ಆಗ್ರಾ: ದಲಿತ ಯುವತಿಯ (Dalit Women) ಮೇಲೆ ಪೊಲೀಸ್ ಪೇದೆಯೊಬ್ಬ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಯುವತಿಯ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಕಾನ್‌ಸ್ಟೇಬಲ್ ರಾಘವೇಂದ್ರ ಸಿಂಗ್ (27) ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆರ್‌ಕೆ ಸಿಂಗ್ ತಿಳಿಸಿದ್ದಾರೆ.
25 ವರ್ಷದ ಮೃತ ಯುವತಿಯ ಗುರುತು ಮುಚ್ಚಿಡಲಾಗಿದ್ದು, ಕಾನ್‌ಸ್ಟೇಬಲ್ ರಾಘವೇಂದ್ರ ಸಿಂಗ್ (27) ಬಾಡಿಗೆ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯಲ್ಲಿ ನೇಣು ಬಿಗಿದುಕೊಂಡಿರುವುದು ಸಾವಿಗೆ ಕಾರಣ ಎಂದು ದೃಢಪಡಿಸಿದೆ. ಇದನ್ನೂ ಓದಿ: ಅದಾನಿ ಕೇಸ್ ತನಿಖೆ ನಡೆಸಲು ಸೆಬಿ ಸಮರ್ಥವಾಗಿದೆ – ಪತ್ರಿಕೆಯ ವರದಿಯನ್ನು ಅವಲಂಬಿಸಬೇಡಿ : ಸುಪ್ರೀಂ ಹೇಳಿದ್ದೇನು?
Advertisement
Advertisement
ಮೂಲಗಳ ಪ್ರಕಾರ ಗುರುಗ್ರಾಮ್‌ನ ಕಿಡ್ನಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಮೃತ ಯುವತಿ ಮತ್ತು ಕಾನ್‌ಸ್ಟೇಬಲ್ ರಾಘವೇಂದ್ರ ಸಿಂಗ್ ಪರಸ್ಪರ ಪರಿಚಯಸ್ಥರು. ಇಬ್ಬರು ಝಾನ್ಸಿಯಲ್ಲಿ ನರ್ಸಿಂಗ್ ತರಬೇತಿ ಪಡೆದಿದ್ದರು ಮತ್ತು ಅಂದಿನಿಂದ ಸಂಪರ್ಕದಲ್ಲಿದ್ದರು. ಕೆಲ ದಿನಗಳ ಹಿಂದೆ ಯುವತಿಯ ಸಹೋದರ ರಾಘವೇಂದ್ರ ಸಿಂಗ್ ಮನೆಗೆ ಭೇಟಿ ನೀಡಿದ್ದರು. ಬಳಿಕ ರಾಘವೇಂದ್ರ ಅವರ ಮದುವೆ ಪ್ರಸ್ತಾಪವನ್ನು ಯುವತಿಯ ಕುಟುಂಬವು ನಿರಾಕರಿಸಿತು. ಅದಾಗ್ಯೂ ರಾಘವೇಂದ್ರ ಸಿಂಗ್ ಯುವತಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
Advertisement
Advertisement
ಘಟನೆ ನಡೆಯುವ ಒಂದು ದಿನ ಮೊದಲು ಯುವತಿಯು ಕಾನ್‌ಸ್ಟೇಬಲ್‌ನ ಬಾಡಿಗೆ ಕೊಠಡಿಗೆ ಭೇಟಿ ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಕಾನ್ಸ್‌ಟೇಬಲ್ ರಾಘವೇಂದ್ರ ಸಿಂಗ್ ಝಾನ್ಸಿ ಮೂಲದವರಾಗಿದ್ದು, ಬೆಳಂಗಂಜ್‌ನಲ್ಲಿ ಬಾಡಿಗೆಗೆ ವಾಸವಾಗಿದ್ದರು. ಘಟನೆಯ ದಿನ, ರಾಘವೇಂದ್ರ ಸಿಂಗ್ ತಮ್ಮ ಕಚೇರಿಗೆ ಬಂದಿದ್ದರು. ಆದರೆ ಬೇಗ ಹೊರಟರು, ಬಳಿಕ ಘಟನೆಯ ಬಗ್ಗೆ ತನ್ನ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಸ್, ಟ್ರಕ್ ನಡುವೆ ಅಪಘಾತ 12 ಮಂದಿ ದುರ್ಮರಣ