Connect with us

Dina Bhavishya

ದಿನಭವಿಷ್ಯ: 22-11-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ಚತುರ್ದಶಿ ತಿಥಿ
ಗುರುವಾರ, ಭರಣಿ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:36 ರಿಂದ 3:02
ಗುಳಿಕಕಾಲ: ಬೆಳಗ್ಗೆ 9:17 ರಿಂದ 10:43
ಯಮಗಂಡಕಾಲ: ಬೆಳಗ್ಗೆ 6:24 ರಿಂದ 7:51

ಮೇಷ: ಆಸೆ ಆಕಾಂಕ್ಷೆಗಳು ಹೆಚ್ಚಾಗುವುದು, ಕಲ್ಪನಾ ಲೋಕದಲ್ಲಿ ವಿಹಾರ, ಸಂಗಾತಿಯೊಂದಿಗೆ ಕಿರಿಕಿರಿ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸ್ಥಿರಾಸ್ತಿಯಿಂದ ಲಾಭ, ಆಕಸ್ಮಿಕ ಸ್ವತ್ತು ಲಭಿಸುವುದು, ಸ್ತ್ರೀಯರಿಂದ ಅನುಕೂಲ.

ವೃಷಭ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಉತ್ತಮ, ಪಾಲುದಾರಿಕೆಯಲ್ಲಿ ಅನುಕೂಲ, ಸ್ನೇಹಿತರಿಂದ ಸಾಲ ಲಭಿಸುವುದು, ಉಷ್ಣ ರೋಗ ಬಾಧೆ, ಹಿತ ಶತ್ರುಗಳಿಂದ ನಷ್ಟ, ಸೋಲು-ಅವಮಾನಗಳಿಂದ ವ್ಯಥೆ.

ಮಿಥುನ: ಪ್ರೀತಿ ಪ್ರೇಮದಲ್ಲಿ ಬಾಂಧವ್ಯ ವೃದ್ಧಿ, ಸ್ತ್ರೀಯರಿಂದ ಧನ ಲಾಭ, ಮಾತೃವಿನಿಂದ ಅನುಕೂಲ, ದುಶ್ಚಟಗಳು ಅಧಿಕ, ಮೋಜು-ಮಸ್ತಿಗಾಗಿ ಖರ್ಚು, ತಲೆ ನೋವು, ರಕ್ತ ದೋಷ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ಸ್ಥಿರಾಸ್ತಿ-ವಾಹನ ಖರೀದಿ ಆಲೋಚನೆ, ವಿಲಾಸೀ ಜೀವಕ್ಕೆ ಮನಸ್ಸು, ಮಹಿಳೆಯರೊಂದಿಗೆ ಮನಃಸ್ತಾಪ, ಪ್ರೇಮ ವಿಚಾರದಲ್ಲಿ ವೈಮನಸ್ಸು, ಮನೆ ವಾತಾವರಣದಲ್ಲಿ ಅಶಾಂತಿ, ಕಲಾವಿದರಿಗೆ ಉತ್ತಮ ಅವಕಾಶ, ಮಾರಾಟಗಾರರಿಗೆ ಅನುಕೂಲ, ಉದ್ಯೋಗದಲ್ಲಿ ಲಾಭ, ಆಕಸ್ಮಿಕ ಅಪವಾದ.

ಸಿಂಹ: ಸ್ತ್ರೀಯರಿಂದ ನೋವು, ದಾಂಪತ್ಯದಲ್ಲಿ ಗೊಂದಲ, ಕಾರಣವಿಲ್ಲದ ಮನಃಸ್ತಾಪ, ಉದ್ಯೋಗ ಬದಲಾವಣೆಗೆ ಮನಸ್ಸು, ಆಕಸ್ಮಿಕ ಸಂಕಷ್ಟ, ಕೆಲಸ ನಿಮಿತ್ತ ಪ್ರಯಾಣ, ಗೃಹ ಬದಲಾವಣೆಗೆ ಹಂಬಲ, ಹೇಳಿಕೆ ಮಾತಿನಿಂದ ಅಶಾಂತಿ.

ಕನ್ಯಾ: ನೀವಾಡುವ ಮಾತಿನಿಂದ ಕಲಹ, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಪಿತ್ರಾರ್ಜಿತ ಆಸ್ತಿ ತಗಾದೆಗಳಲ್ಲಿ ಜಯ, ಶಕ್ತಿದೇವತೆ ದರ್ಶನಕ್ಕೆ ಹಂಬಲ,ಆಕಸ್ಮಿಕ ಪ್ರಯಾಣದಿಂದ ನಷ್ಟ, ಆರೋಗ್ಯದ ಬಗ್ಗೆ ಎಚ್ಚರ, ಆಕಸ್ಮಿಕ ಧನ ಲಾಭ.

ತುಲಾ: ವಿಪರೀತ ಕೋಪ, ಆತುರ ಸ್ವಭಾವ, ಪ್ರೇಮ ಬಲೆಯಲ್ಲಿ ಸಿಲುಕುವಿರಿ, ಭಾವನಾತ್ಮಕವಾಗಿ ಮೋಸ, ವ್ಯಾಪಾರ ವ್ಯವಹಾರದಲ್ಲಿ ಧನಲಾಭ, ಸಂಶಯಾತ್ಮಕ ಮಾತುಗಳಿಂದ ವೈಮನಸ್ಸು, ದಾಂಪತ್ಯ ಅನ್ಯೋನ್ಯತೆಗೆ ಹರಸಾಹಸ, ಭಯ ಕಾಡುವುದು, ಅಪವಾದಗಳ ಆತಂಕ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ.

ವೃಶ್ಚಿಕ: ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಸ್ಥಿರಾಸ್ತಿ-ವಾಹನಕ್ಕಾಗಿ ಹಣ ಪಾವತಿ, ಆರೋಗ್ಯದಲ್ಲಿ ಏರುಪೇರು, ಗರ್ಭ ದೋಷ, ಪೆಟ್ಟಾಗುವ ಸಾಧ್ಯತೆ, ಎಲೆಕ್ಟ್ರಾನಿಕ್ ವಸ್ತು ಕಳೆದುಕೊಳ್ಳುವಿರಿ, ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಹುಡುಕಾಟ, ಜೈಲು ವಾಸದ ಭೀತಿ.

ಧನಸ್ಸು: ಮಕ್ಕಳಿಂದ ಅನುಕೂಲ, ಪ್ರೇಮ ವಿಚಾರದಲ್ಲಿ ಜಯ, ಕಫ, ಗಂಟಲು ಕೆಮ್ಮು, ಉಸಿರಾಟ ಸಮಸ್ಯೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ವಸ್ತ್ರಾಭರಣ ವ್ಯಾಪಾರಿಗಳಿಗೆ ಲಾಭ, ದಾಯಾದಿ ಶತ್ರುಗಳ ಕಾಟ, ನೆರೆಹೊರೆಯವರೊಂದಿಗೆ ಶತ್ರುತ್ವ, ಸ್ನೇಹಿತರೇ ಶತ್ರುವಾಗುವರು.

ಮಕರ: ಉದ್ಯೋಗ ಲಭಿಸುವುದು, ಆರ್ಥಿಕ ಪರಿಸ್ಥಿತಿ ಸುಧಾರಣೆ, ಸ್ಥಿರಾಸ್ತಿ ವಾಹನದಿಂದ ಧನಾಗಮನ, ಸಂಶಯದಿಂದ ಕುಟುಂಬದಲ್ಲಿ ಕಲಹ, ಮಕ್ಕಳ ಜೀವನದಲ್ಲಿ ಪ್ರಗತಿ, ಪ್ರೇಮ ವಿಚಾರದಲ್ಲಿ ಒತ್ತಡ, ಸಂತಾನ ದೋಷ, ಸ್ತ್ರೀಯರಿಂದ ಉದ್ಯೋಗದಲ್ಲಿ ಕಿರಿಕಿರಿ, ಸಂಗಾತಿಯಿಂದ ಲಾಭ, ಧನ ಸಂಪತ್ತು ಪ್ರಾಪ್ತಿ.

ಕುಂಭ: ಸ್ಥಿರಾಸ್ತಿ-ವಾಹನ ಯೋಗ, ಶಕ್ತಿದೇವತೆಯ ದರ್ಶನ ಯೋಗ, ಪ್ರಯಾಣದಿಂದ ತೊಂದರೆ, ವಸ್ತುಗಳು ಕಳವು, ರಕ್ತ ಸಂಬಂಧಿಗಳಿಂದ ಅಪವಾದ, ಎದೆ ನೋವು-ಅಧಿಕ ಉಷ್ಣ, ಉಸಿರಾಟದ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ಓಡಾಟ, ಉದ್ಯೋಗ ಲಭಿಸುವುದು.

ಮೀನ: ಎಲೆಕ್ಟ್ರಾನಿಕ್ ವಸ್ತುಗಳಿಂದ ತೊಂದರೆ, ವಾಹನದಿಂದ ಪೆಟ್ಟಾಗುವ ಸಾಧ್ಯತೆ, ನಂಬಿದ ಜನರಿಂದ ಮೋಸ, ಅಗೌರವ-ಅಪಕೀರ್ತಿ, ಸೋಲು, ನಷ್ಟ, ನಿರಾಸೆ, ಹಣಕಾಸು ಅಡಚಣೆ, ನೀವಾಡಿದ ಮಾತಿನಿಂದ ವೈಮನಸ್ಸು, ಗೌರವಕ್ಕೆ ಚ್ಯುತಿ, ಅಪವಿತ್ರವಾದ ಕೆಲಸ ಕಾರ್ಯ, ಬೆಂಕಿಯಿಂದ ತೊಂದರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *