನ ಎಬ್ಬಿಸೋಕೆ ಹೋಗ್ತಾನೆ ಅವಳು ಮಾತಾಡಲ್ಲ. ಆಗ ಅವಳಿಗೆ ನೀರು ಕುಡಿಸೋಕೆ ಹೋಗ್ತಾನೆ. ಆಗ ಅವಳು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆಗ ಗಾಬರಿ ಆಗಿ ಹೊರಗಡೆ ಇದ್ದ ಆಂಟಿ ಮತ್ತು ಅನುಷಾಳನ್ನ ಕರಿತಾನೆ.
ಭಾಸ್ಕರ್: ಓಕೆ ಓಕೆ
ರಾಮಚಂದ್ರರಾವ್: ಅವರಿಬ್ಬರು ಒಳಗಡೆ ಬಂದು ನೊಡಿ ತಕ್ಷಣ ಅವಳು ಬೆತ್ತಲಾಗಿ ಮಲಗಿರ್ತಾಳೆ. ಅವಳಿಗೆ ಮೊದಲು ಬಟ್ಟೆ ಹಾಕಿ ಎಬ್ಬಿಸಲು ಪ್ರಯತ್ನಿಸ್ತಾರೆ. ಆಗ ಅವಳು ಉಸಿರಾಡಿಸುತ್ತಿರ್ತಾಳೆ. ಆದ್ರೆ ಮಾತಾಡಲ್ಲ. ಆಗ ದೀಪಕ್ ಗಾಬರಿ ಆಗಿ ಈಥರ ಮಾಡೋಕೆ ಬಂದಿದ್ದೆ. ಈಥರ ಆಗಿದೆ ಆಸ್ಪತ್ರೆ ಕರೆದೊಯ್ಯಬೇಕು ಸ್ವಲ್ಪ ಬನ್ನಿ ಅಂತಾ ಫ್ರೆಂಡ್ಸ್ ಕರೆ ಮಾಡ್ತಾನೆ.
ಭಾಸ್ಕರ್: ಓಕೆ ಓಕೆ

ರಾಮಚಂದ್ರರಾವ್: ಅಷ್ಟೊತ್ತಿಗೆ ಅವನ ಫ್ರೆಂಡ್ಸ್ ಅಲ್ಲಿಗೆ ಬರ್ತಾರೆ. ಆದ್ರೆ ಅನುಷಾ ತುಂಬಾ ಜಾಣೆ. 200 ಮೀಟರ್ ದುರದಲ್ಲೇ ಇರೋ ಶಾಲೆಗೆ ಹೋಗಿ ಅನುಷಾ ಶಿಕ್ಷಕರ ಎದುರು ಯಾರೊ ಮೂವರು ಬಂದಿದ್ರು ದಾನಮ್ಮನ್ನ ಕಿಡ್ನಾಪ್ ಮಾಡಿಕೊಂಡು ಹೋದರು ಅಂತಾ ಹೇಳ್ತಾಳೆ.
ಭಾಸ್ಕರ್: ಹಾ ಹಾ
ರಾಮಚಂದ್ರರಾವ್: ಆಗ ಅವರು ಓಡಿ ಆ ಮನೆಗೆ ಬರ್ತಾರೆ. ನಂತರ ಆಸ್ಪತ್ರೆ ಕೊಂಡೊಯ್ತಾರೆ. ಅಲ್ಲಿ ಅವಳು ಸತ್ತಿರೋದಾಗಿ ಹೇಳ್ತಾರೆ. ನಂತರ ಫೋಟೊ ತಗೆದು ಎಲ್ಲವನ್ನ ಪರೀಕ್ಷೆ ಮಾಡಿದಾಗ ಅದೇನು ಪ್ರೆಗ್ನೆನ್ಸಿ ಮಾತ್ರೆಗಳು ತಗೆದುಕೊಂಡು ಅದು ಪೂರ್ಣ ವಾಶ್ ಆಗಿರೋಲ್ವೋಲ್ಲ. ಆದ್ರಿಂದ ಸೆಕ್ಸ್ ಮಾಡುವಾಗ ಬ್ಲೀಡಿಂಗ್ ಆಗಿರುತ್ತೆ. ಆದ್ದರಿಂದ ಉಸಿರಾಟದ ತೊಂದರೆಯಿಂದ ಅವಳು ಸಾವನ್ನಪ್ಪಿದ್ದಾಳೆ ಇದು ನಿಜ.
ಭಾಸ್ಕರ್: ಓಕೆ ಸರ್.

ರಾಮಚಂದ್ರರಾವ್: ಈಗ ಹುಡುಗಿ ಮನೆಯವರು ಅವಳಿಗೆ ಫೋನೆ ಕೊಟ್ಟಿಲ್ಲ ಅಂತಾ ಹೇಳ್ತಾರೆ. ಆದ್ರೆ ಅವಳು ಫೋನ್ ನಲ್ಲಿ ಮಾತನಾಡಿದ ರೆಕಾರ್ಡ್ ಎಲ್ಲ ಸಿಕ್ಕಿದೆ. ದೀಪಕ್ ಮೊಬೈಲ್ ನಲ್ಲಿ ಇವರಿಬ್ಬರ ಸಂಭಾಷಣೆ ಎಲ್ಲ ಸಿಕ್ಕಿದೆ.
ಭಾಸ್ಕರ್: ಓಕೆ ಸರ್ ಓಕೆ
ರಾಮಚಂದ್ರರಾವ್: ಆಡಿಯೋದಲ್ಲಿ ಅವರ ರೊಮ್ಯಾಂಟಿಕ್ ಮಾತುಗಳು ಎಲ್ಲ ಸಿಕ್ಕಿವೆ. ಇನ್ನು ಅನುಷಾ ಏನು ಯಾರೊ ಬಂದ್ರು, ದಾನಮ್ಮನ್ನ ಕಿಡ್ನ್ಯಾಪ್ ಮಾಡಿದರು. ನಾನು ಕಿರುಚಾಡಿದೆ ಅಂತಾ ಹೇಳ್ತಿದ್ದಾಳೆ ಅದೆಲ್ಲ ಏನಿಲ್ಲ. ಅವಳು ಅಪ್ರಾಪ್ತೆ, ಹೀಗಾಗಬಾರ್ದಿತ್ತು ಅದೆಲ್ಲ ಒಪ್ಪೋದೆ. ಆದ್ರೆ ಇದೆ ನಿಜ ಸ್ಥಿತಿ.

ಭಾಸ್ಕರ್: ಓಕೆ ಆದ್ರೆ ಏನಿಲ್ಲ ಈಗ ನಮ್ಮ ನ್ಯೂಸ್ ಚಾನಲ್ ಗೆ ಬಂದ ಅನುಮಾನಗಳು ಏನೆಂದ ಮರಣೋತ್ತರ ಪರೀಕ್ಷೆ ವರದಿ ಇನ್ನು ಬಂದಿಲ್ಲ. ಅದಕ್ಕಿಂತಲು ಮೊದಲೇ ಸಾಮೂಹಿಕ ಅತ್ಯಾಚಾರ ಅಲ್ಲ ಅಂತಾ ಬರ್ತಿದೆ.
ರಾಮಚಂದ್ರರಾವ್: ಇಲ್ಲ ಎಸ್ಪಿ, ಡಿಸಿ ನಾನು ಎಲ್ಲರು ಇದ್ವಿ ಆಗ ವೈದ್ಯರು ಬಂದು ಈ ಎಲ್ಲ ವಿವರವನ್ನು ವಿವರಿಸಿದ್ದಾರೆ.
ಭಾಸ್ಕರ್: ಹೌದು ಸರ್ ಇಷ್ಟು ದೊಡ್ಡ ಇತಿಹಾಸ ಹೇಗೆ ತಿಳಿತು ಸರ್.

ರಾಮಚಂದ್ರರಾವ್: ಮೊದಲನೇ ಆರೋಪಿ ಸಿಕ್ಕಿರಲಿಲ್ಲ. ಯಾವಾಗ ಮೊದಲನೆ ಆರೋಪಿ ಯಾವನು ಇದನ್ನ ಮಾಡಿದ್ದಾನೋ ಅವನು ಸಿಕ್ಕ ಮೇಲೆ ಅವನ ಮೊಬೈಲ್ ನಿಂದ ಎಲ್ಲ ಸಂಭಾಷನೆ ಕೇಳಿದ್ದ ಮೇಲೆ ಗೊತ್ತಾಗಿದ್ದು. ಇನ್ನು ಅವಳು ಇನ್ನು ಇಬ್ಬರ ಜೊತೆ ಕೂಡ ಇದೆ ರೀತಿ ರೋಮಾಂಟಿಕ್ ಆಗಿ ಮಾತನಾಡಿದ ಸಂಭಾಷಣೆ ಕೂಡ ಸಿಕ್ಕಿದೆ. ಅವಳ ಮಾತುಗಳನ್ನು ನೀವು ಕೇಳಿದರೆ ನೀವು ಕೂಡ ತಲೆ ಬಾಗಿಸ್ತಿರಿ. ಇಲ್ಲಿ ಹೊರಗಡೆ ಕಂಡಿದ್ದೆ ಬೇರೆ. ಆದ್ರೆ ಒಳಗಡೆ ಇರೋದೆ ಬೇರೆ.
ಭಾಸ್ಕರ್: ಹಾ ಹಾ ಓಕೆ ಸರ್
ರಾಮಚಂದ್ರರಾವ್: ಈ ತರಹ ಆಗಬಾರದಿತ್ತು ಅದಕ್ಕೆ ನಮಗೂ ಸಿಂಪತಿ ಇದೆ. ಆದ್ರೆ ಇದು ನಿಜಸ್ಥಿತಿ. ಬೇಕಿದ್ರೆ ನೀವು ಡಾಕ್ಟರ್ ರನ ಕರೆಸಿ ಕೇಳಿ ಅವರು ಎಲ್ಲವನ್ನ ಹೇಳ್ತಾರೆ.

ಭಾಸ್ಕರ್: ಹೌದು ಸರ್ ಇಷ್ಟೆಲ್ಲ ಕ್ರಿಟಿಕಲ್ ಇದ್ದಾಗ ದೇಹವನ್ನು ಸುಟ್ಟಿದ್ದು ತಪ್ಪಲ್ವಾ ಸರ್.
ರಾಮಚಂದ್ರರಾವ್: ನೊ ನೋ ಮರಣೋತ್ತರ ಪರೀಕ್ಷೆ ಆಗ ಮೇಲೆ ದೇಹವನ್ನ ಕುಟುಂಬಸ್ಥರಿಗೆ ಒಪ್ಪಿಸಿದ್ದೇವೆ. ನಂತರ ಅವರು ಅವರ ಪದ್ಧತಿಗಳ ಪ್ರಕಾರ ಅಂತ್ಯಕ್ರಿಯೆ ಮಾಡ್ತಾರೆ. ಅದು ನಮಗೆ ಸಂಬಂಧವಿಲ್ಲ. ನಾವು ಏನು ಹೇಳೋಕು ಬರಲ್ಲ.
ಭಾಸ್ಕರ್: ಅಲ್ಲ ಸರ್ ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಏನಾದರು ಪರೀಕ್ಷೆ ಬೇಕಾದ್ರೆ.

ರಾಮಚಂದ್ರರಾವ್: ಅಂತಹ ಪರಿಸ್ಥಿತಿ ಬರೋದಿಲ್ಲವಲ್ಲ. ನಮಗೆ ಆ ವರದಿ ಮೇಲೆ ಡೌಟೆ ಇಲ್ಲವಲ್ಲ.
ಭಾಸ್ಕರ್: ಸಾರ್ವಜನಿಕರ ಒತ್ತಾಯಕ್ಕೆ ಮತ್ತೆ ಪರೀಕ್ಷೆ ನಡೆಸಬೆಕಾಗಿ ಬಂದ್ರೆ ಸರ್
ರಾಮಚಂದ್ರರಾವ್: ಇಲ್ಲ ಇಲ್ಲ ಮರಣೋತ್ತರ ಪರೀಕ್ಷೆ ನಡೆಯುವಾಗ ವಿಡಿಯೋ ಮಾಡಿರ್ತಿವಿ. ಫೋಟೊ ತಗೆದಿರ್ತಿವಿ. ಇನ್ನು ಆ ದಿನ ಮಾನವ ಹಕ್ಕು ಆಯೋಗದವರು ಇದ್ದರು. ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಮಾಡಿದ್ದೆವೆ. ಇದರಲ್ಲಿ ಮುಚ್ಚಿ ಹಾಕಲು ಏನಿದೆ?
ಭಾಸ್ಕರ್: ಆಯ್ತು ಸರ್ ನಾನು ನಿಮ್ಮನ್ನ ಬಂದು ಭೇಟಿ ಆಗಿ ಮಾಹಿತಿ ಪಡಿಬಹುದಾ ಸರ್.

ರಾಮಚಂದ್ರರಾವ್: ಖಂಡಿತಾ.ಆದ್ರೆ ನಾನೀಗ ಗದಗದಲ್ಲಿದ್ದೇನೆ.
ಭಾಸ್ಕರ್: ಓಕೆ ಸರ್
ರಾಮಚಂದ್ರರಾವ್: ಇನ್ನು ಅನುಷಾ ಇದ್ದಾಳಾ ಅವಳದು ಸೇಮ್ ಕ್ಯಾರೆಕ್ಟರ್. ಅವಳಿಗು ಮೂರು ಜನ ಬಾಯ್ ಫ್ರೆಂಡ್ಸ ಇದ್ದಾರೆ. ಅವಳ ಫೋನ್ ಸಂಭಾಷಣೆ ನೋಡಿದರು ಅವಳು ರೋಮಾಂಟಿಕ್ ಆಗಿ ಮಾತನಾಡಿದ್ದಾಳೆ. ಇದನೆಲ್ಲ ಅವರು ಯಾಕೆ ರೆಕಾರ್ಡ್ ಯಾಕೆ ಮಾಡಿದ್ದಾರೋ ಗೊತ್ತಿಲ್ಲ.
ಭಾಸ್ಕರ್: ಓಕೆ ಸರ್

ರಾಮಚಂದ್ರರಾವ್: ಇನ್ನು ಇದರ ಬಗ್ಗೆ ಅನುಷಾ ನಾ ವಿಚಾರಣೆ ಮಾಡೋಕೆ ಕುಟುಂಬಸ್ಥರು ಬಿಡುತ್ತಿಲ್ಲ. ಏನು ಮಾಡೋದು ಹೇಳಿ?
ಭಾಸ್ಕರ್: ಓಕೆ ಸರ್ ಓಕೆ ಸರ್
ರಾಮಚಂದ್ರರಾವ್: ಸುಮ್ನೆ ಇದನ್ನ ರಾಜಕೀಯವಾಗಿ ಕೆಲವರು ಮನಬಂದಂತೆ ಮಾತನಾಡುತ್ತಿದ್ದಾರೆ.
ಭಾಸ್ಕರ್: ಎಸ್ ಸರ್ ಎಸ್ ಸರ್
ರಾಮಚಂದ್ರರಾವ್: ಇನ್ನು ಶೋಭಾ ಕರಂದ್ಲಾಜೆ ಕೂಡ ಬಂದು ಗ್ಯಾಂಗ್ ರೇಪ್ ಆಗಿದೆ ಅಂತಾ ಮಾತನಾಡಿದ್ದಾರೆ. ಆದ್ರೆ ನಂತರ ಎಸ್ಪಿ ಅವರನ್ನ ಕರೆದು ಮಾತನಾಡಿದ್ದಾರೆ. ಆಗ ಎಸ್ಪಿಯವರು ಎಲ್ಲ ಮಾಹಿತಿ ನೀಡಿ ಸಾಕ್ಷಿಗಳನ್ನು ತೋರಿಸಿದ್ದಾರೆ. ಆಗ ಅವರು ಕೂಡ ಸತ್ಯವನ್ನ ಅರಿತು ಸುಮ್ಮನಾದರು. ಆದ್ರೆ ಕೆಲವರು ಇದನ್ನೆ ಬಂಡವಾಳ ಮಾಡಿಕೊಳ್ಳುತ್ತಾರೆ ಏನು ಮಾಡೋದು?
ಭಾಸ್ಕರ್: ಓಕೆ ಸರ್ ಧನ್ಯವಾದ
ರಾಮಚಂದ್ರರಾವ್: ಬೇಕಿದ್ದರೆ ಎರಡು ಮೂರು ದಿನ ತಡೆದುಕೊಳ್ಳಿ, ಬೇಕಿದ್ದರೆ ಬರೆದು ಹೇಳಿಕೆ ಕೊಡುತ್ತೇನೆ.
ಭಾಸ್ಕರ್: ಓಕೆ ಸರ್ ಧನ್ಯವಾದ.

https://www.youtube.com/watch?v=IH2JRDOUdTU

https://www.youtube.com/watch?v=09cJdWJnoQ4

 

Advertisement
Advertisement