ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಡಾನಾ ಚಂಡಮಾರುತದ (Dana Cyclone) ಪರಿಣಾಮ ಒಡಿಶಾ, ಪಶ್ಚಿಮ ಬಂಗಾಳ ಸೇರಿ 5 ರಾಜ್ಯಗಳ 10 ಲಕ್ಷ ಜನರನ್ನು ಸುರಕ್ಷಿತ ಸ್ಥಳಾಂತರಿಸಲಿದ್ದಾರೆ.
ಡಾನಾ ಚಂಡಮಾರುತದಿಂದ ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಛತ್ತೀಸ್‌ಗಢದಲ್ಲಿ ಅಪಾಯವಿದೆ ಎಂದು ಭಾರತೀಯ ಹವಾಮಾನ ಇಲಾಖೆ ( Indian Meteorological Department) ಎಚ್ಚರಿಕೆ ನೀಡಿದೆ.ಇದನ್ನೂ ಓದಿ: ಬೆಂಗಳೂರು ಕಟ್ಟಡ ಕುಸಿತ- ಪಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ
Advertisement
Advertisement
ಈಗಾಗಲೇ ಒಡಿಶಾದಿಂದ 3 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದ್ದು, ಬಂಗಾಳದ 1.14 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಚಂಡಮಾರುತ ತ್ರೀವ ರೂಪ ಪಡೆದುಕೊಂಡಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಲಾಗಿದೆ.
Advertisement
ಗಾಳಿಯ ವೇಗ ಗಂಟೆಗೆ 120 ಕಿ.ಮೀ. ತಲುಪುವ ಸಾಧ್ಯತೆಯಿದ್ದು, ಪಶ್ಚಿಮ ಬಂಗಾಳದಲ್ಲಿ ವಿಶೇಷವಾಗಿ ಉತ್ತರ ಮತ್ತು ದಕ್ಷಿಣ 24 ಪರಗಣ, ಪುರ್ಬಾ ಮತ್ತು ಪಶ್ಚಿಮ ಮೇದಿನಿಪುರ್, ಝಾರ್‌ಗ್ರಾಮ್, ಕೋಲ್ಕತ್ತಾ, ಹೌರಾ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆಯಾಗುವ ಸಾಧ್ಯತೆಯಿದೆ.
Advertisement
ಚಂಡಮಾರುತದ ಹಿನ್ನೆಲೆಯಲ್ಲಿ ಎರಡು ನೆರೆಯ ರಾಜ್ಯಗಳ ಮೂಲಕ ಓಡುವ ಸುಮಾರು 300 ರೈಲುಗಳನ್ನು ರದ್ದುಗೊಳಿಸಲಾಗಿದೆ. ಜೊತೆಗೆ ಕೋಲ್ಕತ್ತಾ ವಿಮಾನ ನಿಲ್ದಾಣವು ಇಂದು ಸಂಜೆ 6 ರಿಂದ ನಾಳೆ ಬೆಳಿಗ್ಗೆ 9 ರವರೆಗೆ ಹಾಗೂ ಭುವನೇಶ್ವರ ವಿಮಾನ ನಿಲ್ದಾಣವು ಇಂದು ಸಂಜೆ 5 ರಿಂದ ನಾಳೆ ಬೆಳಿಗ್ಗೆ 9 ರವರೆಗೆ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಎನ್‌ಡಿಆರ್‌ಎಫ್ ಒಟ್ಟು 56 ತಂಡಗಳನ್ನು ನಿಯೋಜಿಸಲಾಗಿದ್ದು, ಒಡಿಶಾದಲ್ಲಿ 20 ತಂಡಗಳು ಹಾಗೂ ಪಶ್ಚಿಮ ಬಂಗಾಳದ 17 ತಂಡಗಳನ್ನು ನಿಯೋಜಿಸಲಾಗಿದೆ.
ಚಂಡಮಾರುತವಾಗಿ ಬದಲಾಗಿರುವ ಡಾನಾ ಗುರುವಾರ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ರಾತ್ರಿ ವೇಳೆಗೆ ಒಡಿಶಾದ ಪುರಿ ಮತ್ತು ಬಂಗಾಳದ ಸಾಗರ ದ್ವೀಪಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ. ಒಂದೊಮ್ಮೆ ಚಂಡಮಾರುತ ಪಥ ಬದಲಿಸಿದರೆ ಬಾಂಗ್ಲಾ ದೇಶಕ್ಕೆ ಅಪಾಯ ಎದುರಾಗಬಹುದು ಎನ್ನಲಾಗಿದೆ. ಒಡಿಶಾ, ಆಂಧ್ರ, ಬಂಗಾಳ ಹಾಗೂ ಇನ್ನಿತರ ರಾಜ್ಯಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಇದನ್ನೂ ಓದಿ: ಮುಧೋಳದಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ