ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆಯನ್ನು ದಾಲ್ಮಿಯಾ ಭಾರತ್ ಗ್ರೂಪ್ 5 ವರ್ಷಗಳ ಕಾಲ ನಿರ್ವಹಣೆಯ ದತ್ತು ಪಡೆದುಕೊಂಡಿದೆ.
ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಮತ್ತು ಪುರಾತತ್ವ ಇಲಾಖೆಯ ಪ್ರಾಚೀನ ಸ್ಮಾರಕಗಳ ದತ್ತು ಯೋಜನೆಯಡಿ 25 ಕೋಟಿ ರೂ. ನೀಡಿ ದಾಲ್ಮಿಯಾ ಗ್ರೂಪ್ ತನ್ನದಾಗಿಸಿಕೊಂಡಿದೆ.
Advertisement
ಕಾಂಗ್ರೆಸ್ ಟೀಕೆ: ಸದ್ಯ ಕೇಂದ್ರ ಸರ್ಕಾರದ ಈ ನಡೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಭಾರತ ಸಾಂಸ್ಕೃತಿಕ ಸ್ಮಾರಕಗಳ ನಿರ್ವಹಣೆಯನ್ನು ಖಾಸಗಿ ಕಂಪೆನಿಗೆ ವಹಿಸಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರಶ್ನೆಯೊಂದನ್ನು ಜನರ ಮುಂದಿಟ್ಟಿದ್ದು, ಬಿಜೆಪಿ ಎಲ್ಲವನ್ನೂ ಖಾಸಗೀಕರಣಕ್ಕೆ ಒಳಪಡಿಸಲಿದೆ ಎಂದು ಆರೋಪಿಸಿದೆ.
Advertisement
After handing over the Red Fort to the Dalmia group, which is the next distinguished location that the BJP government will lease out to a private entity? #IndiaSpeaks
— Congress (@INCIndia) April 28, 2018
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮಹೇಶ್ ಶರ್ಮಾ, 2017ರ ವಿಶ್ವ ಪ್ರವಾಸೋದ್ಯಮದ ಭಾಗವಾಗಿ ನೋ ಪ್ರಾಫಿಟ್ ಯೋಜನೆ ರೂಪಿಸಿದ್ದು, ಸ್ವಯಂ ಆಗಿ ಐತಿಹಾಸಿಕ ಸ್ಥಳಗನ್ನು ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ. ಈ ಯೋಜನೆಯ ಅಂಗವಾಗಿ ಕೆಂಪು ಕೋಟೆ ನಿರ್ವಹಣೆ ಮಾಡುವ ಹೊಣೆ ದಾಲ್ಮಿಯಾ ಸಂಸ್ಥೆ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
Advertisement
President announced a scheme of GoI on World Tourism Day 2017, that those interested in value addition to any services of monuments can come forward. Some services of Red Fort has been given to Dalmia Group. No profit activity will take place: Mahesh Sharma, Union MoS Culture pic.twitter.com/7qYhh15fAd
— ANI (@ANI) April 28, 2018
ನಿರ್ವಹಣೆ ಹೇಗೆ? ಪ್ರಾಚೀನ ಸ್ಮಾರಕ ದತ್ತು ಯೋಜನೆ ಪ್ರಕಾರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರ ಅನ್ವಯ ದಾಲ್ಮಿಯಾ ಸಂಸ್ಥೆ ಕೆಂಪುಕೋಟೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಿದೆ. ಅಲ್ಲದೇ ಈ ಸೌಲಭ್ಯ ಕಲ್ಪಿಸಲು ಶುಲ್ಕ ಪಡೆಯುವ ಹಕ್ಕನ್ನು ಸಂಸ್ಥೆ ಹೊಂದಿರುತ್ತದೆ. ಅದ್ರೆ ಈ ರೀತಿ ಸಂಗ್ರಹಿಸಿದ ಹಣವನ್ನು ಸ್ಮಾರಕ ನಿರ್ವಹಣೆಗಾಗಿಯೇ ಬಳಸಬೇಕು ಎಂಬ ಷರತ್ತು ಈ ಒಪ್ಪಂದದಲ್ಲಿ ವಿಧಿಸಲಾಗಿದೆ. ಇದರಿಂದ ಸಂಸ್ಥೆಗೆ ಯಾವುದೇ ಆರ್ಥಿಕ ಲಾಭ ಉಂಟಾಗುವುದಿಲ್ಲ. ಇದನ್ನೇ ನೋ ಪ್ರಾಫಿಟ್ ಯೋಜನೆ ಎಂದು ಕರೆಯಲಾಗಿದೆ.
ಸ್ಮಾರಕಗಳನ್ನು ನೋಡಲು ಭೇಟಿ ನೀಡುವ ಪ್ರವಾಸಿಗರಿಗೆ ಬೇಕಾದ ಕುಡಿಯುವ ನೀರಿನ ಸೌಲಭ್ಯ, ಆಸನ ವ್ಯವಸ್ಥೆ, ಸ್ಮಾರಕ ಜಿರ್ಣೋದ್ಧಾರ, ಶೌಚಾಲಯ ಹಾಗೂ ಅವುಗಳ ನಿರ್ವಹಣೆ, ರಾತ್ರಿ ವೇಳೆ ವೀಕ್ಷಣೆಗಾಗಿ ವರ್ಣ ರಂಜಿತ ವಿದ್ಯುತ್ ಸೌಲಭ್ಯ, ದಾರಿಗಳ ನಿರ್ಮಾಣ, ಹೋಟೆಲ್ ಇತ್ಯಾದಿ ಸೌಲಭ್ಯಗಳನ್ನು ಸಂಸ್ಥೆ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತದೆ.