ಬೆಳಗಾವಿ: ಪುರಾತನ ಕಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉತ್ತರ ಕರ್ನಾಟಕದಲ್ಲಿನ ವೀರಭದ್ರ ಅಥವಾ ವೀರಗಾಸೆ (Veeragase) ಕುಣಿತ ಮಾಡುವವರಿಗೂ ಮಾಸಾಶನ (Pension) ನೀಡುವಂತೆ ಪುರವಂತರು (Puravantharu) ಒತ್ತಾಯಿಸಿದ್ದಾರೆ.
Advertisement
ಕರಾವಳಿ (Karavali) ಭಾಗದ ದೈವ ನರ್ತಕರಿಗೆ (Daiva Nartaka) ರಾಜ್ಯ ಸರ್ಕಾರದಿಂದ ಮಾಸಾಶನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪುರವಂತರೊಬ್ಬರು, ವೀರಗಾಸೆ ಮಾಡುವ ಪುರವಂತರಿಗೂ ಮಾಸಾಶನ ನೀಡಬೇಕು. ಅನಾದಿ ಕಾಲದಿಂದಲೂ ರಥೋತ್ಸವ, ಗುಗ್ಗಳೋತ್ಸವದಲ್ಲಿ ಪುರವಂತರು ಭಾಗಿಯಾಗುತ್ತಾರೆ. ಪುರಾತನ ಕಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕೆಂದು ರಾಜ್ಯ ಸರ್ಕಾರಕ್ಕೆ ವೀರಗಾಸೆ ಮಾಡುವ ಪುರವಂತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ: ಡಾಲಿ ಧನಂಜಯ್ ಸ್ಪಷ್ಟನೆ
Advertisement
Advertisement
ಗುಗ್ಗಳೋತ್ಸವ, ರಥೋತ್ಸವ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುತ್ತೇವೆ. ಇದು ಪುರಾತನ ಕಾಲದಿಂದ ಬಂದ ವೀರಭದ್ರ ದೇವರ ಕಲೆಯಾಗಿದೆ. ಉತ್ತರ ಕರ್ನಾಟಕದ ವೀರಗಾಸೆ ಪುರವಂತರಿಗೂ ಸರ್ಕಾರ ಮಾಸಾಶನ ನೀಡಬೇಕು. ಆಯಾ ಊರಿನಲ್ಲಿ ಪುರವಂತರು ಇದ್ದಾರೆ. ಈ ಕಲೆ ನಾಶ ಮಾಡದೇ ಮುಂದುವರಿಸಿದ್ದಾರೆ. ಪ್ರತ್ಯೇಕ ತಾಲೂಕಿನಲ್ಲಿಯೂ ವೀರಗಾಸೆ ಕಲಾವಿದರ ಸಂಘವಿದೆ. ವೀರಗಾಸೆ ಪುರವಂತರ ಕಲೆ ಮೆಚ್ಚಿ ಮಾಸಾಶನ ನೀಡಬೇಕು. ಎಷ್ಟೋ ಜನ 60 ವರ್ಷ ಮೀರಿದ ವೀರಗಾಸೆ ಪುರವಂತರಿದ್ದಾರೆ. ಹೀಗಾಗಿ ಅವರಿಗೂ ಸಹ ಮಾಸಾಶನ ನೀಡಬೇಕೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಬೆಳಗಾವಿಯಲ್ಲಿ (Belagavi) ವೀರಗಾಸೆ ಕಲಾವಿದ ಪಂಚಾಕ್ಷರಿ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಸಂಭ್ರಮದಿಂದ ನಡೆದ ಮಲೆ ಮಹದೇಶ್ವರ ದೀಪಾವಳಿ ರಥೋತ್ಸವ
Advertisement
ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲೂ (Social Media) ವೀರಗಾಸೆ ಕುಣಿತ ಮಾಡುವ ಕಲಾವಿದರಿಗೆ ಬೆಂಬಲ ಕೇಳಿ ಬರುತ್ತಿದ್ದು, ಕರಾವಳಿಯ ದೈವ ನರ್ತಕರಿಗೆ ಮಾಸಾಶನ ನೀಡಿದ್ದಕ್ಕೆ ನಮ್ಮ ಸ್ವಾಗತವಿದೆ. ಉತ್ತರ ಕರ್ನಾಟಕದಲ್ಲಿ ವೀರಭದ್ರ ಅಥವಾ ವೀರಗಾಸೆ ಕುಣಿತ ಮಾಡುವವರಿಗೂ ಮಾಸಾಶನ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಗ್ರಹಿಸಿದ್ದಾರೆ.