ರಾಮನಗರ: ಗೊಂಬೆನಾಡು ಚನ್ನಪಟ್ಟಣದಲ್ಲಿ (Channapattana) ರಾಜಕೀಯ ದಂಗಲ್ ಮುಂದುವರಿದಿದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D. Kumaraswamy) ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P. Yogeshwar) ನಡುವಿನ ರಾಜಕೀಯ ಗುದ್ದಾಟಕ್ಕೆ ಅನುದಾನ ಖಡಿತ ಆರೋಪ ಕೇಳಿಬಂದಿದೆ.
Advertisement
ಸಿ.ಪಿ.ಯೋಗೇಶ್ಚರ್ ರಾಜಕೀಯ ದುರುದ್ದೇಶದಿಂದ ಎಸ್‍ಸಿ-ಎಸ್‍ಟಿ ಅನುದಾನ ತಡೆಹಿಡಿದಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ. ಚನ್ನಪಟ್ಟಣ ತಾಲೂಕಿನಲ್ಲಿ ಅಂಬೇಡ್ಕರ್ ಭವನ, ಬಾಬುಜಗಜೀವನ್ ರಾಮ್ ಭವನ, ವಾಲ್ಮೀಕಿ ಭವನ ನಿರ್ಮಾಣಕ್ಕೆ ಸರ್ಕಾರದಿಂದ 5 ಕೋಟಿ ಅನುದಾನ ನೀಡಲಾಗಿತ್ತು. ಕ್ಷೇತ್ರದ ಶಾಸಕರಾದ ಹೆಚ್.ಡಿ. ಕುಮಾರಸ್ವಾಮಿಯವರು ಅನುದಾನ ಕೊಡಿಸಿದ್ದರು. ಆದರೆ ಈ ಅನುದಾನವನ್ನ ರದ್ದು ಪಡಿಸುವಂತೆ ಸಿಎಂಗೆ ಯೋಗೇಶ್ವರ್ ಪತ್ರ ಬರೆದಿದ್ದಾರೆ. ಯೋಗೇಶ್ವರ್ ಪತ್ರಕ್ಕೆ ಸಿಎಂ ಬೊಮ್ಮಾಯಿ ಕೂಡಾ ಸಹಿ ಹಾಕಿರುವುದು ಖಂಡನೀಯ ಎಂದು ದಲಿತ ಮುಖಂಡರು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ- ಬಸ್ ಮೈಮೇಲೆ ಹರಿದು ಮಹಿಳೆ ಗಂಭೀರ
Advertisement
Advertisement
ರಾಜಕೀಯ ದುರುದ್ದೇಶದಿಂದ ಸಿ.ಪಿ.ಯೋಗೇಶ್ಚರ್ ದಲಿತರಿಗೆ ಬಂದಿರುವ ಅನುದಾನಕ್ಕೆ ತಡೆ ಮಾಡುತ್ತಿದ್ದಾರೆ. ಕೂಡಲೇ ನಮ್ಮ ಅನುದಾನ ಬಿಡುಗಡೆ ಮಾಡಬೇಕು, ಇಲ್ಲವಾದಲ್ಲಿ ಸಿಪಿವೈ ಹಾಗೂ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: Rx ಬದಲಿಗೆ ಪ್ರಿಸ್ಕ್ರಿಪ್ಷನ್‍ನಲ್ಲಿ ‘ಶ್ರೀ ಹರಿ’ ಅಂತ ಹಿಂದಿಯಲ್ಲಿ ಬರೆದ ವೈದ್ಯ