ಮಂಗಳೂರು: ಕರಾವಳಿಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ (Congress) ಈಗ ವಾಸ್ತು (Vastu) ಮೊರೆ ಹೋಗಿದೆ ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಕಚೇರಿ ವಾಸ್ತು ಸರಿಪಡಿಸಲು ಮುಂದಾಗಿದ್ದು, 8 ಮೆಟ್ಟಿಲಿದ್ದ ಕಡೆ 9 ಮೆಟ್ಟಿಲು (Staircase) ಇರುವಂತೆ ಕಾಮಗಾರಿ ನಡೆಸಲಾಗುತ್ತಿದೆ.
Advertisement
ಜಿಲ್ಲೆಯ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ವಾಸ್ತು ಸರಿಪಡಿಸಲು ಕಚೇರಿಯ ಮುಂಭಾಗದ ಮೆಟ್ಟಿಲಿನ ನವೀಕರಣ ಕಾಮಗಾರಿ ಮಾಡಲಾಗುತ್ತಿದೆ. ವಾಸ್ತು ತಜ್ಞರ ಸಲಹೆಯಂತೆ ಮೆಟ್ಟಿಲು ನವೀಕರಣವಾಗುತ್ತಿದೆ ಎನ್ನಲಾಗುತ್ತಿದೆ. ಈ ಹಿಂದೆ ಪ್ರವೇಶ ದ್ವಾರದಲ್ಲಿ 8 ಮೆಟ್ಟಿಲುಗಳಿದ್ದವು. ಆದರೆ 8 ಮೆಟ್ಟಿಲುಗಳಿರುವುದು ದೋಷ. ವಾಸ್ತು ಪದ್ದತಿ ಪ್ರಕಾರ ಬೆಸ ಸಂಖ್ಯೆಯಲ್ಲಿ ಮೆಟ್ಟಿಲುಗಳಿರಬೇಕು. ಇದಕ್ಕಾಗಿ 9ನೇ ಮೆಟ್ಟಿಲು ಸೇರ್ಪಡೆಗೊಳಿಸಲು ದುರಸ್ತಿ ಕಾರ್ಯ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಕರ್ನಾಟಕ, ಮಹಾ ಸಿಎಂ ಜೊತೆ ಶಾ ಚರ್ಚೆ – ಶೀಘ್ರವೇ ತಟಸ್ಥ ಸಮಿತಿ ರಚನೆ
Advertisement
Advertisement
ಈ ವಾಸ್ತು ವಾದವನ್ನು ಕಾಂಗ್ರೆಸ್ ನಾಯಕರು ನಿರಾಕರಿಸುತ್ತಿದ್ದಾರೆ. ಮೆಟ್ಟಿಲು ಹತ್ತಲು ಸುಲಭವಾಗಲು ಹಾಗೂ ವಾಟರ್ ಟ್ಯಾಂಕ್ ದುರಸ್ಥಿಗಾಗಿ ಈ ನವೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement
2016ರಲ್ಲಿ ಈ ನೂತನ ಜಿಲ್ಲಾ ಕಾಂಗ್ರೆಸ್ ಕಚೇರಿ ಉದ್ಘಾಟನೆಯಾಗಿತ್ತು. 2019ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋತಿತ್ತು. 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿತ್ತು. ಹೀಗಾಗಿ ವಾಸ್ತು ತಜ್ಞರ ಸಲಹೆಯಂತೆ ಮೆಟ್ಟಿಲು ನವೀಕರಣ ಮಾಡಲಾಗುತ್ತಿದೆ ಎಂದು ಭಾರೀ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಹೈಕಮಾಂಡ್ ಕ್ಲಾಸ್ – ಕೊಪ್ಪಳ ಕಾರ್ಯಕ್ರಮಕ್ಕೆ ಬಿಜೆಪಿಯಿಂದ ಬಿಸ್‌ವೈಗೆ ಆಹ್ವಾನ