ಸಿಡಿಲು ಬಡಿತಕ್ಕೆ ಮನೆಗಳಿಗೆ ಹಾನಿ- ಸೂಕ್ತ ಪರಿಹಾರಕ್ಕೆ ನಿವಾಸಿಗಳ ಮನವಿ

Public TV
1 Min Read
RAMANAGAR RAIN

ರಾಮನಗರ: ರೇಷ್ಮೆನಾಡು ರಾಮನಗರದಲ್ಲಿ ಮಳೆ (Rain in Ramanagar) ಅಬ್ಬರಕ್ಕೆ ಸಾಕಷ್ಟು ಅವಾಂತರಗಳು ಸೃಷ್ಠಿಯಾಗಿವೆ. ಧಾರಾಕಾರ ಮಳೆ ಹಾಗೂ ಸಿಡಿಲ ಬಡಿತಕ್ಕೆ ಮನೆಗಳು ಜಖಂ ಆಗಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ನಡೆದಿದೆ.

RAMANAGAR RAIN 1

ಗುರುವಾರ ತಡರಾತ್ರಿ ಗುಡುಗು-ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಗೆ ಕನ್ನಮಂಗಲ ಗ್ರಾಮದ ಕುಮಾರ್, ನರಸಿಂಹಯ್ಯ, ರಾಜರಯ್ಯ ಎಂಬುವವರಿಗೆ ಸೇರಿದ ಮನೆಗಳು ಜಖಂಗೊಂಡಿವೆ. ಸಿಡಿಲ ಬಡಿತಕ್ಕೆ ಕಟ್ಟಡದ ಮೇಲ್ಭಾಗಕ್ಕೆ ಹಾನಿಯಾಗಿದ್ದು ಮತ್ತೆರಡು ಮನೆಯ ಹೆಂಚುಗಳು ಪುಡಿಪುಡಿಯಾಗಿವೆ.

RAMANAGAR RAIN 2

ಇನ್ನೂ ಸಿಡಿಲಿನ ತೀವ್ರತೆಗೆ ಮನೆಯ ದಿನಬಳಕೆ ವಸ್ತುಗಳಿಗೂ ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕೆ ನಿವಾಸಿಗಳ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ ಬಿಜೆಪಿ ಶಾಸಕ

 

Share This Article