ಬೆಂಗಳೂರು: ದಲಿತ ನಾಯಕ ಎಂ.ಅರವಿಂದ್ ಅವರು ಆಮ್ ಆದ್ಮಿ ಪಕ್ಷವನ್ನು (AAP) ಸೇರ್ಪಡೆಯಾದರು.
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಅರವಿಂದ್‌ರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಮೂರು ದಶಕಗಳಿಂದ ದಲಿತರು ಹಾಗೂ ಶೋಷಿತರ ಧ್ವನಿಯಾಗಿ ಹೋರಾಡುತ್ತಿರುವ ಎಂ.ಅರವಿಂದ್ ಅವರ ಸೇರ್ಪಡೆಯಿಂದ ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿಯು ಮತ್ತಷ್ಟು ಸದೃಢಗೊಂಡಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕೆಲವು ಜಾತಿಗಳು ಹಾಗೂ ಧರ್ಮಗಳಿಗೆ ಸೀಮಿತವಾಗಿವೆ. ಆದರೆ ಎಎಪಿ ಜಾತಿ, ಧರ್ಮಗಳ ಭೇದವಿಲ್ಲದೇ ಎಲ್ಲರನ್ನೂ ಸಮಾನವಾಗಿ ನೋಡುತ್ತದೆ. ಒಬ್ಬ ಬಡ ದಲಿತನ ಮಗ ಹಾಗೂ ಉನ್ನತ ಅಧಿಕಾರಿಯ ಮಗ ಒಂದೇ ಶಾಲೆಯಲ್ಲಿ ಅಕ್ಕಪಕ್ಕ ಕುಳಿತು ಪಾಠ ಕಲಿಯುವಂತಾಗಬೇಕು ಎಂದು ಬಾಬಾಸಾಹೇಬ್ ಅಂಬೇಡ್ಕರ್ ಕನಸು ಕಂಡಿದ್ದರು. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಅಂಬೇಡ್ಕರ್ ಕನಸನ್ನು ದೆಹಲಿಯ ಎಎಪಿ ಸರ್ಕಾರ ನನಸು ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಗೋವಾ ಮತದಾರರು ಕಾಂಗ್ರೆಸ್ ಸರ್ಕಾರ ತರಲು ಇಚ್ಛಿಸಿದ್ದಾರೆ: ಡಿ.ಕೆ ಶಿವಕುಮಾರ್
Advertisement
Advertisement
ಎಂ.ಅರವಿಂದ್ ಮಾತನಾಡಿ, ಪಾರದರ್ಶಕತೆ, ಜನಪರ ಕಾಳಜಿ, ಸಮಾನತೆಯಲ್ಲಿ ನಂಬಿಕೆ ಹೊಂದಿರುವ ಹಾಗೂ ಇದನ್ನು ದೆಹಲಿಯಲ್ಲಿ ಸಾಧಿಸಿ ತೋರಿಸಿರುವ ಆಮ್ ಆದ್ಮಿ ಪಾರ್ಟಿಯಿಂದ ಮಾತ್ರ ದಲಿತರ ಪ್ರಗತಿ ಸಾಧ್ಯ. ಪಕ್ಷವು ಕರ್ನಾಟಕದಲ್ಲಿ ಬಲಗೊಂಡು ಶೀಘ್ರವೇ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇಲ್ಲದಿದ್ದರೆ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಮಾಡಿ ದಲಿತರು, ಬಡವರು, ಶೋಷಿತರು ಕಷ್ಟದಲ್ಲಿಯೇ ಬದುಕುವಂತೆ ಮಾಡುತ್ತವೆ ಎಂದು ತಿಳಿಸಿದರು.
Advertisement
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷರಾದ ಮೋಹನ್ ದಾಸರಿ ಮಾತನಾಡಿ, ರಾಜ್ಯವನ್ನಾಳಿದ ಮೂರೂ ಪಕ್ಷಗಳಿಂದ ದಲಿತರು ಸೇರಿದಂತೆ ಯಾರಿಗೂ ಏನೂ ಲಾಭವಿಲ್ಲ. ಅವೆಲ್ಲವೂ ತಮ್ಮ ನಾಯಕರ ಜೇಬು ತುಂಬಿಸಿಕೊಳ್ಳುವುದಕ್ಕಾಗಿಯೇ ಇರುವ ಪಕ್ಷಗಳು. ಇದನ್ನು ಅರ್ಥ ಮಾಡಿಕೊಂಡು ಎಲ್ಲ ವರ್ಗಗಳ ಜನರು ಆಮ್ ಆದ್ಮಿ ಪಾರ್ಟಿ ಸೇರುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರ ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಎಂದಿದ್ದೆ: ಎಚ್‍ಡಿಕೆ
Advertisement
1990ರ ದಶಕದಲ್ಲಿ ಹಲವು ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷರಾಗಿ ಸಮಾಜಮುಖಿ ಕೆಲಸ ಆರಂಭಿಸಿದ ಎಂ.ಅರವಿಂದ್ ಅವರು ನಂತರ ಭೀಮ್ ಮಾರ್ಚ್ ಸಂಘಟನೆ ಹಾಗೂ ಸಮತಾ ಸೈನಿಕ ದಳದ ಉನ್ನತ ಹುದ್ದೆ ಅಲಂಕರಿಸಿ ದಲಿತರ ಹಕ್ಕುಗಳಿಗಾಗಿ ಹೋರಾಡಿದ್ದರು. 1996ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ಜೊತೆ ಗುರುತಿಸಿಕೊಂಡು, ಅವರ ನೇತೃತ್ವದ ದಲಿತ ಸೇನಾದ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಭೂಮಿಯಿಲ್ಲದವರಿಗೆ ಭೂಮಿ ಕೊಡಿಸುವ ಹೋರಾಟಗಾರರಾಗಿ, ಎಸ್‌ಸಿ-ಎಸ್‌ಟಿ ವಿಚಕ್ಷಣಾ ಸಮಿತಿಯ ಸದಸ್ಯರಾಗಿ, ರೈಲ್ವೆ ನೇಮಕಾತಿ ಮಂಡಳಿಯ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಕೊರೊನಾ ಸಮಯದಲ್ಲಿ ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕುಗಳಲ್ಲಿ ಉಚಿತ ವೈದ್ಯಕೀಯ ನೆರವು ಕಲ್ಪಿಸಿ ನೆರವಾಗಿದ್ದರು.
ಎಎಪಿಯ ಮುಖಂಡರಾದ ನಂಜಪ್ಪ ಕಾಳೇಗೌಡ, ಜಗದೀಶ್ ವಿ ಸದಂ, ವಿಜಯ್ ಶಾಸ್ತ್ರಿಮಠ್, ದರ್ಶನ್ ಜೈನ್, ಬಿ.ಟಿ.ನಾಗಣ್ಣ ಮತ್ತಿತರ ನಾಯಕರು, ಅರವಿಂದ್ ಅವರ ಆಪ್ತರು ಹಾಗೂ ಎಎಪಿ ಕಾರ್ಯಕರ್ತರು ಭಾವಹಿಸಿದ್ದರು. ಇದನ್ನೂ ಓದಿ: ಕನ್ನಡದಲ್ಲಿ ಮಾತಾಡೋಕೆ ಹೇಳಿ, ನಮಗೆ ಏನೂ ಅರ್ಥ ಆಗ್ತಿಲ್ಲ: ಪರಿಷತ್ ಕಲಾಪದಲ್ಲಿ ಗಲಾಟೆ