ಯಾದಗಿರಿ: ಜಿಲ್ಲೆಯಲ್ಲಿ ಅನಿಷ್ಟ ಪದ್ಧತಿ ಜೀವಂತವಾಗಿದ್ದು, ದೇವರಿಗೆ ಬಲಿ ಕೊಟ್ಟ ಕೋಣದ ಮಾಂಸ ತಿನ್ನದಿದ್ರೆ ದಲಿತರಿಗೆ ಬಹಿಷ್ಕಾರ ಹಾಕಲಾಗುತ್ತಿದೆ ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಯಾದಗಿರಿ (Yadagiri) ಜಿಲ್ಲೆಯ ಸುರಪುರ ತಾಲೂಕಿನ ದೇವಿಕೇರಾ ಗ್ರಾಮದಲ್ಲಿ ಈ ಅನಿಷ್ಟ ಪದ್ಧತಿ ನಡೆಯುತ್ತದೆ ಎನ್ನಲಾಗಿದ್ದು, ಇದರ ವಿರುದ್ಧ ಇದೀಗ ಗ್ರಾಮದ ಕೆಲವರು ಸಿಡಿದೆದ್ದಿದ್ದಾರೆ. ದೇವರ ಹೆಸರಿನಲ್ಲಿ ನಡೆಯುವ ದೇವರ ಬಲಿಯನ್ನು ವಿರೋಧಿಸಿದ್ರೆ ದಲಿತರಿಗೆ ಗ್ರಾಮಕ್ಕೆ ಪ್ರವೇಶ ಇಲ್ಲ ಎಂದು ಬಲಾಢ್ಯರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ನಾಳೆ ಯತೀಂದ್ರಗೆ ಟಿಪ್ಪು ಹೆಸರು ಇಟ್ಟರೂ ಅಚ್ಚರಿ ಇಲ್ಲ – ಸಿಎಂಗೆ ಬಿಜೆಪಿ ಟಾಂಗ್
Advertisement
Advertisement
ಡಿಸೆಂಬರ್ 18 ರಂದು ದೇವಿಕೇರಾ ಗ್ರಾಮದಲ್ಲಿ ಎರಡು ದಿನ ಗ್ರಾಮದೇವತೆ ದ್ಯಾಮವ್ವ, ಮರೆಮ್ಮ ಹಾಗೂ ಪಾಲ್ಕಮ್ಮ ದೇವಿಯರ ಜಾತ್ರೆಯಿದೆ. ಈ ಜಾತ್ರೆಯಲ್ಲಿ ಹತ್ತಾರು ಕೋಣಗಳನ್ನು ದೇವರಿಗೆ ಬಲಿ ಕೊಡುವ ಅನಿಷ್ಟ ಪದ್ಧತಿ ಇದೆ. ಈ ಬಲಿ ಕೊಟ್ಟ ಕೋಣದ ಮಾಂಸವನ್ನು ದಲಿತರು ತಿನ್ನಬೇಕು. ಇಲ್ಲದಿದ್ರೆ ಗ್ರಾಮದೊಳಗೆ ಪ್ರವೇಶವಿಲ್ಲ ಎಂದು ದಲಿತ ಸಮುದಾಯ ಆರೋಪ ಮಾಡ್ತಿದೆ. ಹೀಗಾಗಿ ಈ ಜಾತ್ರೆಯಲ್ಲಿ ಪ್ರಾಣಿ ಬಲಿಗೆ ದಲಿತ ಸಮುದಾಯದವರು ವಿರೋಧಿಸಿ ಡಿಸಿ, ಎಸ್ಪಿ, ಸಿಓಗೆ ದೂರು ನೀಡಿದ್ದಾರೆ.
Advertisement
Advertisement
ದೇವಿಕೇರಾ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿಪರೀತವಾಗಿ ಕೋಣ ಬಲಿ ನಡೆಯುತ್ತವೆ. ಜೊತೆಗೆ ಸುರಪುರ, ಹುಣಸಗಿ ತಾಲೂಕಿನಲ್ಲಿ ಡಿಸೆಂಬರ್‌ನಿಂದ ಫೆಬ್ರವರಿ ವರೆಗೆ ಹೆಚ್ಚು ಜಾತ್ರೆಗಳು ನಡೆಯುತ್ತವೆ. ಈ ಜಾತ್ರೆಗಳಲ್ಲಿ ದೇವರ ಹೆಸರಿನಲ್ಲಿ ನೂರಾರು ಪ್ರಾಣಿಗಳನ್ನು ಬಲಿ ಕೊಡ್ತಾರೆ. ಈ ತರಹದ ಮೂಢನಂಬಿಕೆ ಹೆಚ್ಚಾಗ್ತಿದೆ. ಇದನ್ನು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ತಡೆಯಬೇಕೆಂದು ದಲಿತ ಸಂಘಟನೆ ದೂರು ನೀಡಿದೆ. ಇದನ್ನೂ ಓದಿ: ನಗರದೊಳಗೆ ಎಂಟ್ರಿ ಕೊಟ್ಟ ಜಿಂಕೆ ಅಪಘಾತಕ್ಕೆ ಬಲಿ