ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ದ್ವಿತೀಯಾ ತಿಥಿ,
ಭಾನುವಾರ, ದನಿಷ್ಠ ನಕ್ಷತ್ರ
ರಾಹುಕಾಲ: ಸಂಜೆ 5:15 ರಿಂದ 6:50
ಗುಳಿಕಕಾಲ: ಮಧ್ಯಾಹ್ನ 3:40 ರಿಂದ 5:15
ಯಮಗಂಡಕಾಲ: ಮಧ್ಯಾಹ್ನ 12:30 ರಿಂದ 2:05
Advertisement
ಮೇಷ: ವ್ಯಾಪಾರದಲ್ಲಿ ನಷ್ಟ, ಮೇಲಾಧಿಕಾರಿಗಳಿಂದ ಕಿರಿಕಿರಿ, ಮನಸ್ಸಿನಲ್ಲಿ ನಾನಾ ಆಲೋಚನೆ, ವಿರೋಧಿಗಳಿಂದ ಅನಾನುಕೂಲ, ಕಾರ್ಯ ಪ್ರಗತಿಗಾಗಿ ತಿರುಗಾಟ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
Advertisement
ವೃಷಭ: ಆರೋಗ್ಯದಲ್ಲಿ ಅಲ್ಪ ಚೇತರಿಕೆ, ಆಕಸ್ಮಿಕ ಧನಾಗಮನ, ಅನ್ಯರಿಗೆ ಒಳ್ಳೆಯದನ್ನೇ ಬಯಸುವಿರಿ, ಆತ್ಮೀಯರ ಭೇಟಿಯಿಂದ ಸಂತಸ, ಮಾನಸಿಕ ವ್ಯಥೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ದೂರ ಪ್ರಯಾಣಕ್ಕೆ ಮನಸ್ಸು, ಅನಗತ್ಯ ಖರ್ಚಿನಿಂದ ದೂರ ಉಳಿಯುವಿರಿ.
Advertisement
ಮಿಥುನ: ನೆರೆಹೊರೆ-ಬಂಧುಗಳಿಂದ ವೈಮನಸ್ಸು, ಇಲ್ಲ ಸಲ್ಲದ ಅಪವಾದ-ನಿಂದನೆ, ವಸ್ತ್ರಾಭರಣ ಖರೀದಿಗೆ ತೊಂದರೆ, ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ, ಆತ್ಮೀಯರನ್ನು ಭೇಟಿ ಮಾಡುವಿರಿ, ಆಕಸ್ಮಿಕವಾಗಿ ಶುಭ ಸುದ್ದಿ ಕೇಳುವಿರಿ, ಅಧಿಕಾರಿಗಳಿಂದ ಅನುಕೂಲ.
Advertisement
ಕಟಕ: ಅಂದುಕೊಂಡ ಕಾರ್ಯದಲ್ಲಿ ಯಶಸ್ಸು, ಕಾರ್ಯ ಪ್ರಗತಿಗಾಗಿ ಅಧಿಕ ಧನವ್ಯಯ, ಆರೋಗ್ಯದಲ್ಲಿ ಏರುಪೇರು, ಅಲ್ಪ ಆದಾಯ ಅಧಿಕ ಖರ್ಚು, ನಂಬಿಕಸ್ಥರಿಂದ ಅಪವಾದ-ನಷ್ಟ, ಹಿತ ಶತ್ರುಗಳ ಕಾಟ, ಆತ್ಮೀಯರೇ ನಿಮ್ಮನ್ನ ವಂಚಿಸುವರು.
ಸಿಂಹ: ಕುಟುಂಬದಲ್ಲಿ ನೆಮ್ಮದಿಯ ವಾತಾವರಣ, ಅಧಿಕಾರಿಗಳೊಂದಿಗೆ ಕಲಹವಾಗುವ ಸಾಧ್ಯತೆ, ನೀವಾಡುವ ಮಾತಿನಿಂದ ವಾದ-ವಿವಾದ, ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ಮನೆ ನಿರ್ಮಾಣಕ್ಕೆ ಕೈ ಹಾಕುವಿರಿ, ಜೊತೆಯಲ್ಲಿದ್ದು ಸಂಕಷ್ಟಕ್ಕೆ ಸಿಲುಕಿಸುವರು ಎಚ್ಚರಿಕೆ, ಕೆಲಸ ಕಾರ್ಯಗಳಲ್ಲಿ ಅಲ್ಪ ಪ್ರಗತಿ, ಸ್ಥಿರಾಸ್ತಿ ವಿಚಾರದಲ್ಲಿ ತಲೆ ಹಾಕಬೇಡಿ, ನೆಮ್ಮದಿಯ ಜೀವನಕ್ಕೆ ಮನಸ್ಸು ಬಯಸುವುದು.
ಕನ್ಯಾ: ಮನೆ ಕಟ್ಟುವಲ್ಲಿ ಅಧಿಕ ಆಲೋಚನೆ, ಸಮಾಜದಲ್ಲಿ ಉತ್ತಮ ಗೌರವ, ಆರೋಗ್ಯದಲ್ಲಿ ಚೇತರಿಕೆ, ಕೃಷಿಯಲ್ಲಿ ನಷ್ಟ, ಅಕ್ರಮ ಸಂಪಾದನೆಯಿಂದ ದೂರ ಉಳಿಯುವಿರಿ, ಬುದ್ಧಿವಂತಿಕೆಯಿಂದ ಕಾರ್ಯ ಸಫಲ, ಕೆಲಸ ಕಾರ್ಯಗಳಲ್ಲಿ ತಾಳ್ಮೆ ಅತ್ಯಗತ್ಯ, ಆತುರ ನಿರ್ಧಾರಗಳಲ್ಲಿ ಎಚ್ಚರಿಕೆ, ದುಷ್ಟರಿಂದ ದೂರವಿರುವುದು ಉತ್ತಮ, ಅನಗತ್ಯ ಖರ್ಚು ಮಾಡುವಿರಿ.
ತುಲಾ: ನೆಮ್ಮದಿ ಜೀವನಕ್ಕೆ ಕಾಯುತ್ತಿರುವಿರಿ, ಸಾಲಗಾರರಿಂದ ಕಿರಿಕಿರಿ, ದಾಯಾದಿಗಳೊಂದಿಗೆ ಕಲಹ, ಅನಗತ್ಯ ಅಧಿಕ ಸಿಟ್ಟು ಮಾಡಿಕೊಳ್ಳುವ ಸಾಧ್ಯತೆ, ಶೀತ ಸಂಬಂಧಿತ ರೋಗ ಬಾಧೆ, ಆಕಸ್ಮಿಕ ಹಣಕಾಸು ಪ್ರಾಪ್ತಿ, ಮಾನಹಾನಿ, ಗೌರವಕ್ಕೆ ಧಕ್ಕೆ.
ವೃಶ್ಚಿಕ; ಆರ್ಥಿಕ ಪರಿಸ್ಥಿತಿ ಏರುಪೇರು, ತಂದೆ-ಮಕ್ಕಳಲ್ಲಿ ವೈಮನಸ್ಸು, ಹಿತ ಶತ್ರುಗಳ ಕಾಟ, ಸುಖ ಭೋಜನ ಪ್ರಾಪ್ತಿ, ದೇಹದಲ್ಲಿ ಆಲಸ್ಯ ಮನೋಭಾವ, ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ, ಕಾರ್ಯಗಳಲ್ಲಿ ನಿಧಾನ, ಪಾಪ ಕಾರ್ಯಕ್ಕೆ ಮನಸ್ಸು.
ಧನಸ್ಸು: ವಿದ್ಯಾರ್ಥಿಗಳಿಗೆ ಅನುಕೂಲವಾದ ವಾತಾವರಣ, ಮನಸ್ಸಿನಲ್ಲಿ ಅತಿಯಾದ ಭಯ-ಆತಂಕ, ಮಾನಸಿಕವಾಗಿ ಗೊಂದಲ, ದುಷ್ಟರ ಸಹವಾಸದಿಂದ ಸಂಕಷ್ಟ, ಕಾರ್ಯ ಸಾಧನೆಗಾಗಿ ತಿರುಗಾಟ, ದಾಯಾದಿಗಳ ಕಲಹ, ಪುಣ್ಯ ಕ್ಷೇತ್ರಕ್ಕೆ ಪ್ರಯಾಣ ಸಾಧ್ಯತೆ, ಸ್ಥಿರಾಸ್ತಿಯಿಂದ ಲಾಭ, ಆರೋಗ್ಯದಲ್ಲಿ ಚೇತರಿಕೆ.
ಮಕರ: ವೈರಿಗಳು ಹೆಚ್ಚಾಗುವರು, ಇಷ್ಟಾರ್ಥ ಸಿದ್ಧಿಗಾಗಿ ಓಡಾಟ, ಮನೆಯಲ್ಲಿ ಅಶಾಂತಿ ವಾತಾವರಣ, ಗೃಹ ಬದಲಾವಣೆಗೆ ಮನಸ್ಸು, ಸಾಲ ಮಾಡುವ ಚಿಂತನೆ, ಸ್ಥಿರಾಸ್ತಿ-ವಾಹನದಿಂದ ತೊಂದರೆ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ಆತ್ಮೀಯರೊಂದಿಗೆ ಕಲಹ.
ಕುಂಭ: ಹಿರಿಯರಿಂದ ಉತ್ತಮ ಸಲಹೆ ಲಭಿಸುವುದು, ಮನೆಗೆ ಅತಿಥಿಗಳ ಆಗಮನ, ವ್ಯಾಪಾರೋದ್ಯಮದಲ್ಲಿ ನಷ್ಟ ಸಾಧ್ಯತೆ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರಿಕೆ, ಒತ್ತಡದ ಜೀವನ ನಿಮ್ಮದಾಗುವುದು, ಮನಸ್ಸಿನಲ್ಲಿ ಆತಂಕ ಹೆಚ್ಚಾಗುವುದು.
ಮೀನ: ಕೆಲಸ ಕಾರ್ಯಗಳಲ್ಲಿ ವಿಳಂಬ, ಹಿರಿಯರಿಂದ ಅನುಕೂಲ, ಪರಿಶ್ರಮಕ್ಕೆ ತಕ್ಕ ವರಮಾನ, ಕಾರ್ಯಕ್ಷೇತ್ರದಲ್ಲಿ ಒತ್ತಡ, ಕೆಟ್ಟ ಮಾತುಗಳಿಂದ ನಿಂದನೆ, ದಂಡ ಕಟ್ಟುವ ಸಾಧ್ಯತೆ.