Connect with us

Dina Bhavishya

ದಿನಭವಿಷ್ಯ: 30-11-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಶುಕ್ರವಾರ, ಪೂರ್ವಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:46 ರಿಂದ 12:12
ಗುಳಿಕಕಾಲ: ಬೆಳಗ್ಗೆ 7:54 ರಿಂದ 9:20
ಯಮಗಂಡಕಾಲ: ಮಧ್ಯಾಹ್ನ 3:04 ರಿಂದ 4:30

ಮೇಷ: ಮಕ್ಕಳಿಗೆ ಉತ್ತಮ ಅವಕಾಶ, ಉತ್ತಮ ಹೆಸರು ಗೌರವ ಪ್ರಾಪ್ತಿ, ಸಂಗಾತಿಯಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಜಯ, ಆಸೆ ಆಕಾಂಕ್ಷೆಗಳು ಈಡೇರುವುದು, ದೇವತಾ ಕಾರ್ಯದಲ್ಲಿ ಭಾಗಿ, ಶುಭ ಕಾರ್ಯಗಳಿಗೆ ಪ್ರಯಾಣ, ಕಲಾವಿದವರಿಗೆ ಅನುಕೂಲ.

ವೃಷಭ: ಸ್ವಂತ ಉದ್ಯಮಸ್ಥರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿ-ವಾಹನಕ್ಕಾಗಿ ಸಾಲ, ಸ್ತ್ರೀಯರ ಜೊತೆ ಶತ್ರುತ್ವ, ಮಹಿಳೆಯರಿಂದ ನಷ್ಟ, ಶೀತ ಸಂಬಂಧಿತ ಸಮಸ್ಯೆ, ರೋಗ ಬಾಧೆ, ಗರ್ಭದೋಷ, ಕಲ್ಪನಾ ಲೋಕದಲ್ಲಿ ವಿಹಾರ, ಐಷರಾಮಿ ಜೀವನದ ಕನಸು.

ಮಿಥುನ: ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಸ್ತ್ರೀಯರಿಗಾಗಿ ನಷ್ಟ, ಪ್ರೇಮ ವಿಚಾರಗಳಲ್ಲಿ ಆಲೋಚನೆ, ದುಶ್ಚಟಗಳಿಂದ ತೊಂದರೆ, ಉದ್ಯೋಗದಲ್ಲಿ ಒತ್ತಡ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಪ್ರವಾಸಿ ಸ್ಥಳಗಳಿಗೆ ಭೇಟಿ.

ಕಟಕ: ಮಹಿಳೆಯರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಅಧಿಕ ಧನಾಗಮನ, ರಾಜಕೀಯ ವ್ಯಕ್ತಿಗಳಿಂದ ಪ್ರಶಂಸೆ, ಸ್ಥಿರಾಸ್ತಿ ವಾಹನದಿಂದ ಲಾಭ, ತಾಯಿ ಕಡೆಯಿಂದ ಅನುಕೂಲ, ಗುಪ್ತ ಇಚ್ಛೆಗಳು ಈಡೇರುವುದು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅಲಂಕಾರಿಕ ವಸ್ತುಗಳಿಂದ ತೊಂದರೆ.

ಸಿಂಹ: ಮನೋರಂಜನೆಗಾಗಿ ಖರ್ಚು, ಐಷಾರಾಮಿ ಜೀವನಕ್ಕೆ ಆಸೆ, ಉದ್ಯೋಗ ಸ್ಥಳದಲ್ಲಿ ಒತ್ತಡ, ಸಹೋದರಿಯಿಂದ ತೊಂದರೆ, ಉದ್ಯೋಗ ನಿಮಿತ್ತ ಪ್ರಯಾಣ, ಮನಸ್ಸಿನಲ್ಲಿ ಭಯ ಆತಂಕ, ಇಲ್ಲ ಸಲ್ಲದ ಅಪವಾದ, ಬಿಪಿ-ಸಕ್ಕರೆ ಕಾಯಿಲೆ ಇದ್ದವರು ಎಚ್ಚರ.

ಕನ್ಯಾ: ದೂರ ಪ್ರದೇಶದಿಂದ ಲಾಭ, ಅಧಿಕ ಧನಾಗಮನ, ಪುಣ್ಯ ಫಲ ಪೃಆಪ್ತಿ, ಕುಟುಂಬದಲ್ಲಿ ಸುಭ ಕಾರ್ಯ, ಚಿನ್ನಾಭರಣ ಖರೀದಿಗೆ ಚಿಂತೆ, ಮೇಲಾಧಿಕಾರಿಗಳಿಂದ ಒತ್ತಡ, ಕಫ, ಗಂಟಲು ನೋವು, ಶಕ್ತಿ ದೇವತೆಯ ದರ್ಶನ, ಮಹಿಳಾ ಮಿತ್ರರಿಂದ ನಷ್ಟ.

ತುಲಾ: ಆಕಸ್ಮಿಕ ಧನ ಸಂಪತ್ತು, ಈ ದಿನ ಅನುಕೂಲ, ಧನಾಗಮನ, ವಿಶ್ರಾಂತಿ ವೇತನ ಪ್ರಾಪ್ತಿ, ಉಡುಗೊರೆ ದೊರೆಯುವುದು, ಆತ್ಮ ಸಂಕಟಗಳು, ಅಪಘಾತ ಸಾಧ್ಯತೆ, ಆಸೆ ಆಕಾಂಕ್ಷೆಗಳಿಗೆ ಪೆಟ್ಟು, ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ವಿಪರೀತವಾದ ಕೋಪ.

ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿ, ಉದ್ಯೋಗ ಲಾಭ, ಸೇವಕರಿಂದ ಅನುಕೂಲ, ಸಂಗಾತಿಯಿಂದ ಅಹಂಭಾವ, ಮೋಜು-ಮಸ್ತಿಯಲ್ಲಿ ಮನಸ್ಸು, ಗಣ್ಯ ವ್ಯಕ್ತಿಗಳ ಭೇಟಿ, ಸಿನಿಮಾ ಕ್ಷೇತ್ರದವರಿಗೆ ಅನುಕೂಲ, ಗುತ್ತಿಗೆದಾರರಿಗೆ ಲಾಭ.

ಧನಸ್ಸು: ತಂದೆಯೊಂದಿಗೆ ಕಲಹ, ಶತ್ರುಗಳ ಕಾಟ, ಪ್ರಯಾಣದಲ್ಲಿ ಅಡೆತಡೆ, ಶೀತ ಸಂಬಂಧಿತ ಸಮಸ್ಯೆ, ಗಂಟಲು ನೋವು, ರೋಗ ಬಾಧೆ, ಸಾಲ ಬಾಧೆ, ಸೇವಕರಿಂದ ಅನುಕೂಲ, ಸರ್ಕಾರದಿಂದ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಅಲೆದಾಟ.

ಮಕರ: ಆಕಸ್ಮಿಕ ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ, ಪ್ರೇಮ ವಿಚಾರದಲ್ಲಿ ತೊಂದರೆ, ಆಸೆ ಆಕಾಂಕ್ಷೆಗಳಿಗೆ ಪೆಟ್ಟು, ಪಾಲುದಾರಿಕೆಯಲ್ಲಿ ಸಂಕಷ್ಟ, ಉದ್ಯೋಗದಲ್ಲಿ ಆಕಸ್ಮಿಕ ಬದಲಾವಣೆ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಮಕ್ಕಳಿಂದ ಅನುಕೂಲ, ಆಕಸ್ಮಿಕವಾಗಿ ಮಕ್ಕಳಿಗೆ ತೊಂದರೆ.

ಕುಂಭ: ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ಪತ್ರ ವ್ಯವಹಾರಗಳಲ್ಲಿ ಲಾಭ, ಸರ್ಕಾರಿ ಅಧಿಕಾರಿಗಳ ಭೇಟಿ, ಶತ್ರುಗಳೊಂದಿಗೆ ಸ್ನೇಹ ಸಂಬಂಧ, ಸ್ಥಿರಾಸ್ತಿ-ವಾಹನ ಯೋಗ, ಹಿರಿಯರಿಂದ ಗೌರವ, ರಾಜಕೀಯ ನಿಮಿತ್ತ ಪ್ರಯಾಣ, ಸಂಗಾತಿಯಿಂದ ಅನುಕೂಲ, ದಾಂಪತ್ಯದಲ್ಲಿ ಪ್ರೀತಿ.

ಮೀನ: ಮಕ್ಕಳಿಂದ ತೊಂದರೆ, ಶತ್ರುತ್ವ ಹೆಚ್ಚಾಗುವುದು, ಆಕಸ್ಮಿಕ ಅಪಘಾತ ಸಾಧ್ಯತೆ, ಸ್ತ್ರೀಯರಿಂದ ಕುಟುಂಬದ ನಿಂದನೆ, ವಿಪರೀತ ಸಂಕಷ್ಟದಿಂದ ಕಣ್ಣೀರು, ನಷ್ಟ ನಿರಾಸೆಗಳು ಕಾಡುವುದು, ಪೆಟ್ಟಾಗುವ ಸಾಧ್ಯತೆ ಎಚ್ಚರ, ಬಿಪಿ, ಸಕ್ಕರೆ ಕಾಯಿಲೆ ಇದ್ದವರು ಎಚ್ಚರ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *