Connect with us

Dina Bhavishya

ದಿನಭವಿಷ್ಯ: 23-11-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಪೌರ್ಣಿಮೆ
ಬೆಳಗ್ಗೆ 11:10 ನಂತರ ಪ್ರಥಮಿ
ಶುಕ್ರವಾರ, ಕೃತ್ತಿಕಾ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:43 ರಿಂದ 12:09
ಗುಳಿಕಕಾಲ: ಬೆಳಗ್ಗೆ 7:51 ರಿಂದ 9:17
ಯಮಗಂಡಕಾಲ: ಮಧ್ಯಾಹ್ನ 3:02 ರಿಂದ 4:28

ಮೇಷ: ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ಸ್ತಿರಾಸ್ಥಿ ನೋಂದಣಿ ಮಾಡಿಕೊಳ್ಳುವಿರಿ, ಮೇಲಾಧಿಕಾರಿಗಳಿಂದ ಸಹಾಯ, ರಾಜಕೀಯ ವ್ಯಕ್ತಿಗಳಿಂದ ಸಹಕಾರ, ಆರ್ಥಿಕ ಸಮಸ್ಯೆ ನಿವಾರಣೆ.

ವೃಷಭ: ಪಿತ್ರಾರ್ಜಿತ ಆಸ್ತಿ ತಗಾದೆಯಾದ್ರೂ ಅನುಕೂಲ, ಸ್ವಯಂಕೃತ ಅಪರಾಧಗಳಿಂದ ನಷ್ಟ, ಸಾಲದ ಸುಳಿಗೆ ಸಿಲುಕುವಿರಿ, ರೋಗ ಬಾಧೆ, ಆಕಸ್ಮಿಕ ದುರ್ಘಟನೆ, ಮಾನಸಿಕ ನೆಮ್ಮದಿಗೆ ಭಂಗ.

ಮಿಥುನ: ಗೃಹ ಬದಲಾವಣೆ, ಪತ್ರ ವ್ಯವಹಾರಕ್ಕೆ ಖರ್ಚು, ಅಧಿಕ ಧನವ್ಯಯ, ಅಧಿಕಾರಿಗಳಿಂದ ಆರ್ಥಿಕ ಸಂಕಷ್ಟ, ಪೆಟ್ಟಾಗುವ ಸಾಧ್ಯತೆ.

ಕಟಕ: ಕೃಷಿಕರಿಗೆ ಲಾಭ, ಸಾಲಗಾರರಿಂದ ಮುಕ್ತಿ ಸಾಧ್ಯತೆ, ಅಹಂಭಾವದ ಮಾತುಗಳನ್ನಾಡುವಿರಿ, ಮಿತ್ರರಿಂದ ಬೇಸರವಾಗುವುದು, ಮಾನಸಿಕ ವ್ಯಥೆ.

ಸಿಂಹ: ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕವಾದ ಖರ್ಚು, ಉದ್ಯೋಗ ನಿಮಿತ್ತ ದೂರ ಪ್ರಯಾಣ.

ಕನ್ಯಾ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಉದ್ಯಮದಲ್ಲಿ ಸಂಕಷ್ಟ ಎದುರಾಗುವುದು, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಮನಸ್ಸಿನಲ್ಲಿ ಆತಂಕ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ತಂದೆಯ ಮಿತ್ರರಿಂದ ಅನುಕೂಲ.

ತುಲಾ: ಆಕಸ್ಮಿಕ ಉದ್ಯೊಗದಲ್ಲಿ ತೊಂದರೆ, ಉದ್ಯೋಗ ಬದಲಾವಣೆಗೆ ಮನಸ್ಸು, ಸಾಲಗಾರರಿಂದ ಆತ್ಮ ಗೌರವಕ್ಕೆ ಧಕ್ಕೆ, ಆಕಸ್ಮಿಕ ಅದೃಷ್ಟ ಒಲಿದು ಬರುವುದು.

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಮಿತ್ರರೊಂದಿಗೆ ಪ್ರಯಾಣ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಉದ್ಯಮ-ವ್ಯಾಪಾರದಲ್ಲಿ ಅನುಕೂಲ, ಮನಸ್ಸಿಗೆ ಮಂದಹಾಸ.

ಧನಸ್ಸು: ಮೇಲಾಧಿಕಾರಿಗಳ ಭೇಟಿ, ರಾಜಕೀಯ ವ್ಯಕ್ತಿಗಳೊಂದಿಗೆ ಚರ್ಚೆ, ಶತ್ರುಗಳಿಂದ ತೊಂದರೆ, ಪುಣ್ಯಕ್ಷೇತ್ರಗಳಿಗೆ ಪ್ರಯಾಣ ಸಾಧ್ಯತೆ.

ಮಕರ: ಮಕ್ಕಳಿಂದ ಆಕಸ್ಮಿಕ ತೊಂದರೆ, ಪೊಲೀಸ್ ಸ್ಟೇಷನ್‍ಗೆ ಅಲೆದಾಟ, ರಾಜಕೀಯ ವ್ಯಕ್ತಿಗಳ ಸಹಾಯ ಕೇಳುವಿರಿ, ಕಲ್ಪನಾ ಲೋಕದಲ್ಲಿ ವಿಹಾರ.

ಕುಂಭ: ಸಾಲಗಾರರಿಂದ ಕಾಟ, ಸ್ಥಿರಾಸ್ತಿ-ವಾಹನ ಮಾರಾಟಕ್ಕೆ ಮನಸ್ಸು, ಪ್ರಯಾಣದಲ್ಲಿ ವಸ್ತುಗಳ ಕಳವು, ಬಂಧುಗಳಿಂದ ಅನಗತ್ಯ ಕಿರಿಕಿರಿ, ಹಿತ ಶತ್ರುಗಳ ಕಾಟ.

ಮೀನ: ಉನ್ನತ ವಿದ್ಯಾಭ್ಯಾಸಕ್ಕಾಗಿ ಪ್ರಯಾಣ, ತಲೆ ನೋವು, ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಯತ್ನ ಕಾರ್ಯದಲ್ಲಿ ಜಯ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *