ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಪಂಚಮಿ ತಿಥಿ,
ಭಾನುವಾರ, ಅಶ್ವಿನಿ ನಕ್ಷತ್ರ
ರಾಹುಕಾಲ: ಸಾಯಂಕಾಲ 4:56 ರಿಂದ 6:28
ಗುಳಿಕಕಾಲ: ಮಧ್ಯಾಹ್ನ 3:24 ರಿಂದ 4:56
ಯಮಗಂಡಕಾಲ: ಮಧ್ಯಾಹ್ನ 12:20 ರಿಂದ 1:52
Advertisement
ಮೇಷ: ಪ್ರತಿಭೆಗೆ ತಕ್ಕ ಪ್ರತಿಫಲ, ಧಾರ್ಮಿಕ ವಿಚಾರದಲ್ಲಿ ಹಿರಿಯರ ಬೆಂಬಲ, ಶತ್ರುಗಳಿಂದ ದೂರವಿರಿ, ವೃತ್ತಿರಂಗದಲ್ಲಿ ಯಶಸ್ಸು, ತಾಳ್ಮೆ ಅತ್ಯಗತ್ಯ,
ಮನಃಕ್ಲೇಷ, ಆಕಸ್ಮಿಕ ಖರ್ಚು, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ವೃಷಭ: ಭೂಮಿ ಖರೀದಿಯೋಗ, ಋಣ ಬಾಧೆ, ಕುಟುಂಬದಲ್ಲಿ ನೆಮ್ಮದಿ, ವ್ಯಾಸಂಗದಲ್ಲಿ ಮುನ್ನಡೆ, ಯತ್ನ ಕಾರ್ಯದಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ,
ಮಿತ್ರರಿಂದ ಸಹಕಾರ.
Advertisement
ಮಿಥುನ: ವಾಹನದಿಂದ ಅಧಿಕ ಖರ್ಚು, ವ್ಯಾಪಾರಿಗಳಿಗೆ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ದೇವತಾ ಕಾರ್ಯಗಳಲ್ಲಿ ಭಾಗಿ, ಆರೋಗ್ಯದಲ್ಲಿ ಏರುಪೇರು, ಚಂಚಲ ಮನಸ್ಸು, ಆಲಸ್ಯ ಮನೋಭಾವ.
Advertisement
ಕಟಕ: ಎಲ್ಲರ ಮನಸ್ಸು ಗೆಲ್ಲುವಿರಿ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ವಾದ-ವಿವಾದಗಳಲ್ಲಿ ಸೋಲು, ಕಾರ್ಯ ಸಾಧನೆಗಾಗಿ ಪರಿಶ್ರಮ, ಅಧಿಕ ಕೋಪ.
ಸಿಂಹ: ನೆಮ್ಮದಿ ಇಲ್ಲದ ಜೀವನ, ಸಾಲ ಬಾಧೆ, ಸ್ತ್ರೀ ಸೌಖ್ಯ, ಉದ್ಯೋಗದಲ್ಲಿ ಪ್ರಗತಿ, ಸಣ್ಣ ವಿಚಾರಗಳಲ್ಲಿ ಮನಃಸ್ತಾಪ, ಹಿರಿಯರಲ್ಲಿ ಭಕ್ತಿ, ಕೋರ್ಟ್ ಕೇಸ್‍ಗಳಲ್ಲಿ ಜಯ.
ಕನ್ಯಾ: ಆತ್ಮೀಯರಿಂದ ಸಲಹೆ, ಅನ್ಯರ ಮಾತಿನಿಂದ ಕಲಹ, ಮನಸ್ಸಿಗೆ ಅಶಾಂತಿ, ದುಷ್ಟರಿಂದ ದೂರವಿರಿ, ಆರೋಗ್ಯದಲ್ಲಿ ಏರುಪೇರು, ಮಾತಿನ ಚಕಮಕಿ, ವಾಸಗೃಹದಲ್ಲಿ ತೊಂದರೆ.
ತುಲಾ: ಕೃಷಿಕರಿಗೆ ಲಾಭ, ಅನ್ಯ ಜನರಲ್ಲಿ ವೈಮನಸ್ಸು, ಉದ್ಯೋಗದಲ್ಲಿ ಕಿರಿಕಿರಿ, ಯತ್ನ ಕಾರ್ಯದಲ್ಲಿ ವಿಳಂಬ, ಇಲ್ಲದ ಸಲ್ಲದ ಅಪವಾದ, ನಾನಾ ವಿಚಾರಗಳಲ್ಲಿ ಆಸಕ್ತಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.
ವೃಶ್ಚಿಕ: ರಾಜಕೀಯ ವ್ಯಕ್ತಿಗಳ ಭೇಟಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತೀರ್ಥಯಾತ್ರೆ ದರ್ಶನ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಉತ್ತಮ ಬುದ್ಧಿಶಕ್ತಿ, ವಸ್ತ್ರಾಭರಣ ಖರೀದಿ, ಕೃಷಿಕರಿಗೆ ಅಲ್ಪ ಲಾಭ.
ಧನಸ್ಸು: ಬಿಡುವಿಲ್ಲದ ಕೆಲಸ, ಸ್ತ್ರೀಯರಿಗೆ ಶುಭ, ಅವಿವಾಹಿತರಿಗೆ ವಿವಾಹಯೋಗ, ಹೂಡಿಕೆಗಳಿಂದ ಲಾಭ, ಶರೀರದಲ್ಲಿ ಆಲಸ್ಯ, ಖರ್ಚಿನ ಬಗ್ಗೆ ನಿಗಾವಿರಲಿ, ಭೋಗ ವಸ್ತುಗಳು ಪ್ರಾಪ್ತಿ.
ಮಕರ: ಬದುಕಿಗೆ ಉತ್ತಮ ತಿರುವು, ಪ್ರೀತಿ ಪಾತ್ರರೊಡನೆ ಬಾಂಧವ್ಯ, ಶತ್ರುಗಳ ಭಯ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ, ಇಷ್ಟವಾದ ವಸ್ತುಗಳ ಖರೀದಿ,
ದ್ರವರೂಪದ ವಸ್ತುಗಳಿಂದ ಲಾಭ, ಮಾನಸಿಕ ನೆಮ್ಮದಿ, ಪ್ರಚಾರ ಸಭೆಗಳಲ್ಲಿ ಭಾಗಿ.
ಕುಂಭ: ಅವಕಾಶಗಳ ಸದುಪಯೋಗ, ಸುಖ ಭೋಜನ, ಧನಾತ್ಮಕ ಚಿಂತನೆ, ಕಾರ್ಯದಲ್ಲಿ ಯಶಸ್ಸು, ಮೇಲಾಧಿಕಾರಿಗಳಿಂದ ಪ್ರಶಂಸೆ, ತಾಳ್ಮೆ ಅತ್ಯಗತ್ಯ.
ಮೀನ: ಸ್ತ್ರೀ ವಿಚಾರದಲ್ಲಿ ಅಶಾಂತಿ, ಮಾನಸಿಕ ಚಿಂತೆ, ಮನೋವ್ಯಥೆ, ಶರೀರದಲ್ಲಿ ತಳಮಳ, ಹೇಳಿಕೆ ಮಾತನ್ನು ಕೇಳುವಿರಿ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ, ಶತ್ರುಗಳ ಬಾಧೆ, ಮನೆಯಲ್ಲಿ ಶುಭ ಕಾರ್ಯ.