ಪೊಲೀಸ್ ಕಸ್ಟಡಿಯಲ್ಲಿ ದೈವ ನರ್ತಕರು: ಕೊರಗಜ್ಜ ಡೈರೆಕ್ಟರ್ ಹೇಳಿದ್ದೇನು?

Public TV
1 Min Read
Sudhir Attavar

ದೈವ ನರ್ತಕರು (Daiva Narthaka)ತಮ್ಮ ಶೂಟಿಂಗ್ ಸೆಟ್ ಗೆ ತಲ್ವಾರ್ ಹಿಡಿದುಕೊಂಡು ಬಂದು ಬೆದರಿಸಿದ್ದಾರೆ ಎಂದು ಮೊನ್ನೆಯಷ್ಟೇ ‘ಕೊರಗಜ್ಜ’ (Koragajja) ಸಿನಿಮಾ ಟೀಮ್ ಪ್ರೆಸ್ ಮೀಟ್ ಮಾಡಿ ಆರೋಪ ಮಾಡಿತ್ತು. ‘ಕೊರಗಜ್ಜ’ ಹೆಸರಿನಲ್ಲಿ ಸಿನಿಮಾ ಮಾಡಬಾರದು ಎಂದು ದೈವ ನರ್ತಕರು ಬೆದರಿಸಿದ್ದಾರೆ. ಶೂಟಿಂಗ್ ಸೆಟ್ ಹಾಳು ಮಾಡಿದ್ದಾರೆ. ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಬೆದರಿಕೆ ಹಾಕಿದ್ದಾರೆ ಎಂದು ನಿರ್ದೇಶಕರು ಆರೋಪ ಮಾಡಿದ್ದರು.

Kari Haida Koragajja 1

ಕಳಸದಲ್ಲಿ (Kalasa) ಕೊರಗಜ್ಜ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ನಲ್ಕೆ ಸಂಘದವರೆಂದು ಹೇಳಿಕೊಂಡ ವ್ಯಕ್ತಿಗಳು ಆಯುಧ ಹಿಡಿದುಕೊಂಡು ಬಂದು ಚಿತ್ರತಂಡದವರನ್ನು ಬೆದರಿಸಿದ್ದರು ಎನ್ನುವ ಆರೋಪವಿತ್ತು. ಈ ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿತ್ತು. ದೈವ ನರ್ತಕರನ್ನು ಕಳಸದ ಪೊಲೀಸ್ ಸ್ಟೇಷನ್ ಗೆ ಕರೆಯಿಸಿ ವಿಚಾರಣೆಗೆ ಒಳಪಡಿಸಲಾಗಿದೆಯಂತೆ. ಮುಂದಿನ ಪ್ರಕ್ರಿಯೆಗಾಗಿ ನಿನ್ನೆ ರಾತ್ರಿ ಕೇಸು ದಾಖಲಿಸುವ ಕುರಿತು ತಮಗೆ ಪೊಲೀಸ್ ಅಧಿಕಾರಿಗಳು ಕರೆ ಮಾಡಿದ್ದರು ಎಂದು ಸುಧೀರ್ ಅತ್ತಾವರ್ ತಿಳಿಸಿದ್ದಾರೆ.

ಚಿತ್ರದ ನಿರ್ದೇಶಕರಾದ ಸುಧೀರ್ ಅತ್ತಾವರ್ (Sudhir Attavar) ಅವರಿಗೆ ಸರ್ಕಲ್ ಇನ್ಸ್ ಪೆಕ್ಟರ್ ರಾತ್ರಿ 9.30ಕ್ಕೆ ಕರೆ ಮುಂದಿನ ಕ್ರಮಕ್ಕಾಗಿ ದೂರು ನೀಡುವಂತೆ ತಿಳಿಸಿದ್ದಾರಂತೆ. ದೈವ ನರ್ತಕರೆನ್ನುವವರನ್ನು ಬಂಧಿಸದೆ ಅವರಿಗೆ ಬುದ್ದಿಹೇಳಿ ಬಿಟ್ಟುಬಿಡುವಂತೆ ನಿರ್ದೇಶಕ ಸುಧೀರ್ ಅತ್ತಾವರ್ ಮನವಿ ಮಾಡಿದ್ದಾರಂತೆ. ಆದರೆ ಮಂಗಳೂರು ಮತ್ತು ಕಳಸದಲ್ಲಿ ಇಂತಹ ಗೂಂಡಾಗಿರಿಗೆ ಪ್ರಚೋದಿಸಿ, ದೈವ ನರ್ತಕರನ್ನು ಗೂಂಡಾಯಿಸಂಗೆ ಪ್ರಚೋದಿಸಿ ಚಿತ್ರೀಕರಣಕ್ಕೆ ಅಪಾರಹಾನಿ ಮಾಡಲು ಕುಮ್ಮಕ್ಕು ನೀಡುತ್ತಿರುವ ‘ಕತ್ತಲೆ’ ಎನ್ನುವ ವ್ಯಕ್ತಿಯಾರು ಎನ್ನುವುದನ್ನು ಪತ್ತೆಹಚ್ಚಲು ನಿರ್ದೇಶಕರು ಮನವಿ ಮಾಡಿದ್ದಾರಂತೆ.

Web Stories

Share This Article