ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಶನಿವಾರ, ಆಶ್ಲೇಷ ನಕ್ಷತ್ರ
ಬೆಳಗ್ಗೆ 11:42 ನಂತರ ಮಖ ನಕ್ಷತ್ರ
ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47
Advertisement
ರಾಹುಕಾಲ: ಬೆಳಗ್ಗೆ 9:13 ರಿಂದ 10:40
ಗುಳಿಕಕಾಲ: ಬೆಳಗ್ಗೆ 6:20 ರಿಂದ 7:46
ಯಮಗಂಡಕಾಲ: ಮಧ್ಯಾಹ್ನ 1:34 ರಿಂದ 3:01
Advertisement
ಮೇಷ: ಬಂಧುಗಳಿಂದ ಕಿರಿಕಿರಿ, ಸಾಲಗಾರರೊಂದಿಗೆ ವಾಗ್ವಾದ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ನರ ದೌರ್ಬಲ್ಯ, ಚರ್ಮ ರೋಗ ಬಾಧೆ, ಆರೋಗ್ಯದ ಬಗ್ಗೆ ಗಮನಹರಿಸಿ.
Advertisement
ವೃಷಭ: ಆತ್ಮೀಯರಿಂದ ಹಣ ಸಹಾಯ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರೊಂದಿಗೆ ಆರ್ಥಿಕ ಕಲಹ.
Advertisement
ಮಿಥುನ: ವಸ್ತ್ರಾಭರಣ ಕಳೆದುಕೊಳ್ಳುವಿರಿ, ಕೊಟ್ಟ ಮಾತಿನಿಂದ ನಷ್ಟ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಸ್ಥಿರಾಸ್ತಿ ವಿಚಾರದಲ್ಲಿ ನಿದ್ರಾಭಂಗ.
ಕಟಕ: ಕೃಷಿಕರಿಗೆ ಅನುಕೂಲ, ಮಿತ್ರರಿಂದ ನಷ್ಟ, ವಾಹನದಿಂದ ತೊಂದರೆ, ಅಕ್ರಮ ಸಂಬಂಧಗಳಿಂದ ಸಂಕಷ್ಟ.
ಸಿಂಹ: ವಿಪರೀತ ನಷ್ಟಗಳು, ಉದ್ಯೋಗಕ್ಕಾಗಿ ಅಲೆದಾಟ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಅನಗತ್ಯ ಹಣವ್ಯಯ, ಮಿತ್ರರಿಂದ ಉದ್ಯೋಗದ ಭರವಸೆ.
ಕನ್ಯಾ: ಉದ್ಯೋಗಸ್ಥರಿಗೆ ಅಧಿಕ ಲಾಭ, ಕೆಲಸ ಕಾರ್ಯಗಳಲ್ಲಿ ನಿಧಾನ, ಅಲ್ಪ ಕಾರ್ಯ ಸಿದ್ಧಿ, ಸಹೋದರನಿಂದ ಹಣ ಸಹಾಯ.
ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ತಂದೆಯ ಆರೋಗ್ಯಕ್ಕಾಗಿ ಖರ್ಚು, ಕೃಷಿ ಉತ್ಪನ್ನಗಳಿಗೆ ವೆಚ್ಚ, ಕುಟುಂಬಕ್ಕಾಗಿ ಹಣ ವಿನಿಯೋಗ.
ವೃಶ್ಚಿಕ: ಸಂಶಯಗಳಿಂದ ದಾಂಪತ್ಯದಲ್ಲಿ ವಿರಸ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಮಿತ್ರರೊಂದಿಗೆ ಪ್ರಯಾಣ.
ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ದೈನಂದಿನ ಜೀವನಕ್ಕೆ ತೊಂದರೆ, ಅಪಮೃತ್ಯು ಭಯ, ಕುಟುಂಬದಲ್ಲಿ ಕಿರಿಕಿರಿ.
ಮಕರ: ಪ್ರೇಮ ವಿಚಾರದಲ್ಲಿ ಕಲಹ, ಮಿತ್ರರೊಂದಿಗೆ ಮನಃಸ್ತಾಪ, ದುಶ್ಚಟಗಳಿಗೆ ಮನಸ್ಸು, ಸಾಲಗಾರರಿಂದ ಕಿರಿಕಿರಿ, ಗೌರವಕ್ಕೆ ಧಕ್ಕೆ.
ಕುಂಭ: ತಾಯಿಯ ಆರೋಗ್ಯಕ್ಕಾಗಿ ಸಾಲ, ಕೆಟ್ಟಾಲೋಚನೆ, ತಾಳ್ಮೆ ಕಳೆದುಕೊಳ್ಳುವಿರಿ, ಸ್ಥಿರಾಸ್ತಿ ತಗಾದೆ, ಕೋರ್ಟ್ ಮೊರೆ ಹೋಗುವ ಪರಿಸ್ಥಿತಿ.
ಮೀನ: ಐಷಾರಾಮಿ ಜೀವನಕ್ಕೆ ಮನಸ್ಸು, ಮೋಜು-ಮಸ್ತಿಗಾಗಿ ಖರ್ಚು, ಮಕ್ಕಳಿಂದ ಕಲಹ, ಸಂಗಾತಿಗೆ ಅನಾರೋಗ್ಯ, ಉದ್ಯೋಗ ಸ್ಥಳದಲ್ಲಿ ಗೌರವ.