ದಕ್ಷಿಣ ಕನ್ನಡದಲ್ಲಿ ಧಾರಾಕಾರ ಮಳೆ – ಸಿಡಿಲು ಬಡಿದು ಇಬ್ಬರು ದುರ್ಮರಣ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಭಾರೀ ಅವಾಂತರ ಸೃಷ್ಟಿಯಾಗಿದ್ದು, ಮೂಡಬಿದ್ರೆ ತಾಲೂಕಿನ ಕಂಚಿಬೈಲು ಎಂಬಲ್ಲಿ ಸಿಡಿದು ಬಡಿದು ಇಬ್ಬರು ಕಾರ್ಮಿಕರು ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಯಶವಂತ್ (25), ಮಣಿಪ್ರಸಾದ್ (25) ಮೃತ ಕಾರ್ಮಿಕರು. ಮೂಡಬಿದ್ರೆ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಇದರಿಂದ ರಸ್ತೆಗಳು ನದಿಗಳಂತಾಗಿವೆ. ವಾಣಿಜ್ಯ ಕಟ್ಟಡಗಳ ಎದುರಿನ ವಸ್ತುಗಳು ನೀರು ಪಾಲಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ಮಳೆಯಾಗುತ್ತಿದೆ. ಇದನ್ನೂ ಓದಿ: ಸಾಹಸಿ ಯುವತಿಯರಿಗೆ ಉಳ್ಳಾಲ ಕಡಲ ತೀರದಲ್ಲಿ ಅದ್ದೂರಿ ಸ್ವಾಗತ
ಕಡಬ ಸಮೀಪದ ಆಲಂಗಾರಿನ ಅರ್ಬಿ ಪರಿಸರದಲ್ಲಿ ಶೆಡ್ ಒಂದರಲ್ಲಿದ್ದ ಸ್ಥಳೀಯ ಮೂವರು ಕಾರ್ಮಿಕರಿಗೆ ಸಿಡಿಲು ಬಡಿದು ಗಾಯವಾಗಿದ್ದು ಆಲಂಗಾರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯ ಅಬ್ಬರಕ್ಕಿಂತಲೂ ಹೆಚ್ಚಾಗಿ ಸಿಡಿಲಿನ ಅಬ್ಬರ ಆತಂಕ ಹುಟ್ಟಿಸಿದೆ. ಮಳೆಯ ಅವಾಂತರಗಳ ನಡುವೆ ಮಳೆ ನೀರಿನಲ್ಲಿ ಖಾಲಿ ಟ್ಯಾಂಕ್ ತೇಲುತ್ತಿರುವ ವೀಡಿಯೋ ಒಂದು ವೈರಲ್ ಆಗ ತೊಡಗಿದೆ. ಇದನ್ನೂ ಓದಿ: ಪಾಕ್ ಪರ ಘೋಷಣೆ- ದೇಶದ್ರೋಹ ಪ್ರಕರಣ ದಾಖಲಿಸಿ ಯುವಕನ ಬಂಧನ