ಪಂಚಾಂಗ: ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಶುಕ್ಲ ಪಕ್ಷ, ತೃತೀಯಾ ತಿಥಿ,
ಶನಿವಾರ, ರೋಹಿಣಿ ನಕ್ಷತ್ರ,
ಬೆಳಗ್ಗೆ 10:56 ನಂತರ ಮೃಗಶಿರ ನಕ್ಷತ್ರ
ದಿನ ವಿಶೇಷ: ಅಕ್ಷಯ ತೃತೀಯಾ
Advertisement
ಶುಭ ಘಳಿಗೆ: ಬೆಳಗ್ಗೆ 7:33 ರಿಂದ 9:10
ಅಶುಭ ಘಳಿಗೆ: ಬೆಳಗ್ಗೆ 9:10 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:13 ರಿಂದ 10:47
ಗುಳಿಕಕಾಲ: ಬೆಳಗ್ಗೆ 6:04 ರಿಂದ 7:39
ಯಮಗಂಡಕಾಲ: ಮಧ್ಯಾಹ್ನ 1:55 ರಿಂದ 3:29
Advertisement
ಮೇಷ: ಸ್ಥಿರಾಸ್ತಿ ವಿಚಾರದಲ್ಲಿ ಆತಂಕ, ಮಕ್ಕಳಿಂದ ಅವಮಾನ, ಬೇಸರದ ಸನ್ನಿವೇಶ, ದುಶ್ಚಟಗಳು ಹೆಚ್ಚಾಗುವುದು, ಪ್ರೀತಿ ವಾತ್ಸಲ್ಯ ಭಾವನೆಗಳಿಗೆ ಧಕ್ಕೆ, ಒಳ್ಳೆಯತನವೇ ಕೆಡುಕಾಗುವುದು.
Advertisement
ವೃಷಭ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ಎಚ್ಚರ, ಗುಪ್ತ ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಹಿತ ಶತ್ರುಗಳ ಕಾಟ, ಸ್ವಯಂಕೃತ್ಯಗಳಿಂದ ನಷ್ಟ,
ಉದ್ಯೋಗದಲ್ಲಿ ಸಂಕಷ್ಟ.
ಮಿಥುನ: ಶುಭ ಕಾರ್ಯಗಳಲ್ಲಿ ಭಾಗಿ, ಮೋಜು-ಮಸ್ತಿಗಾಗಿ ತಿರುಗಾಟ, ಅಲಂಕಾರಿಕ ವಸ್ತುಗಳ ಖರೀದಿ, ಮಹಿಳೆಯರಿಗಾಗಿ ಅಧಿಕ ಖರ್ಚು, ಪ್ರೇಮದ ಬಲೆಯಲ್ಲಿ ಸಿಲುಕುವಿರಿ.
ಕಟಕ: ಅಧಿಕ ಮೊಂಡುತನ, ನಿರ್ಧಾರಗಳಲ್ಲಿ ಆತುರ, ಹೊಗಳಿಕೆ ಮಾತುಗಳಿಂದ ಸಮಸ್ಯೆ, ಸ್ತ್ರೀಯರಿಂದ ಅವಮಾನ, ಸ್ಥಿರಾಸ್ತಿ-ವಾಹನ ನಷ್ಟ.
ಸಿಂಹ: ಸ್ವಂತ ಕೆಲಸಗಳಿಗಾಗಿ ಪ್ರಯಾಣ, ವ್ಯಾಪಾರ-ಉದ್ಯೋಗದಲ್ಲಿ ಅಭಿವೃದ್ಧಿ, ಮಕ್ಕಳ ಪ್ರೇಮ ವಿಚಾರದಲ್ಲಿ ಭಯ, ಉದ್ಯೋಗ ಸ್ಥಳದಲ್ಲಿ ಹೊಗಳಿಕೆ, ಮಹಿಳೆಯರಿಂದ ನೋವು.
ಕನ್ಯಾ: ಸ್ಥಿರಾಸ್ತಿ-ವಾಹನ ಲಾಭ, ಮಹಿಳೆಯರಿಂದ ಧನಾಗಮನ, ಓಡಾಟಕ್ಕಾಗಿ ಅಧಿಕ ಖರ್ಚು, ಆಕಸ್ಮಿಕ ವಿಲಾಸಿ ವಸ್ತುಗಳ ಖರೀದಿ, ಮಾತಿನಿಂದ ಸಮಸ್ಯೆ, ಮೌನವಾಗಿರುವ ಆಲೋಚನೆ ಮಾಡುವಿರಿ.
ತುಲಾ: ಅನಿರೀಕ್ಷಿತ ಪ್ರಯಾಣ, ವಾಹನ ಚಾಲನೆಯಲ್ಲಿ ತೊಂದರೆ, ಸಹೋದರಿಯಿಂದ ಲಾಭ, ಮಿತ್ರರಿಂದ ಸಹಕಾರ, ಉದ್ಯಮದಲ್ಲಿ ಲಾಭ.
ವೃಶ್ಚಿಕ: ಐಷಾರಾಮಿ ಜೀವನಕ್ಕಾಗಿ ಖರ್ಚು, ದುಶ್ಚಟಗಳಿಗೆ ಹಣವ್ಯಯ, ಇಲ್ಲ ಸಲ್ಲದ ಅಪವಾದ, ಸ್ತ್ರೀಯರಿಗೆ ನಿಂದನೆ ಮಾಡುವಿರಿ, ಆತ್ಮೀಯರ ಆರೋಗ್ಯದಲ್ಲಿ ಏರುಪೇರು, ವಿಪರೀತ ಖರ್ಚು. ಕುಟುಂಬ ಸಮೇತ ಪ್ರಯಾಣ.
ಧನಸ್ಸು: ತಂದೆಯ ನಡವಳಿಕೆಯಿಂದ ಬೇಸರ, ಸಂತಾನ ದೋಷ, ದುಶ್ಚಟಗಳಿಂದ ಅನಾರೋಗ್ಯ, ವಿಪರೀತ ಸಾಲ ಬಾಧೆ, ಶತ್ರುಗಳ ಕಾಟ, ಗೌರವಕ್ಕೆ ಧಕ್ಕೆ.
ಮಕರ: ಪ್ರೇಮ ವಿಚಾರಕ್ಕೆ ವಿರೋಧ, ಕಾನೂನುಬಾಹಿತ ಸಂಪಾದನೆ, ವಿಕೃತ ಆಸೆಗಳಿಗೆ ಬಲಿ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಕಲಾವಿದರಿಗೆ ಉತ್ತಮ ಅವಕಾಶ, ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ.
ಕುಂಭ: ಮಕ್ಕಳು ಶತ್ರುವಾಗುವರು, ಮಹಿಳಾ ಮಿತ್ರರಿಂದ ನೋವು, ದಾಂಪತ್ಯ ಜೀವನದಲ್ಲಿ ನೆಮ್ಮದಿ, ತಂದೆಯಿಂದ ಲಾಭ, ಸ್ಥಿರಾಸ್ತಿ-ವಾಹನ ಖರೀದಿಗೆ ಅಡೆತಡೆ.
ಮೀನ: ಆಕಸ್ಮಿಕ ಅವಘಡ, ಸ್ತ್ರೀಯರಿಂದ ಉದ್ಯೋಗ ನಷ್ಟ, ಬಂಧುಗಳಿಂದ ಸಮಸ್ಯೆ, ರೋಗ ಬಾಧೆ, ಆಯುಷ್ಯಕ್ಕೆ ತೊಂದರೆ, ಉದ್ಯೋಗದಲ್ಲಿ ಸೋಲು, ನಿರಾಸೆಗಳು, ಕೆಟ್ಟಾಲೋಚನೆ.