ಶಿಮ್ಲಾ: ಕೋವಿಡ್ ಸಾಂಕ್ರಾಮಿಕ ರೋಗ ಹರಡಿ ಮಾನವರು ಒಬ್ಬರನ್ನೊಬ್ಬರು ಸಂಪರ್ಕ ಮಾಡುವುದು ಕಡಿಮೆಯಾಗಿತ್ತು. ಎರಡಕ್ಕೂ ಹೆಚ್ಚು ವರ್ಷಗಳಕಾಲ ಬೌದ್ಧ ಧರ್ಮ ಗುರು ದಲೈ ಲಾಮಾ (Dalai Lama) ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕೊರೊನಾ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
ಬಳಿಕ ಪ್ರತಿಕ್ರಿಯಿಸಿರುವ ಅವರು, ನಾನೀಗ ಆರೋಗ್ಯವಂತನಾಗಿದ್ದು, ವೈದ್ಯರೊಂದಿಗೆ ಬಾಕ್ಸಿಂಗ್ ಕೂಡಾ ಆಡಬಹುದು. ನಾನು ನಿಯಮಿತವಾಗಿ ವೈದ್ಯಕೀಯ ತಪಾಸಣೆಗಾಗಿ ದೆಹಲಿಯ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಉತ್ತಮ ಆರೋಗ್ಯ ಹೊಂದಿರುವುದರಿಂದ ಈಗ ಹೋಗುತ್ತಿಲ್ಲ ಎಂದು ಹೇಳಿದ್ದಾರೆ.
Advertisement
#WATCH | Tibetan spiritual leader Dalai Lama made his first public appearance after over 2 years since the pandemic, as he greeted followers in Dharamshala, Himachal Pradesh (18.03) pic.twitter.com/dp0wEIYGHW
— ANI (@ANI) March 19, 2022
ಟಿಬೆಟಿಯನ್ ದೇವಾಲಯದಲ್ಲಿ ಅನುಯಾಯಿಗಳಿಗೆ ‘ಜಟಕ’ ಕಥೆಗಳ ಕಿರು ಬೋಧನೆಯನ್ನು ನೀಡಿದರು. ಕೇಂದ್ರ ಟಿಬೆಟಿಯನ್ ಆಡಳಿತದ (ಸಿಟಿಎ) ಸದಸ್ಯರು ಹಾಗೂ ಸಾವಿರಾರು ಬಿಕ್ಕುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Advertisement
ಸನ್ಯಾಸಿಗಳು ಮತ್ತು ಕೇಂದ್ರದ ಸದಸ್ಯರು ಸೇರಿದಂತೆ ಸಾವಿರಾರು ಟಿಬೆಟಿಯನ್ನರು, ಟಿಬೆಟಿಯನ್ ಅಡ್ಮಿನಿಸ್ಟ್ರೇಷನ್ (CTA), ಕೂಟದ ಭಾಗವಾಗಿದ್ದಾರೆ. (CTA) ಚಾರ್ಟರ್ ಆಫ್ ದಿ ಟಿಬೆಟಿಯನ್ಸ್ ಇನ್-ಎಕ್ಸೈಲ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ
Advertisement
(CTA) ಸದಸ್ಯ ತೇನ್ಸಿಂಗ್ ಜಿಗ್ಮೆ ಮಾತನಾಡಿ, ಇದು ಅತ್ಯಂತ ಸುಂದರವಾದ ದಿನ. ನಾವು ಎರಡು ವರ್ಷಗಳ ನಂತರ ಅವರನ್ನು ನೋಡುತ್ತಿದ್ದೇವೆ. ಇದು ಇಂದಿನ ಅತ್ಯಂತ ಅದೃಷ್ಟದ ಸಂಗತಿಯಾಗಿದೆ. ಅವರು ಆರೋಗ್ಯವಾಗಿದ್ದಾರೆ ಆದ್ದರಿಂದ ನಾವು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಿದರು. ನಾವು ನಿಜವಾಗಿಯೂ ಸಂತೋಷವನ್ನು ಅನುಭವಿಸುತ್ತಿದ್ದೇವೆ ಮತ್ತು ಅವರ ಪವಿತ್ರತೆಯನ್ನು ಉತ್ತಮವಾಗಿ ನೋಡಲು ಆಶೀರ್ವದಿಸುತ್ತೇವೆ ಎಂದು ಹೇಳಿದ್ದಾರೆ.