ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಸೋಮವಾರ, ಪುಬ್ಬ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:42 ರಿಂದ 9:11
ಗುಳಿಕಕಾಲ: ಮಧ್ಯಾಹ್ನ 1:38 ರಿಂದ 3:07
ಯಮಗಂಡಕಾಲ: ಬೆಳಗ್ಗೆ 10:40 ರಿಂದ 12:09
Advertisement
ಮೇಷ: ಹಿರಿಯರಿಂದ ಹಿತನುಡಿ, ಹಣಕಾಸು ಮುಗ್ಗಟ್ಟು, ಮಾನಸಿಕ ಕಿರಿಕಿರಿ, ಕಾರ್ಯದಲ್ಲಿ ನಿಧಾನ, ಅತಿಯಾದ ಕೋಪ.
Advertisement
ವೃಷಭ: ಯತ್ನ ಕಾರ್ಯಗಳಲ್ಲಿ ವಿಳಂಬ, ಚಂಚಲ ಮನಸ್ಸು, ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ, ವಸ್ತ್ರ ವ್ಯಾಪಾರಿಗಳಿಗೆ ಲಾಭ.
Advertisement
ಮಿಥುನ: ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ, ಶ್ರಮಕ್ಕೆ ತಕ್ಕ ಫಲ, ತಾಳ್ಮೆ ಕಳೆದುಕೊಳ್ಳುವಿರಿ, ಕೆಲಸ ಕಾರ್ಯಗಳಲ್ಲಿ ಪ್ರಗತಿ.
Advertisement
ಕಟಕ: ದೈವಿಕ ಚಿಂತನೆ, ಪ್ರಿಯ ಜನರ ಭೇಟಿ, ತಾಳ್ಮೆ ಅತ್ಯಗತ್ಯ, ಸಣ್ಣ ಮಾತಿನಿಂದ ಕಲಹ, ಪರರಿಂದ ವಂಚನೆ.
ಸಿಂಹ: ದಾಂಪತ್ಯದಲ್ಲಿ ಪ್ರೀತಿ, ದೈವಾನುಗ್ರಹದಿಂದ ಅನುಕೂಲ, ಮಿತ್ರರ ಭೇಟಿ, ಶತ್ರುಗಳ ನಾಶ, ಉತ್ತಮ ಬುದ್ಧಿಶಕ್ತಿ, ಕೃಷಿಕರಿಗೆ ಲಾಭ.
ಕನ್ಯಾ: ಯಾರನ್ನೂ ಹೆಚ್ಚು ನಂಬಬೇಡಿ, ಕುಟುಂಬದಲ್ಲಿ ಪ್ರೀತಿಯ ವಾತಾವರಣ, ಹಣಕಾಸು ವಿಚಾರದಲ್ಲಿ ಎಚ್ಚರ, ನಿಮ್ಮ ಹಣ ಅನ್ಯರ ಪಾಲಾಗುವುದು.
ತುಲಾ: ಮಾತೃವಿನಿಂದ ಶುಭ ಆರೈಕೆ, ಸಹೋದರರಿಂದ ಕಲಹ, ಅತಿಯಾದ ನಷ್ಟ, ಧನ ಸಹಾಯ, ಅಧಿಕಾರ ಪ್ರಾಪ್ತಿ.
ವೃಶ್ಚಿಕ: ಎಲ್ಲಿ ಹೋದರೂ ಅಶಾಂತಿ, ಸ್ಥಳ ಬದಲಾವಣೆ, ಸರ್ಕಾರಿ ಅಧಿಕಾರಿಗಳಿಗೆ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಪರಸ್ತ್ರೀಯಿಂದ ತೊಂದರೆ.
ಧನಸ್ಸು: ಇಷ್ಟವಾದ ವಸ್ತುಗಳ ಖರೀದಿ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ವಾದ-ವಿವಾದಗಳಲ್ಲಿ ಜಯ, ಧನ ಲಾಭ.
ಮಕರ: ನೀವಾಡುವ ಮಾತಿನಿಂದ ಕಲಹ, ದುಷ್ಟ ಚಿಂತನೆ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾರ್ಥಿಗಳಿಗೆ ಆತಂಕ, ಅನ್ಯರಲ್ಲಿ ವೈಮನಸ್ಸು.
ಕುಂಭ: ಚಂಚಲ ಮನಸ್ಸು, ದ್ರವ್ಯ ನಷ್ಟ, ಸಾಲ ಬಾಧೆ, ವಾಹನ ರಿಪೇರಿ, ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ.
ಮೀನ: ನಿವೇಶನ ಪ್ರಾಪ್ತಿ, ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರುಗಳ ಬಾಧೆ, ಟ್ರಾವೆಲ್ಸ್‍ನವರಿಗೆ ಲಾಭ, ತಾಳ್ಮೆಯಿಂದ ಕಾರ್ಯಸಿದ್ದಿ.