ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಸೋಮವಾರ, ಉತ್ತರ ನಕ್ಷತ್ರ
ರಾಹುಕಾಲ: ಬೆಳಗ್ಗೆ 8:03 ರಿಂದ 9:33
ಗುಳಿಕಕಾಲ: ಮಧ್ಯಾಹ್ನ 2:03 ರಿಂದ 3:33
ಯಮಗಂಡಕಾಲ: ಬೆಳಗ್ಗೆ 11:03 ರಿಂದ 12:33
Advertisement
ಮೇಷ: ಕುಟುಂಬದಲ್ಲಿ ಅಶಾಂತಿ, ಸಾಲ ಬಾಧೆ, ಕೃಷಿಕರಿಗೆ ನಷ್ಟ, ವಿದ್ಯೆಯಲ್ಲಿ ಆಸಕ್ತಿ, ಮಾತಿನ ಮೇಲೆ ಹಿಡಿತ ಅಗತ್ಯ.
Advertisement
ವೃಷಭ: ಆರೋಗ್ಯದ ಕಡೆ ಗಮನಕೊಡಿ, ಅಮೂಲ್ಯ ವಸ್ತುಗಳ ಖರೀದಿ, ಮನಃಕ್ಲೇಷ, ಉತ್ತಮ ಬುದ್ಧಿಶಕ್ತಿ, ಪಿತ್ರಾರ್ಜಿತ ಆಸ್ತಿ ಗಳಿಕೆ.
Advertisement
ಮಿಥುನ: ಸಮಾಜದಲ್ಲಿ ಗೌರವ, ಮಾನಸಿಕ ನೆಮ್ಮದಿ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಬಂಧು ಮಿತ್ರರ ಭೇಟಿ, ವಾಹನ ರಿಪೇರಿ, ಮಾತೃವಿನಿಂದ ಸಹಾಯ.
Advertisement
ಕಟಕ: ಕೆಲಸ ಕಾರ್ಯಗಳಲ್ಲಿ ಜಯ, ತೀರ್ಥ ಕ್ಷೇತ್ರಗಳಲ್ಲಿ ಹಣ ಖರ್ಚು, ಋಣ ವಿಮೋಚನೆ, ಶತ್ರು ಬಾಧೆ, ಅಧಿಕಾರಿಗಳಿಂದ ಪ್ರಶಂಸೆ, ವಾಹನದಿಂದ ತೊಂದರೆ.
ಸಿಂಹ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ದಾಂಪತ್ಯದಲ್ಲಿ ಸಂತಸ, ಪ್ರತಿಭೆಗೆ ತಕ್ಕ ಫಲ, ಸ್ತ್ರೀಯರಿಗೆ ಲಾಭ, ವ್ಯರ್ಥ ಧನಹಾನಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ಕನ್ಯಾ: ಅನ್ಯರಿಗೆ ಸಹಾನುಭೂತಿ ತೋರುವಿರಿ, ದೂರಾಲೋಚನೆ, ಅದೃಷ್ಟ ಕೈ ಕೊಡುವುದು, ಹಳೇ ಬಾಕಿ ವಸೂಲಿ, ವಾದ-ವಿವಾದಗಳಿಂದ ದೂರವಿರಿ, ಉದ್ಯೋಗಾವಕಾಶ ಪ್ರಾಪ್ತಿ.
ತುಲಾ: ಮಿತ್ರರಿಂದ ಮೋಸ, ಹಣಕಾಸು ವಿಚಾರದಲ್ಲಿ ತಗಾದೆ, ಚಂಚಲ ಮನಸ್ಸು, ಅಧಿಕ ಕೋಪ, ಯಾರನ್ನೂ ಹೆಚ್ಚು ನಂಬಬೇಡಿ, ದ್ರವ್ಯ ನಷ್ಟ.
ವೃಶ್ಚಿಕ: ದೂರ ಪ್ರಯಾಣ, ಅಭಿವೃದ್ಧಿ ಕುಂಠಿತ, ಗುರು ಹಿರಿಯರಲ್ಲಿ ಭಕ್ತಿ, ಮಹಿಳೆಯರಿಗೆ ನೋವು, ಆರೋಗ್ಯದಲ್ಲಿ ಏರುಪೇರು, ಅಧಿಕ ಖರ್ಚು, ಮಕ್ಕಳ ಕಡೆ ಗಮನಹರಿಸಿ.
ಧನಸ್ಸು: ಮಾಡಿದ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಶುಭ ಕಾರ್ಯಗಳಲ್ಲಿ ಭಾಗಿ, ಮಾನಸಿಕ ನೆಮ್ಮದಿ, ಶೀಘ್ರದಲ್ಲಿ ಸಂತಸದ ಸುದ್ದಿ ಕೇಳುವಿರಿ, ಅಧಿಕಾರ ಪ್ರಾಪ್ತಿ.
ಮಕರ: ಅಧಿಕ ಧನವ್ಯಯ, ಮನಃಕ್ಲೇಷ, ಆದಾಯಕ್ಕಿಂತ ಖರ್ಚು ಹೆಚ್ಚು, ಇಲ್ಲ ಸಲ್ಲದ ಅಪವಾದ, ವಿರೋಧಿಗಳಿಂದ ತೊಂದರೆ, ಆರೋಗ್ಯದಲ್ಲಿ ಚೇತರಿಕೆ.
ಕುಂಭ: ನೀಚ ಜನರಿಂದ ದೂರವಿರಿ, ಮಹಿಳೆಯರಿಗೆ ವಿಶೇಷ ಲಾಭ, ಸ್ಥಳ ಬದಲಾವಣೆ, ಅನಿರೀಕ್ಷಿತ ಖರ್ಚು, ನಾನಾ ರೀತಿಯ ಚಿಂತೆ.
ಮೀನ: ದೈವಾನುಗ್ರಹದಿಂದ ಅನುಕೂಲ, ರಾಜ ಸನ್ಮಾನ, ಆಕಸ್ಮಿಕ ದ್ರವ್ಯ ಲಾಭ, ದಾಂಪತ್ಯದಲ್ಲಿ ಕಲಹ, ಸುಖ ಭೋಜನ, ವಿವಾಹ ಯೋಗ.