ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರಮಾಸ,
ಶುಕ್ಲ ಪಕ್ಷ, ಅಷ್ಟಮಿ ತಿಥಿ,
ಬೆಳಗ್ಗೆ 11:43 ನಂತರ ನವಮಿ ತಿಥಿ,
ಶನಿವಾರ, ಪುನರ್ವಸು ನಕ್ಷತ್ರ
ಬೆಳಗ್ಗೆ 8:59 ನಂತರ ಪುಷ್ಯ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:18 ರಿಂದ 10:51
ಗುಳಿಕಕಾಲ: ಬೆಳಗ್ಗೆ 6:12 ರಿಂದ 7:45
ಯಮಗಂಡಕಾಲ: ಮಧ್ಯಾಹ್ನ 1:57 ರಿಂದ 3:30
Advertisement
ಮೇಷ: ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ದೇಹದಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ಉದ್ಯೋಗ ಸ್ಥಳದಲ್ಲಿ ಅವಘಡ, ಗೌರವಕ್ಕೆ ಧಕ್ಕೆ.
Advertisement
ವೃಷಭ: ಪ್ರಯಾಣದಲ್ಲಿ ತೊಂದರೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ-ಜಿಗುಪ್ಸೆ ಭಾವನೆ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ತಂದೆಯಿಂದ ನಿಂದನೆ.
Advertisement
ಮಿಥುನ: ಆರ್ಥಿಕ ವಿಚಾರದಲ್ಲಿ ಅನುಕೂಲ, ಬರುವ ಹಣ ನಿಧಾನವಾಗುವುದು, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಅನಗತ್ಯ ಮಾತುಗಳಿಂದ ಜಗಳ, ಶತ್ರುಗಳನ್ನು ಅಧಿಕ ಮಾಡಿಕೊಳ್ಳುವಿರಿ.
Advertisement
ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಂದ ತೊಂದರೆ, ದಾಂಪತ್ಯದಲ್ಲಿ ವಿರಸ, ಅನಗತ್ಯ ಖರ್ಚು, ಕೆಲಸ ಕಾರ್ಯಗಳಲ್ಲಿ ನಿಧಾನ, ವ್ಯಾಪಾರ-ಉದ್ಯೋಗದಲ್ಲಿ ಅಡೆತಡೆ.
ಸಿಂಹ: ಸ್ಥಿರಾಸ್ತಿ-ವಾಹನದಿಂದ ನಷ್ಟ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಕಿರಿಕಿರಿ, ಸಂಬಂಧಗಳಿಂದ ತೊಂದರೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ.
ಕನ್ಯಾ: ಬಂಧುಗಳಿಂದ ಮಿತ್ರರು ದೂರವಾಗುವರು, ಸ್ವಯಂಕೃತ್ಯಗಳಿಂದ ನಷ್ಟ, ಲಾಭ ಪ್ರಮಾಣ ಕುಂಠಿತ, ಸಾಲಗಾರರ ಬಾಧೆ, ಹಣಕಾಸು ಸಮಸ್ಯೆ.
ತುಲಾ: ಉದ್ಯೋಗ ಸ್ಥಳದಲ್ಲಿ ಬೇಸರ, ಕೆಲಸ ಕಾರ್ಯದಲ್ಲಿ ನಿರಾಸಕ್ತಿ, ಕೌಟುಂಬಿಕ ಸಮಸ್ಯೆ, ಹಣಕಾಸು ತೊಂದರೆ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.
ವೃಶ್ಚಿಕ: ಅನಗತ್ಯ ತಿರುಗಾಟ, ಪೂಜೆ, ದಾನ-ಧರ್ಮ ವಿಚಾರದಲ್ಲಿ ವ್ಯಥೆ, ನಕಾರಾತ್ಮಕ ಚಿಂತನೆ ಮಾಡುವಿರಿ, ನೆರೆಹೊರೆಯವರಿಂದ ಕಿರಿಕಿರಿ.
ಧನಸ್ಸು: ಆಕಸ್ಮಿಕ ನಷ್ಟಗಳು ಬಾಧಿಸುವುದು, ಹಣಕಾಸು ಸಂಕಷ್ಟ, ನೆಮ್ಮದಿ ಇಲ್ಲದ ಜೀವನ, ಆರೋಗ್ಯದಲ್ಲಿ ವ್ಯತ್ಯಾಸ, ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ.
ಮಕರ: ಮಿತ್ರರಿಂದ ದಾಂಪತ್ಯದಲ್ಲಿ ವಿರಸ, ವಿಕೃತ ಆಸೆ ಆಕಾಂಕ್ಷೆಗಳಿಂದ ಸಂಕಷ್ಟ, ಅಕ್ರಮ ಸಂಪಾದನೆಗೆ ಮನಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಮನಃಸ್ತಾಪ, ಹಣಕಾಸು ವಿಚಾರದಲ್ಲಿ ಗಲಾಟೆ.
ಕುಂಭ: ಉಸಿರಾಟ ಸಮಸ್ಯೆ, ಮನೋರೋಗ ಬಾಧಿಸುವುದು, ಆರೋಗ್ಯದಲ್ಲಿ ಎಚ್ಚರಿಕೆ, ಉದ್ಯೋಗ ಸ್ಥಳದಲ್ಲಿ ಸಾಲ ಕೇಳುವಿರಿ, ಸೇವಕರು-ಕಾರ್ಮಿಕರಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ.
ಮೀನ: ತಂದೆಯಿಂದ ನಷ್ಟ, ಮಕ್ಕಳಿಂದ ತೊಂದರೆ, ಪ್ರಯಾಣದಲ್ಲಿ ಸಮಸ್ಯೆ, ಸಮುದ್ರ-ವಾಯುಯಾನದಲ್ಲಿ ಎಚ್ಚರ, ಜಲ ಕ್ರೀಡೆಗಳಲ್ಲಿ ಅವಘಢ, ಮಿತ್ರರಿಂದ ಗೌರವಕ್ಕೆ ಧಕ್ಕೆ.