ಚಿಕ್ಕಬಳ್ಳಾಪುರ: ಅಂಬೇಡ್ಕರ್‌ಗೆ ಅಪಮಾನ ಮಾಡಿದ ಆರೋಪದ ಮೇಲೆ ನಟ ಪ್ರಥಮ್‌ಗೆ (Pratham) ದಲಿತ ಸಂಘಟನೆಗಳ ಮುಖಂಡರು ಮಸಿ ಬಳಿದಿರುವ ಘಟನೆ ದೊಡ್ಡಬಳ್ಳಾಪುರ (Doddaballapura) ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದಿದೆ.
ಜೀವ ಬೆದರಿಕೆ ಆರೋಪದ ಪ್ರಕರಣ ಸಂಬಂಧ ಪ್ರಥಮ್ ವಿಚಾರಣೆಗೆ ಆಗಮಿಸಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಠಾಣೆಯಿಂದ ಹೊರಬಂದ ಕೂಡಲೇ ಪ್ರಥಮ್‌ನನ್ನ ದಲಿತ ಸಂಘಟನೆಗಳ ಮುಖಂಡರು ಅಡ್ಡಗಟ್ಟಿ, ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿ: ಆನೇಕಲ್ | ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನ ಕಿಡ್ನ್ಯಾಪ್ ಮಾಡಿ ಬರ್ಬರ ಹತ್ಯೆ
ಕೂಡಲೇ ಸ್ಪಷ್ಟನೆ ನೀಡಲು ಮುಂದಾದ ಪ್ರಥಮ್‌ಗೆ ದಲಿತ ಮುಖಂಡರು ಏಕಾಏಕಿ ಮಸಿ ಬಳಿಯಲು ಮುಗಿಬಿದ್ದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಎದುರೇ ಘಟನೆ ನಡೆದಿದ್ದು, ಸಿಪಿಐ ಸಾಧಿಕ್ ಪಾಷಾ ಅವರು ಮುಖಂಡರಿಗೆ ಈ ರೀತಿ ಮಾಡದಂತೆ ತಿಳಿಸಿದ್ದರು. ಆದರೂ ಪಟ್ಟು ಬಿಡದ ದಲಿತ ಮುಖಂಡರು ಪ್ರಥಮ್ ಕಾರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದಾರೆ.