ಬಾಗಲಕೋಟೆ: ವರುಣನ ಅಬ್ಬರಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳ ಹಳ್ಳ-ಕೊಳ್ಳ, ನದಿ-ತೊರೆಗಳು ಮೈದುಂಬಿಕೊಂಡಿವೆ. ಅದೇ ರೀತಿ ಬಾಗಲಕೋಟೆಯ ದಮ್ಮೂರು ಗ್ರಾಮದ ಜಲಪಾತದಲ್ಲಿ ಜನ ಮಿಂದೇಳ್ತಿದ್ದಾರೆ. ಈ ನೀರಿನಲ್ಲಿ ಸ್ನಾನ ಮಾಡಿದ್ರೆ ರೋಗಗಳು ಗುಣಮುಖವಾಗ್ತವೆ ಅನ್ನೋ ನಂಬಿಕೆ ಇದೆ.
ಮೇಲಿಂದ ಧುಮ್ಮಿಕ್ಕುತ್ತಿರೋ ಈ ನೀರಿನ ಬುಡದಲ್ಲಿ ಜನ ಕುಳಿತು ಸ್ನಾನ ಮಾಡುತ್ತಾರೆ. ಯಾಕಂದ್ರೆ ಇದು ಬರೀ ಮೋಜಿನ ಸ್ನಾನವಲ್ಲ. ಬದಲಿಗೆ ಸಂಜೀವಿನಿ ಸ್ನಾನ. ಯಾಕಂದ್ರೆ ಈ ನೀರಿನಲ್ಲಿ ಸ್ನಾನ ಮಾಡಿದ್ರೆ ಸಕಲ ರೋಗಗಳು ಗುಣಮುಖವಾಗ್ತವಂತೆ.
Advertisement
ಬಾಗಲಕೋಟೆ ಜಿಲ್ಲೆಯ ದಮ್ಮೂರು ಗ್ರಾಮದ ಹೊರ ವಲಯದಲ್ಲಿದೆ ಈ ಮಿನಿ ಜಲಪಾತ. ದಿಡಿಗಿನ ಬಸವೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆ ಬೆಟ್ಟದ ಮಧ್ಯೆ ಗಿಡಗಂಟೆಗಳು-ಬೇರುಗಳ ಮಧ್ಯೆ ಹರಿದು ಬರೋ ಈ ನೀರು ದಿವ್ಯೌಷಧವನ್ನ ಒಳಗೊಂಡಿದ್ದು, ಈ ನೀರಿನಲ್ಲಿ ಸ್ನಾನ ಮಾಡಿದ್ರೆ ರೋಗರುಜಿನಗಳು ಗುಣಮುಖವಾಗ್ತವೆ ಅಂತಾರೆ ಸ್ಥಳೀಯರು.
Advertisement
ಜನ ಯಾವುದೇ ಭೇದ-ಭಾವವಿಲ್ಲದೆ ಸ್ನಾನ ಮಾಡಿ ನಂತರ ಬಸವೇಶ್ವರನ ದರ್ಶನ ಪಡೆದು ಧನ್ಯರಾಗುತ್ತಾರೆ. ರೋಗಗಳಿಗೆ ರಾಮಬಾಣದಂತ ಸ್ನಾನ ಅನ್ನೋದನ್ನ ಬದಿಗಿರಿಸಿದರೂ ಪಿಕ್‍ನಿಕ್‍ಗೆ ಈ ಸ್ಥಳ ಒಳ್ಳೆ ಹಾಟ್ ಸ್ಪಾಟ್ ಸಹ ಹೌದು.
Advertisement
Advertisement