ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಶುಕ್ರವಾರ, ಚಿತ್ತ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28
Advertisement
ರಾಹುಕಾಲ: ಬೆಳಗ್ಗೆ 10:45 ರಿಂದ 12:16
ಗುಳಿಕಕಾಲ: ಬೆಳಗ್ಗೆ 7:43 ರಿಂದ 9:14
ಯಮಗಂಡಕಾಲ: ಮಧ್ಯಾಹ್ನ 3:18 ರಿಂದ 4:47
Advertisement
ಮೇಷ: ಸ್ಥಿರಾಸ್ತಿ-ವಾಹನದಿಂದ ಲಾಭ, ವಿದ್ಯಾರ್ಥಿಗಳಲ್ಲಿ ಆತಂಕ, ಓದಿನಲ್ಲಿ ನಿರಾಸಕ್ತಿ, ಮಾನಸಿಕ ಒತ್ತಡ, ಆರ್ಥಿಕ ಸಮಸ್ಯೆ ಬಗೆಹರಿಯುವುದು.
Advertisement
ವೃಷಭ: ಓದಿನಲ್ಲಿ ಗೊಂದಲ, ಭೂ ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಗಾಗಿ ಹಣ ವಿನಿಯೋಗ, ಉದ್ಯೋಗಕ್ಕಾಗಿ ಖರ್ಚು, ವ್ಯಾಪಾರಕ್ಕಾಗಿ ಅಧಿಕ ಖರ್ಚು.
Advertisement
ಮಿಥುನ: ಆರ್ಥಿಕ ಪರಿಸ್ಥಿತಿ ಚೇತರಿಕೆ, ರಾಜಯೋಗ ದಿನ, ಉದ್ಯೋಗ ನಿಮಿತ್ತ ಪ್ರಯಾಣ, ಉಷ್ಣ ಬಾಧೆ, ಒತ್ತಡಗಳಿಂದ ನಿದ್ರಾಭಂಗ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.
ಕಟಕ: ಸ್ವಯಂಕೃತ ಅಪರಾಧ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ, ಹಿತವಾದ ಮಾತುಗಳಿಂದ ಮೆಚ್ಚುಗೆ, ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಬಡ್ತಿ, ಗೌರವ ಸನ್ಮಾನ ಪ್ರಾಪ್ತಿ, ತಾಳ್ಮೆ ಕಳೆದುಕೊಳ್ಳುವಿರಿ.
ಸಿಂಹ: ಸ್ಥಿರಾಸ್ತಿಗಾಗಿ ಖರ್ಚು, ವಾಹನ ಖರೀದಿ, ದೀರ್ಘಕಾಲದ ರೋಗ ಬಾಧೆ, ಮಾನಸಿಕ ನೋವು, ವಿದ್ಯಾಭ್ಯಾಸದಲ್ಲಿ ಹಿನ್ನಡೆ,
ನಿದ್ರಾಭಂಗ.
ಕನ್ಯಾ: ಸ್ವಂತ ಉದ್ಯಮ ಪ್ರಾರಂಭಕ್ಕೆ ಸಹಕಾರ, ವ್ಯವಹಾರಕ್ಕೆ ಸಾಲ ಸೌಲಭ್ಯ ಪ್ರಾಪ್ತಿ, ಉದ್ಯೋಗ ಬದಲಾವಣೆಯಿಂದ ಅದೃಷ್ಟ,
ಬೇಜವಾಬ್ದಾರಿತನದಿಂದ ನಷ್ಟ, ದಾಯಾದಿಗಳಿಂದ ಕಿರಿಕಿರಿ, ಮಾನಸಿಕ ವ್ಯಥೆ, ನಿದ್ರಾಭಂಗ.
ತುಲಾ: ಉದ್ಯೋಗ ಸ್ಥಳದಲ್ಲಿ ಉತ್ತಮ ಗೌರವ, ಹಿರಿಯ ಸಹೋದರನೊಂದಿಗೆ ವಾಗ್ವಾದ, ಕುಟುಂಬದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮನಸ್ಸಿನಲ್ಲಿ ಆತಂಕ.
ವೃಶ್ಚಿಕ: ಅಧಿಕ ಉಷ್ಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಸ್ಥಳದಲ್ಲಿ ಕಲಹ, ಶತ್ರುಗಳು ಅಧಿಕವಾಗುವರು, ವಿಶ್ರಾಂತಿ ಇಲ್ಲದ ವಿದ್ಯಾಭ್ಯಾಸ,
ಧನಸ್ಸು: ಅನಿರೀಕ್ಷಿತ ಧನಾಗಮನ, ಮಕ್ಕಳಲ್ಲಿ ಗೊಂದಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆತ್ಮೀಯರು ದೂರವಾಗುವರು.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಕಸ್ಮಿಕ ಧನಾಗಮನ, ಹಳೇ ವಾಹನ ಖರೀದಿ, ಜಮೀನು ಖರೀದಿಗೆ ಮನಸ್ಸು, ಮಿತ್ರರಿಂದ ಸಹಾಯ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ.
ಕುಂಭ: ಭೂ ವ್ಯವಹಾರದಲ್ಲಿ ನಷ್ಟ, ಉದ್ಯೋಗ ಬದಲಾವಣೆಯಿಂದ ತೊಂದರೆ, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ, ತಂದೆ-ಮಕ್ಕಳಲ್ಲಿ ಮನಃಸ್ತಾಪ, ಆರೋಗ್ಯದಲ್ಲಿ ಎಚ್ಚರಿಕೆ.
ಮೀನ: ತಂದೆಯಿಂದ ಅನಿರೀಕ್ಷಿತ ಧನ ಸಹಾಯ, ದೂರ ಪ್ರದೇಶದಲ್ಲಿ ಉದ್ಯೋಗ, ಮಕ್ಕಳ ಭವಿಷ್ಯಕ್ಕಾಗಿ ಪ್ರಯಾಣ.