Connect with us

ದಿನಾಂಕ : 19-01-2018

ದಿನಾಂಕ : 19-01-2018

ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಶುಕ್ರವಾರ, ಧನಿಷ್ಠ ನಕ್ಷತ್ರ

ಶುಭ ಘಳಿಗೆ: ಬೆಳಗ್ಗೆ 7:24 ರಿಂದ 9:05
ಅಶುಭ ಘಳಿಗೆ: ಬೆಳಗ್ಗೆ 10:48 ರಿಂದ 2:28

ರಾಹುಕಾಲ: ಬೆಳಗ್ಗೆ 11:08 ರಿಂದ 12:34
ಗುಳಿಕಕಾಲ: ಬೆಳಗ್ಗೆ 8:16 ರಿಂದ 9:42
ಯಮಗಂಡಕಾಲ: ಮಧ್ಯಾಹ್ನ 3:26 ರಿಂದ 4:52

ಮೇಷ: ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಕೇಸ್‍ಗಳಲ್ಲಿ ಜಯ, ಗುಪ್ತ ವಿಚಾರಗಳಿಂದ ನೋವು, ಮಾತೃವಿನಿಂದ ಬೇಸರ, ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಧನಾಗಮನ.

ವೃಷಭ: ಉದ್ಯೋಗ ಬದಲಾವಣೆಯ ಚಿಂತೆ, ಪತ್ರ ವ್ಯವಹಾರಗಳಿಂದ ಸಂಕಷ್ಟ, ಆತುರ ನಿರ್ಧಾರಗಳಿಂದ ತೊಂದರೆ, ಅತಿಯಾದ ಕೋಪ, ಆತುರ ಸ್ವಭಾವ, ದಾಂಪತ್ಯದಲ್ಲಿ ಸಮಸ್ಯೆ,
ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಸಾಲ ಬಾಧೆ, ಆರ್ಥಿಕ ಸಂಕಷ್ಟ, ನಿದ್ರಾಭಂಗ.

ಮಿಥುನ: ಶತ್ರುಗಳು ನಾಶ, ಸೇವಕರಿಂದ ಉತ್ತಮ ಕೆಲಸ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಅಧಿಕ ಉಷ್ಣ ಬಾಧೆ, ಉದರ ಬಾಧೆ, ಗುಪ್ತರೋಗಗಳಿಂದ ಅನಾರೋಗ್ಯ, ತಂದೆಯ ಸಾಲ ಬಾಧೆ, ಆರ್ಥಿಕ ಸಂಕಷ್ಟ.

ಕಟಕ: ಮೋಜು-ಮಸ್ತಿ ಮಾಡುವಿರಿ, ನೆಮ್ಮದಿ ಜೀವನ, ಪ್ರತಿಭೆಗೆ ತಕ್ಕ ಮನ್ನಣೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಯಶಸ್ಸು, ಪ್ರೇಮ ವಿಚಾರದಲ್ಲಿ ಅನುಕೂಲ, ಕೆಲಸ ಕಾರ್ಯಗಳಿಗೆ ಸಹಕಾರ, ವ್ಯಾಪಾರ-ಉದ್ಯಮದಲ್ಲಿ ಲಾಭ, ಸ್ವಯಂಕೃತ್ಯಗಳಿಂದ ನಷ್ಟ, ಇಲ್ಲ ಸಲ್ಲದ ಅಪವಾದ, ಅಪಘಾತ ಸಾಧ್ಯತೆ.

ಸಿಂಹ: ಮಾತೃವಿನಿಂದ ಅನುಕೂಲ, ಮಧ್ಯವರ್ತಿಗಳ ಸಹಕಾರ, ಹಣಕಾಸು ಲಾಭ, ಸ್ಥಿರಾಸ್ತಿ ಸಮಸ್ಯೆ ನಿವಾರಣೆ, ಮಕ್ಕಳಿಂದ ನೋವು, ಪಿತ್ರಾರ್ಜಿತ ಆಸ್ತಿ ತಗಾದೆ, ಬಂಧುಗಳಿಂದ ತೊಂದರೆ.

ಕನ್ಯಾ: ಮಿತ್ರರಿಂದ ಕಲಹ, ಆತ್ಮೀಯರೇ ಶತ್ರುವಾಗುವರು, ಸ್ಥಿರಾಸ್ತಿ ತಗಾದೆ, ದಾಯಾದಿಗಳ ಕಲಹ, ಹಣಕಾಸು ವಿಚಾರದಲ್ಲಿ ಮನಃಸ್ತಾಪ, ಯಂತ್ರೋಪಕರಣಗಳಿಂದ ತೊಂದರೆ, ವಾಹನ ಚಾಲನೆಯಲ್ಲಿ ಎಚ್ಚರ, ಪೆಟ್ಟಾಗುವ ಸಾಧ್ಯತೆ.

ತುಲಾ: ವಿಪರೀತ ಉಷ್ಣ ಬಾಧೆ, ಹೊಟ್ಟೆ ನೋವು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಹಣಕಾಸು ವಿಚಾರದಲ್ಲಿ ಮನಃಸ್ತಾಪ, ದಾಂಪತ್ಯದಲ್ಲಿ ಕಲಹ, ಬಂಧುಗಳೊಂದಿಗೆ ವಾಗ್ವಾದ,
ಉದ್ಯೋಗದಲ್ಲಿ ಒತ್ತಡ, ವಸ್ತ್ರಾಭರಣ ಖರೀದಿಸುವ ಸಾಧ್ಯತೆ.

ವೃಶ್ಚಿಕ: ಸ್ವಂತ ಉದ್ಯಮದಲ್ಲಿ ಲಾಭ, ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಉತ್ತಮ ಅವಕಾಶಗಳು ಪ್ರಾಪ್ತಿ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಲೆ ನೋವು, ಅಧಿಕ ಉಷ್ಣ ಬಾಧೆ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ಬಂಧುಗಳಿಂದ ಸಹಕಾರ, ಬಾಡಿಗೆದಾರರೊಂದಿಗೆ ಬಾಂಧವ್ಯ.

ಧನಸ್ಸು: ದಾಯಾದಿಗಳ ಕಲಹ, ನೆರೆಹೊರೆಯವರಿಂದ ಅಪವಾದ, ಗೌರವಕ್ಕೆ ಧಕ್ಕೆ, ಎಲೆಕ್ಟ್ರಾನಿಕ್ ಉಪಕರಣಗಳಿಂದ ಎಚ್ಚರ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ರಕ್ತ ದೋಷಗಳು,
ವಿದೇಶದಲ್ಲಿರುವ ಮಕ್ಕಳಿಂದ ಅನುಕೂಲ.

ಮಕರ: ಭೂಮಿಯಿಂದ ಲಾಭ, ವಾಹನದಿಂದ ಅನುಕೂಲ, ಆಕಸ್ಮಿಕ ಧನಾಗಮನ, ದೀರ್ಘಕಾಲದ ಆಸೆ ಈಡೇರುವುದು, ಸಂಗಾತಿಯಿಂದ ಲಾಭ, ಮಕ್ಕಳಿಂದ ಅನುಕೂಲ, ಗಣ್ಯ ವ್ಯಕ್ತಿಗಳಿಂದ ಪ್ರಶಂಸೆ, ಆತ್ಮೀಯರಿಂದ ಶುಭ ಹಾರೈಕೆ.

ಕುಂಭ: ರಕ್ತ ದೋಷ, ದೇಹದಲ್ಲಿ ವಿಪರೀತ ನೋವು, ದುಶ್ಚಟಗಳಿಂದ ಅನಾರೋಗ್ಯ, ಆರೋಗ್ಯದಲ್ಲಿ ಎಚ್ಚರ, ಉದ್ಯೋಗದಲ್ಲಿ ಲಾಭ, ಭೂ ವ್ಯವಹಾರಸ್ಥರಿಗೆ ಅನುಕೂಲ, ಕೆಲಸಗಾರರ ಕೊರತೆ ನಿವಾರಣೆ, ಬಾಡಿಗೆ ಮನೆಗಳು ಭರ್ತಿ ಆಗುವುದು.

ಮೀನ: ಮಕ್ಕಳಿಂದ ಅನುಕೂಲ, ಉತ್ತಮ ಬೆಳವಣಿಗೆ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯೊಂದಿಗೆ ಬಾಂಧವ್ಯ, ಸಂಬಂಧಿಕರಿಂದ ಹಣ ಸಹಾಯ, ಶಕ್ತಿ ದೇವತೆಗಳ ದರ್ಶನ ಭಾಗ್ಯ, ದೂರದಲ್ಲಿರುವ ವ್ಯಕ್ತಿಗಳ ಭೇಟಿ.

Advertisement
Advertisement