ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ತ್ರಯೋದಶಿ ತಿಥಿ,
ಶುಕ್ರವಾರ, ಮೃಗಶಿರ ನಕ್ಷತ್ರ
ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:46 ರಿಂದ 12:28
Advertisement
ರಾಹುಕಾಲ: ಬೆಳಗ್ಗೆ 10:54 ರಿಂದ 12:30
ಗುಳಿಕಕಾಲ: ಬೆಳಗ್ಗೆ 7:42 ರಿಂದ 9:18
ಯಮಗಂಡಕಾಲ: ಮಧ್ಯಾಹ್ನ 3:41 ರಿಂದ 5:17
Advertisement
ಮೇಷ: ವ್ಯಾಪಾರೋದ್ಯಮದಲ್ಲಿ ಲಾಭ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಮಿತ್ರರಿಂದ ಕಿರಿಕಿರಿ, ವಯೋವೃದ್ಧರಿಂದ ತೊಂದರೆ, ಅಕ್ರಮ ಸಂಪಾದನೆಗೆ ಮನಸ್ಸು.
Advertisement
ವೃಷಭ: ಸ್ಥಿರಾಸ್ತಿ-ವಾಹನ ಖರೀದಿಯೋಗ, ಶುಭ ಕಾರ್ಯಗಳಿಗೆ ಸಾಲ, ಕಾರ್ಯ ನಿಮಿತ್ತ ಪ್ರಯಾಣ, ದಾಂಪತ್ಯದಲ್ಲಿ ವಿರಸ.
Advertisement
ಮಿಥುನ: ಪ್ರೇಮ ವಿಚಾರದಲ್ಲಿ ಕಲಹ, ಕೋರ್ಟ್ ಕೇಸ್‍ಗಳು ಬಗೆಹರಿಯುವುದು, ಉದ್ಯೋಗ ಬದಲಾವಣೆ, ಸ್ಥಳ ಬದಲಾವಣೆಯಿಂದ ತೊಂದರೆ.
ಕಟಕ: ಚೀಟಿ ವ್ಯವಹಾರದಲ್ಲಿ ಮೋಸ, ಮಹಿಳಾ ಮಿತ್ರರಿಂದ ಕಿರಿಕಿರಿ, ಹಿತ ಶತ್ರುಗಳಿಂದ ಸಮಸ್ಯೆ, ಗೌರವಕ್ಕೆ ಚ್ಯುತಿ, ಮಕ್ಕಳ ನಡವಳಿಕೆಯಲ್ಲಿ ಚೇತರಿಕೆ, ಕುಟುಂಬಸ್ಥರಿಂದ ವಿರೋಧ.
ಸಿಂಹ: ಉದ್ಯೋಗ ಬಡ್ತಿಯಲ್ಲಿ ಅಡೆತಡೆ, ಉದ್ಯೋಗಾವಕಾಶ ಪ್ರಾಪ್ತಿ, ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ, ದೀರ್ಘಕಾಲದ ಸ್ಥಿರಾಸ್ತಿ ಮಾರಾಟ.
ಕನ್ಯಾ: ದೂರ ಪ್ರದೇಶದಲ್ಲಿ ಉದ್ಯೋಗ, ವಸ್ತ್ರಾಭರಣ ಖರೀದಿಯೋಗ, ಹಣಕಾಸು ವ್ಯಯ, ಸಾಲಗಾರರಿಂದ ಕಿರಿಕಿರಿ, ದಾಯಾದಿಗಳ ಕಲಹ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸಾಧ್ಯತೆ.
ತುಲಾ: ಧನ ಸಂಪಾದನೆ, ಅನಿರೀಕ್ಷಿತ ಶುಭ ಫಲ, ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಅನುಕೂಲ.
ವೃಶ್ಚಿಕ: ಅನ್ಯರ ಕುತಂತ್ರದಿಂದ ಅವಕಾಶ ಕೈ ತಪ್ಪುವುದು, ಉದ್ಯೋಗ ಬದಲಾವಣೆ, ಉನ್ನತ ಹುದ್ದೆ-ವೇತನ ಪ್ರಾಪ್ತಿ, ಬಂಧುಗಳಿಂದ ಕಿರಿಕಿರಿ, ಸಾಲ ಬಾಧೆ.
ಧನಸ್ಸು: ಉದ್ಯೋಗಸ್ಥರಿಗೆ ಆರ್ಥಿಕ ಸಮಸ್ಯೆ ನಿವಾರಣೆ, ಮಕ್ಕಳ ಪ್ರೀತಿ-ಪ್ರೇಮ ವಿಚಾರದ ಬಗ್ಗೆ ಚಿಂತೆ, ಸ್ಥಿರಾಸ್ತಿ-ವಾಹನ ಖರೀದಿ, ಹಣಕಾಸು ನೆರವು.
ಮಕರ: ತಾಳ್ಮೆಯಿಂದ ವ್ಯವಹಾರ ಮಾಡಿ, ಕೆಲಸ ಕಾರ್ಯಗಳಲ್ಲಿ ಜಯ, ಆತುರ ನಿರ್ಧಾರದಿಂದ ಸಂಕಷ್ಟ, ಉದ್ಯೋಗ ಪ್ರಾಪ್ತಿ, ಸ್ಥಿರಾಸ್ತಿ ವಿಚಾರಗಳು ಕೋರ್ಟ್ ಮೆಟ್ಟಿಲೇರುವುದು.
ಕುಂಭ: ಉದ್ಯೋಗ ನಿಮಿತ್ತ ಓಡಾಟ, ವ್ಯವಹಾರ ನಿಮಿತ್ತ ಪ್ರಯಾಣ, ಮಕ್ಕಳ ನಡವಳಿಕೆಯಿಂದ ಕೋಪ, ಹಳೇ ವಾಹನಕ್ಕಾಗಿ ಖರ್ಚು, ಮನೆ ಖರೀದಿಗಾಗಿ ಮನಸ್ಸು.
ಮೀನ: ಕೌಟುಂಬಿಕ ಕಲಹ, ಆರ್ಥಿಕ ಸಂಕಷ್ಟ, ಸಾಲ ಮಾಡುವ ಪರಿಸ್ಥಿತಿ, ಪ್ರಯಾಣದಲ್ಲಿ ಅಡೆತಡೆ, ಶತ್ರುಗಳು ನಿವಾರಣೆ, ಉದ್ಯೋಗ ನಷ್ಟ ಸಾಧ್ಯತೆ.