Connect with us

Dina Bhavishya

ದಿನಭವಿಷ್ಯ: 17-11-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ
ಬೆಳಗ್ಗೆ 11:55 ನಂತರ ದಶಮಿ ತಿಥಿ,
ಶನಿವಾರ, ಶತಭಿಷ ನಕ್ಷತ್ರ
ಮಧ್ಯಾಹ್ನ 2:26 ನಂತರ ಪೂರ್ವಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:14 ರಿಂದ 10:41
ಗುಳಿಕಕಾಲ: ಬೆಳಗ್ಗೆ 7:47 ರಿಂದ 9:14
ಯಮಗಂಡಕಾಲ: ಮಧ್ಯಾಹ್ನ 3:02 ರಿಂದ 4:29

ಮೇಷ: ಸ್ಥಿರಾಸ್ತಿ-ವಾಹನಗಳಿಂದ ನಷ್ಟ, ಪ್ರಯಾಣದಲ್ಲಿ ತೊಂದರೆ, ತಂದೆಯೇ ಶತ್ರುವಾಗುವರು, ಧಾರ್ಮಿಕ ಕಾರ್ಯಗಳಲ್ಲಿ ಖರ್ಚು, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ.

ವೃಷಭ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ಉನ್ನತ ಅಧಿಕಾರಿಗಳಿಂದ ಸಹಕಾರ, ಸಂತಾನ ಭಾಗ್ಯ ಪ್ರಾಪ್ತಿ, ಮಕ್ಕಳಿಗೆ ಉತ್ತಮ ಅವಕಾಶ, ಅನಿರೀಕ್ಷಿತ ಸಮಸ್ಯೆ ಎದುರಾಗುವುದು, ಮಿತ್ರರಿಂದ ಅನುಕೂಲ.

ಮಿಥುನ: ಸ್ಥಿರಾಸ್ತಿ-ವಾಹನ ಖರೀದಿ, ಆರ್ಥಿಕ ಸಮಸ್ಯೆ ನಿವಾರಣೆ, ಮಾತೃವಿನಿಂದ ಧನಾಗಮನ, ವ್ಯವಹಾರಗಳಲ್ಲಿ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಶುಭ ಕಾರ್ಯಗಳಲ್ಲಿ ಉತ್ಸಾಹ.

ಕಟಕ: ಹೃದಯ ಸಂಬಂಧಿತ ಸಮಸ್ಯೆ, ಹಾರ್ಮೋನ್ ವ್ಯತ್ಯಾಸ, ಅಜೀರ್ಣ ಸಮಸ್ಯೆ, ಹಣಕಾಸು ಸಹಾಯಕ್ಕೆ ಪ್ರಯಾಣ, ಮಕ್ಕಳಿಂದ ಆಕಸ್ಮಿಕ ತೊಂದರೆ,ಗೃಹ ಬದಲಾವಣೆ, ಉದ್ಯೋಗ ಬದಲಾವಣೆಗೆ ಮನಸ್ಸು.

ಸಿಂಹ: ಆರ್ಥಿಕ ಸಮಸ್ಯೆ ನಿವಾರಣೆ, ಸಂಗಾತಿಯಿಂದ ಧನಾಗಮನ, ಆಕಸ್ಮಿಕ ನಷ್ಟ ಎದುರಾಗುವುದು, ನಂಬಿಕಸ್ಥರಿಂದ ಮೋಸ, ಅಪವಾದಗಳಿಂದ ನಿದ್ರಾಭಂಗ, ಮಕ್ಕಳಿಗೆ ಉತ್ತಮ ಅವಕಾಶ, ಧಾರ್ಮಿಕ ಕಾರ್ಯಗಳಿಗೆ ಖರ್ಚು.

ಕನ್ಯಾ: ಶುಭ ಕಾರ್ಯಗಳಿಗೆ ಅವಕಾಶ, ಸ್ಥಿರಾಸ್ತಿ ತಗಾದೆ ನಿವಾರಣೆ, ಮಿತ್ರರಿಂದ ಸಾಲದ ಸಹಾಯ, ಹಿರಿಯ ಸಹೋದರಿಯೊಂದಿಗೆ ಶತ್ರುತ್ವ, ಪಾಲುದಾರಿಕೆ ವ್ಯವಹಾರದಲ್ಲಿ ಉತ್ತಮ, ಉತ್ತಮ ಹೆಸರು ಗೌರವ ಪ್ರಾಪ್ತಿ,

ತುಲಾ: ಮಕ್ಕಳಿಗಾಗಿ ಖರ್ಚು, ಶುಭ ಕಾರ್ಯಗಳಿಗೆ ಸಾಲ ಮಾಡುವ ಸಾಧ್ಯತೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಆರೋಗ್ಯದ ಬಗ್ಗೆ ಗಮನಹರಿಸಿ, ಉದ್ಯೋಗ ನಿಮಿತ್ತ ಪ್ರಯಾಣ.

ವೃಶ್ಚಿಕ: ಸಂತಾನ ಸಮಸ್ಯೆ ನಿವಾರಣೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ವೃದ್ಧಿ, ವಸ್ತ್ರಾಭರಣ ಖರೀದಿ ಯೋಗ, ಗೌರವ ಸನ್ಮಾನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ಕೆಲಸಗಳಲ್ಲಿ ಬುದ್ಧಿವಂತಿಕೆ ಅಗತ್ಯ.

ಧನಸ್ಸು; ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಬದಲಾವಣೆಗೆ ತಡೆ, ಗೃಹ ವಿಚಾರದಲ್ಲಿ ಕಿರಿಕಿರಿ, ವಾಹನ-ಸ್ಥಿರಾಸ್ತಿ ಖರೀದಿ, ಅಕ್ಕ ಪಕ್ಕದವರೊಂದಿಗೆ ಕಿರಿಕಿರಿ.

ಮಕರ: ಧಾರ್ಮಿಕ ಕ್ಷೇತ್ರಕ್ಕೆ ಪ್ರಯಾಣ, ಶುಭ ಕಾರ್ಯಕ್ಕಾಗಿ ವೆಚ್ಚ, ತಂದೆಯೊಡನೆ ಆತ್ಮೀಯತೆ, ಸಂಗಾತಿ ಜೊತೆ ಬಾಂಧವ್ಯ ವೃದ್ಧಿ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ದಾಂಪತ್ಯ ಕಲಹ ನಿವಾರಣೆ.

ಕುಂಭ: ಸ್ವಯಂಕೃತ್ಯಗಳಿಂದ ನಷ್ಟ, ಬೇಜವಾಬ್ದಾರಿಯಿಂದ ಸಮಸ್ಯೆ, ಆರ್ಥಿಕ ಸಂಕಷ್ಟಗಳು ಹೆಚ್ಚು, ಸಾಲ ಮಾಡುವ ಪರಿಸ್ಥಿತಿ, ಕುಟುಂಬಸ್ಥರೇ ಶತ್ರುವಾಗುವರು, ಬರಬೇಕಾದ ಹಣ ನಿಧಾನವಾಗುವುದು.

ಮೀನ: ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ, ಮಕ್ಕಳಿಗೆ ಬಾಲಾಗ್ರಹ ದೋಷ, ಉದ್ಯೋಗ ಸ್ಥಳದಲ್ಲಿ ಪ್ರಶಂಸೆ, ಉತ್ತಮ ಅವಕಾಶ ಪ್ರಾಪ್ತಿ, ವ್ಯಾಪಾರೋದ್ಯಮದಲ್ಲಿ ಪ್ರಗತಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *