Connect with us

ದಿನಭವಿಷ್ಯ: 21-01-2018

ದಿನಭವಿಷ್ಯ: 21-01-2018

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಭಾನುವಾರ, ಪೂರ್ವಭಾದ್ರ ನಕ್ಷತ್ರ

ರಾಹುಕಾಲ: ಸಾಯಂಕಾಲ 4:53 ರಿಂದ 6:20
ಗುಳಿಕಕಾಲ: ಮಧ್ಯಾಹ್ನ 3:27 ರಿಂದ 4:53
ಯಮಗಂಡಕಾಲ: ಮಧ್ಯಾಹ್ನ 12:34 ರಿಂದ 2:01

ಮೇಷ: ಪ್ರಯತ್ನದಿಂದ ಕಾರ್ಯ ಸಿದ್ಧಿ, ಶತ್ರುಗಳು ನಾಶ, ಮಾನಸಿಕ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು, ಯಂತ್ರೋಪಕರಣಗಳಿಂದ ಲಾಭ, ಷೇರು ವ್ಯವಹಾರದಲ್ಲಿ ಅನುಕೂಲ, ಸ್ತ್ರೀಯರಿಗೆ ಶುಭ.

ವೃಷಭ: ಮಂಗಳ ಕಾರ್ಯಗಳಲ್ಲಿ ಭಾಗಿ, ವಿರೋಧಿಗಳಿಂದ ಕುತಂತ್ರ, ಆರೋಗ್ಯದಲ್ಲಿ ಏರುಪೇರು, ಪುಣ್ಯಕ್ಷೇತ್ರ ದರ್ಶನ, ದಾಯಾದಿಗಳ ಭೇಟಿ, ಮನಸ್ಸಿನಲ್ಲಿ ಆತಂಕ, ಮನಃಕ್ಲೇಷ.

ಮಿಥುನ: ವ್ಯಾಪಾರಿಗಳಿಗೆ ಲಾಭ, ದುಶ್ಚಟಗಳಿಂದ ಹಣವ್ಯಯ, ತಾಳ್ಮೆ ಅತ್ಯಗತ್ಯ, ನಾನಾ ರೀತಿಯ ತೊಂದರೆ, ಉದ್ಯೋಗದಲ್ಲಿ ಮಹಿಳೆಯರಿಗೆ ಬಡ್ತಿ, ಮಕ್ಕಳಿಗೆ ಸಹಾಯ, ಶತ್ರುಗಳ ಬಾಧೆ.

ಕಟಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಪರರಿಂದ ಮೋಸ, ಕಾರ್ಯ ಬದಲಾವಣೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಕುಟುಂಬ ಸೌಖ್ಯ.

ಸಿಂಹ: ಇಷ್ಟವಾದ ವಸ್ತುಗಳ ಖರೀದಿ, ಆತ್ಮೀಯರಲ್ಲಿ ಪ್ರೀತಿ, ಶರೀರದಲ್ಲಿ ಆಯಾಸ, ಭೂ ಲಾಭ, ವಾಹನ ರಿಪೇರಿ, ಗುರುಗಳ ದರ್ಶನ, ಉದರ ಬಾಧೆ, ಮಾತೃವಿನಿಂದ ಸಹಾಯ, ಕೃಷಿಕರಿಗೆ ಲಾಭ.

ಕನ್ಯಾ: ಆಕಸ್ಮಿಕ ವಿಪರೀತ ಖರ್ಚು, ಮಾತಿನ ಮೇಲೆ ಹಿಡತವಿರಲಿ, ನಿವೇಶನ ಪ್ರಾಪ್ತಿ, ದಾಂಪತ್ಯದಲ್ಲಿ ಕಲಹ, ಮಾನಸಿಕ ವ್ಯಥೆ, ಪರರಿಂದ ಸಹಾಯ, ದೂರ ಪ್ರಯಾಣ, ಮನಃಕ್ಲೇಷ.

ತುಲಾ: ನಾನಾ ರೀತಿಯ ಸಂಪಾದನೆ, ಮನಸ್ಸಿನಲ್ಲಿ ಗೊಂದಲ, ಸಾಲದಿಂದ ಮುಕ್ತಿ, ದೈವಾನುಗ್ರಹದಿಂದ ಅನುಕೂಲ, ಉತ್ತಮ ಬುದ್ಧಿ ಶಕ್ತಿ, ಅಮೂಲ್ಯ ವಸ್ತುಗಳ ಖರೀದಿ,

ವೃಶ್ಚಿಕ: ಮಕ್ಕಳ ಭಾವನೆಗಳಿಗೆ ಸ್ಪಂದನೆ, ಸ್ಥಿರಾಸ್ತಿ ಖರೀದಿ, ದೇವತಾ ಕಾರ್ಯಗಳಲ್ಲಿ ಭಾಗಿ, ಅತಿಯಾದ ಕೋಪ, ಅನಾವಶ್ಯಕ ದ್ವೇಷ ಸಾಧಿಸುವಿರಿ, ಮಿತ್ರರಲ್ಲಿ ಬಾಂಧವ್ಯ ವೃದ್ಧಿ.

ಧನಸ್ಸು: ಉತ್ತಮ ಬುದ್ಧಿಶಕ್ತಿ, ವೃಥಾ ಅಲೆದಾಟ, ಹೊಸ ವ್ಯವಹಾರದಿಂದ ಲಾಭ, ಆಕಸ್ಮಿಕ ದ್ರವ್ಯ ಲಾಭ, ಸಜ್ಜನರ ಸಹವಾಸದಿಂದ ಕೀರ್ತಿ, ವಸ್ತ್ರಾಭರಣ ಪ್ರಾಪ್ತಿ, ಮಾನಸಿಕ ನೆಮ್ಮದಿ.

ಮಕರ: ವಿವಾಹಕ್ಕೆ ಮಾತುಕತೆ, ವಿದೇಶ ಪ್ರಯಾಣ, ಇಲ್ಲ ಸಲ್ಲದ ಅಪವಾದ, ಅನ್ಯರಿಂದ ನಿಂದನೆ, ಆತ್ಮೀಯರಿಂದ ಪ್ರೀತಿ-ವಾತ್ಸಲ್ಯ, ಅಗ್ನಿಯಿಂದ ಭೀತಿ, ಅಕಾಲ ಭೋಜನ, ಆದಾಯಕ್ಕಿಂತ ಖರ್ಚು ಹೆಚ್ಚು.

ಕುಂಭ: ಯತ್ನ ಕಾರ್ಯದಲ್ಲಿ ಜಯ, ತೀರ್ಥಯಾತ್ರೆ ದರ್ಶನ, ಮನೆಯಲ್ಲಿ ಶಾಂತಿ ವಾತಾವರಣ, ಹೆತ್ತವರಲ್ಲಿ ಪ್ರೀತಿ ವಾತ್ಸಲ್ಯ, ವಿಪರೀತ ಖರ್ಚು, ನಂಬಿಕಸ್ಥರಿಂದ ಮೋಸ, ಹೊಗಳಿಕೆ ಮಾತಿಗೆ ಮರುಳಾಗಬೇಡಿ,

ಮೀನ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಅತಿಯಾದ ಆತ್ಮ ವಿಶ್ವಾಸದಿಂದ ನಿರಾಸೆ, ಸ್ವಂತ ಉದ್ಯಮಸ್ಥರಿಗೆ ಲಾಭ, ಅನ್ಯರನ್ನು ನಿಷ್ಠೂರ ಮಾಡಿಕೊಳ್ಳುವಿರಿ, ನೀವಾಡುವ ಮಾತುಗಳಿಂದ ಮನಃಸ್ತಾಪ, ಪರರ ಮನಸ್ಸಿಗೆ ನೋವು ಮಾಡುವಿರಿ.

Advertisement
Advertisement