ಕನ್ನಡದ ಹೆಸರಾಂತ ನಟ ಡಾಲಿ ಧನಂಜಯ್ (Dali Dhananjay) ನಿನ್ನೆ ಸ್ನೇಹಿತರ ಜೊತೆ ಮಲೆಮಹಾದೇಶ್ವರ (Malemahadeshwar) ದೇವಾಲಯಕ್ಕೆ ಭೇಟಿಕೊಟ್ಟ ಕೊಟ್ಟಿದ್ದಾರೆ. ಟಗರುಪಲ್ಯ ಬಿಡುಗಡೆಗೂ ಮುನ್ನ ಮಲೆಮಹಾದೇಶ್ವರ ದರ್ಶನ ಮಾಡಿದ್ದರು ಧನಂಜಯ. ಸಿನಿಮಾ ಸಕ್ಸಸ್ ಆದ ನಂತರ ಮತ್ತೆ ತಂಡದೊಂದಿಗೆ ಮಲೆಮಹಾದೇಶ್ವರ ದರ್ಶನ ಮಾಡಿದ್ದಾರೆ ನಟ. ಚಿತ್ರೀಕರಣದ ಬಿಡುವಿನಲ್ಲಿ ಬೆಟ್ಟಕ್ಕೆ ಸ್ನೇಹಿತರೊಂದಿಗೆ ಬಂದ ಧನಂಜಯ ದೇವರ ದರ್ಶನ ಮಾಡಿದ್ದಾರೆ.
ಸದ್ಯ ಡಾಲಿ ಧನಂಜಯ್ ಬಹುನಿರೀಕ್ಷಿತ ಸಿನಿಮಾ ‘ಉತ್ತರಕಾಂಡ’ (Uttarakanda Film) ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ, ನಟ ಶಿವಣ್ಣನ ಎಂಟ್ರಿ ಕೂಡ ಆಗಿದೆ. ರಮ್ಯಾ ಕಮ್‌ಬ್ಯಾಕ್ ಚಿತ್ರಕ್ಕೆ ಶಿವರಾಜ್‌ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಇದರ ಬಗ್ಗೆ ನಿರ್ಮಾಣ ಸಂಸ್ಥೆ ‘ಕೆಆರ್‌ಜಿ’ ಸ್ಟುಡಿಯೋ ಮಾಹಿತಿ ನೀಡಿದೆ.
‘ಉತ್ತರಕಾಂಡ’ (Uttarakanda) ಸಾಕಷ್ಟು ವಿಚಾರಗಳಿಂದ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ರಮ್ಯಾ ಕಮ್ ಬ್ಯಾಕ್ ಚಿತ್ರ ಎಂಬ ನಿರೀಕ್ಷೆಯ ಜೊತೆ ಹಿಟ್ ಜೋಡಿ ಡಾಲಿ- ಶಿವಣ್ಣ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ತಿರೋದು ಮತ್ತೊಂದು ಖುಷಿ. ಸದ್ಯ ಶೂಟಿಂಗ್‌ಗೆ ಹಾಜರಿ ಹಾಕಿರುವ ಶಿವಣ್ಣಗೆ ಚಿತ್ರತಂಡ ಸ್ವಾಗತ ಕೋರಿದೆ.
‘ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಜೈಲರ್, ಘೋಸ್ಟ್ ಚಿತ್ರದ ಸಕ್ಸಸ್ ನಂತರ ‘ಉತ್ತರಕಾಂಡ’ ಶೂಟಿಂಗ್‌ಗೆ ಎಂಟ್ರಿ ಕೊಟ್ಟಿರೋ ಶಿವರಾಜ್‌ಕುಮಾರ್‌ಗೆ ಈ ಚಿತ್ರದಲ್ಲಿ ಖಡಕ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ.
‘ಜೈಲರ್’ (Jailer) ಸಕ್ಸಸ್ ಬಳಿಕ ಶಿವಣ್ಣಗೆ ತಮಿಳಿನಿಂದ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ಶಿವಣ್ಣಗೆ ಯಾವುದೇ ಪಾತ್ರ ನೀಡಿದರೂ ತೂಕವಾಗಿ ನಟಿಸುತ್ತಾರೆ. ಹಾಗಾಗಿ ಉತ್ತರಕಾಂಡ ಚಿತ್ರದಲ್ಲಿ ಶಿವಣ್ಣಗೆ ತೂಕವಾಗಿರೋ ಪಾತ್ರವೇ ಇದೆ.