ಬೆಂಗಳೂರು: ದಲಿತ ಸಿಎಂ (Dalit CM) ವಿಚಾರ 2013 ರಿಂದಲೂ ಓಡುತ್ತಿದೆ ಆದರೆ ಪಿಕ್ಚರ್ ಮಾತ್ರ ರಿಲೀಸ್ ಆಗುತ್ತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಲಿತ ಸಿಎಂ ವಿಚಾರ 2013 ರಿಂದಲೂ ಓಡುತ್ತಲೇ ಇದೆ. 5 ವರ್ಷ ಅದೆ ಓಡಿತು ಆದರೆ ಪಿಕ್ಚರ್ ರಿಲೀಸ್ ಆಗಲಿಲ್ಲ. ಹಿಂದೆ ಮಲ್ಲಿಕಾರ್ಜುನ ಖರ್ಗೆಯವರು (Mallikarjun Kharge) ಇದ್ದಾಗಲೂ ಅವಕಾಶ ಆಗಲಿಲ್ಲ. ಪರಮೇಶ್ವರ್ (Parameshwar) ಅವರು 8 ವರ್ಷ ಅಧ್ಯಕ್ಷರಾಗಿದ್ದರು. ಅವರಿಗೆ ಡಿಸಿಎಂ ಆಗಲು ಆಗಲಿಲ್ಲ ಎಂದರು.
Advertisement
Advertisement
ಎರಡೂವರೆ ವರ್ಷದ ನಂತರ ಏನಾಗುತ್ತೆ ಅಂತ ಸಿಎಂ, ಡಿಸಿಎಂ, ಪಕ್ಷದ ಅಧ್ಯಕ್ಷರು, ಹೈಕಮಾಂಡ್ ನಾಯಕರಿದ್ದಾರೆ. ಅದನ್ನು ಅವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
Advertisement
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನಾನು ಸಿಎಂ ಆಗಬೇಕು ಅಂತ ಹೇಳಿರುವುದರಲ್ಲಿ ಹೊಸದೇನು ಇಲ್ಲ. ಅದು ಹಳೇ ಸ್ಕೀಂ. ಅವರು ಮೊದಲಿನಿಂದಲೂ ಹೇಳುತ್ತಿದ್ದು, ಈಗಲು ಹೇಳಿದ್ದಾರೆ. ಸಹಜವಾಗಿಯೇ ಸಮುದಾಯದ ಪರವಾಗಿ ಮಾತನಾಡುತ್ತಾರೆ. ಅದರಂತೆ ಸ್ವಾಮೀಜಿ ಅವರು ಸಿಎಂ ಆಗಬೇಕು ಎಂದಿದ್ದಾರೆ. ನಾನು ಯಾವುದೇ ಪವರ್ ಸೆಂಟರ್ ಅಲ್ಲ. ನಮ್ಮದು ಒಂದೇ ಪವರ್ ಸೆಂಟರ್ ಅದು ಹೈಕಮಾಂಡ್ ಎಂದರು. ಇದನ್ನೂ ಓದಿ: 508 ಕೋಟಿ ನೀಡಿದ್ದೇನೆ, ಯುಎಇಗೆ ಪರಾರಿಯಾಗುವಂತೆ ಸಲಹೆ ನೀಡಿದ್ದೇ ಸಿಎಂ ಬಘೇಲ್: ಬೆಟ್ಟಿಂಗ್ ಆ್ಯಪ್ ಮಾಲೀಕ
Advertisement
ಜಾತಿ ಜನಗಣತಿ (Caste Survey) ವರದಿಯನ್ನು ಸರ್ಕಾರ ಸ್ವೀಕರಿಸಬೇಕು. ಏನಾದರು ತಪ್ಪಿದ್ದರೆ ಅದನ್ನು ಆನಂತರ ಸರಿಪಡಿಸಬಹುದು. ಜಾತಿಗಣತಿ ವರದಿ ಬಂದ ನಂತರ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಆಗಬೇಕು. ಎರಡು ಸದನದಲ್ಲಿ ಪರ ವಿರೋಧ ಚರ್ಚೆಯಾಗಬೇಕು. ವರದಿಯ ಬಗ್ಗೆ ಸಾರ್ವಜನಿಕ ಚರ್ಚೆಯಾಗಲಿ. ಒಳ ಪಂಗಡಗಳನ್ನು ಬಿಟ್ಟಿರಬಹುದು ಎಂಬ ಆತಂಕ ಕೆಲವರಿಗೆ ಇರಬಹುದು. ಆದರೆ ಏನೇ ತಪ್ಪಾಗಿದ್ದರೂ ಅದನ್ನು ಸರಿಪಡಿಸಲು ಅವಕಾಶ ಇದೆ ಎಂದರು.