ಚಿಕ್ಕಮಗಳೂರು: ವ್ಯಕ್ತಿಯೊಬ್ಬರು ದಲಿತ ಯುವತಿಯನ್ನ ಮದುವೆಯಾಗಿದಕ್ಕೆ ಸ್ವಜಾತಿಯವರಿಂದ ಬಹಿಷ್ಕಾರ ಹಾಕಿಸಿಕೊಂಡ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
Advertisement
ಚಂದ್ರಶೇಖರ್ ಕುಟುಂಬಕ್ಕೆ ಸ್ವಜಾತಿ ಮುಖಂಡರು ಬಹಿಷ್ಕಾರ ಹಾಕಿದ್ದಾರೆ. ವ್ಯಕ್ತಿಯು ದಲಿತ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದರು. ದಲಿತ ಯುವತಿಯನ್ನು ಮದುವೆಯಾಗಿದಕ್ಕೆ ಈ ದಂಪತಿಯ ಜೊತೆ ಗ್ರಾಮದಲ್ಲಿ ಯಾರು ಮಾತನಾಡುವಂತಿರಲಿಲ್ಲ. ಹಾಗೇನಾದರೂ ಅವರ ಜೊತೆ ಯಾರಾದರು ಮಾತನಾಡಿದ್ದಲ್ಲಿ 5 ಸಾವಿರ ರೂ. ದಂಡ ವಿಧಿಸಲಾಗುತ್ತಿತ್ತು. ದಂಪತಿ ಕುಟುಂಬವನ್ನು ಊರಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೂ ಕೂಡಾ ಆಹ್ವಾನಿಸುವಂತಿಲ್ಲ ಎಂದು ಬಹಿಷ್ಕಾರ ಹಾಕಿದ್ದರು. ಇದನ್ನೂ ಓದಿ: ಚೀನಾ ಒಲಿಂಪಿಕ್ಸ್ಗೆ ಭಾರತ ಬಹಿಷ್ಕಾರ – ದಿಟ್ಟ ನಿರ್ಧಾರ ತೆಗೆದುಕೊಂಡ ಭಾರತೀಯ ವಿದೇಶಾಂಗ ಇಲಾಖೆ
Advertisement
Advertisement
ಕೊನೆಗೆ ದಂಪತಿಯು ಹಿಂದೂ ಧರ್ಮದಿಂದ ಬೇಸತ್ತು, ಕ್ರೈಸ್ತ ಧರ್ಮಕ್ಕೆ ಮಂತಾತರಗೊಳ್ಳಲು ಚಿಂತಿಸಿದ್ದರು. ಕೊನೆಗೆ ಹಿಂದೂ ಧರ್ಮದ ಮುಖಂಡರು ಕುಟುಂಬದ ಮನವೊಲಿಸಿದ್ದು, ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಹಿಜಬ್ ನೆಪವೊಡ್ಡಿ ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡಲಾಗ್ತಿದೆ: ಮುಫ್ತಿ