Connect with us

ಮೀಸೆ ಬೆಳೆಸಿದಕ್ಕೆ ಗುಜರಾತ್‍ನಲ್ಲಿ ದಲಿತ ಯುವಕನ ಮೇಲೆ ಹಲ್ಲೆ

ಮೀಸೆ ಬೆಳೆಸಿದಕ್ಕೆ ಗುಜರಾತ್‍ನಲ್ಲಿ ದಲಿತ ಯುವಕನ ಮೇಲೆ ಹಲ್ಲೆ

ಗಾಂಧಿನಗರ: ದಲಿತ ಯುವಕ ಮೀಸೆ ಬೆಳೆಸಿದಕ್ಕೆ ಮೇಲ್ಜಾತಿಯ ಜನರು ಅವನ ಮೇಲೆ ಹಲ್ಲೆ ನಡೆಸಿರುವ ಘಟನೆ ಸೆಪ್ಟೆಂಬರ್ 25ರಂದು ಗುಜರಾತ್‍ನ ಗಾಂಧಿನಗರದಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ದರ್ಬಾರ್ ಸಮುದಾಯದ ಮೂವರು ಯುವಕರು ಗಾಂಧಿನಗರ ಜಿಲ್ಲೆಯ ಕಲೋಲ್ ತಾಲೂಕಿನ ಲಿಂಬೋದರ ಗ್ರಾಮದ ಪಿಯೂಷ್ ಪರ್ಮರ್(24) ಯುವಕರೊಬ್ಬರಿಗೆ ಬೈದು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಮಯೂರ್‍ಸಿನ್ ವಗೆಲಾ, ರಾಹುಲ್ ವಿಕ್ರಮ್‍ಸಿನ್ ಸೆರಾತಿಯ ಮತ್ತು ಅಜಿತ್‍ಸಿನ್ ವಗೆಲಾ ವಿರುದ್ಧ ದೂರು ದಾಖಲಾಗಿದ್ದು ಪ್ರಕರಣ ದಾಖಲಾಗಿದೆ.

ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನಾನು ಸಹೋದರ ದಿಗಂತ್ ಜೊತೆ ಗರ್ಬಾ ಮುಗಿಸಿ ರಾತ್ರಿ ಮನೆಗೆ ಹಿಂತಿರುಗುತ್ತಿದ್ದೆವು. ಆಗ ಅವರನ್ನು ಯಾರೋ ನಿಂದಿಸಲು ಶುರು ಮಾಡಿದ್ದರು. ಯಾರು ಎಂದು ನೋಡಲು ನೋಡಿದಾಗ ಗೊತ್ತಾಗಿರಲಿಲ್ಲ. ನಂತರ ಅವರ ಹತ್ತಿರ ಹೋಗಿ ನೋಡಿದ್ದಾಗ ದರ್ಬಾರ್ ಸಮುದಾಯದ ಮೂವರು ಯುವಕರಿದ್ದರು. ಜಗಳ ಆಗಬಾರದು ಎನ್ನುವ ಕಾರಣಕ್ಕೆ ನಾವು ಅವರನ್ನು ನಿರ್ಲಕ್ಷಿಸಿದ್ದೇವು. ನಾವು ಮನೆಗೆ ಹೋಗುವಾಗ ನಮ್ಮನ್ನು ಹಿಂಬಾಲಿಸುತ್ತಿದ್ದರು. ನಂತರ ಮನೆಯ ಹತ್ತಿರ ಬಂದು ಬೈಯಲು ಆರಂಭಿಸಿದ್ದರು. ಮೊದಲು ನನ್ನ ಸಹೋದರ ದಿಗಂತ್‍ನನ್ನು ನಿಂದಿಸಿದ್ದರು ಬಳಿಕ ನನ್ನನ್ನು ಹೊಡೆಯಲು ಆರಂಭಿಸಿದ್ದರು. ದಲಿತನಾಗಿ ಮೀಸೆ ಏಕೆ ಬೆಳೆಸಿದ್ದೀಯ ಎಂದು ಹೊಡೆಯುತ್ತಿದ್ದರು ಎಂದು ಪಿಯೂಷ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Advertisement
Advertisement