ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಮಾಘ ಮಾಸ,
ಶುಕ್ಲ ಪಕ್ಷ, ಪಂಚಮಿ ತಿಥಿ,
ರೇವತಿ ನಕ್ಷತ್ರ, ಭಾನುವಾರ.
ರಾಹುಕಾಲ: ಸಂಜೆ 5:01 ರಿಂದ 6:28
ಗುಳಿಕಕಾಲ: ಮಧ್ಯಾಹ್ನ 3:33 ರಿಂದ 5:01
ಯಮಗಂಡಕಾಲ: ಮಧ್ಯಾಹ್ನ 12:37 ರಿಂದ 2:05
Advertisement
ಮೇಷ: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ಹೊಸ ಕೆಲಸ ಕಾರ್ಯಗಳಿಗೆ ಒಪ್ಪಂದ, ಆರೋಗ್ಯದಲ್ಲಿ ವ್ಯತ್ಯಾಸ, ಸಣ್ಣ ಪುಟ್ಟ ವಿಚಾರಗಳಿಂದ ಕಲಹ,ಸಂಗಾತಿಯಿಂದ ಸಲಹೆಯಿಂದ ಉತ್ತಮ, ಮಾನಸಿಕ ನೆಮ್ಮದಿ.
Advertisement
ವೃಷಭ: ಹಳೇ ಗೆಳೆಯರ ಭೇಟಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಮಗಳಿಂದ ಶುಭ ಸುದ್ದಿ, ಹಿರಿಯರಿಂದ ಪ್ರಶಂಸೆ, ಅಧಿಕವಾದ ಖರ್ಚು, ಅನ್ಯರಲ್ಲಿ ಮನಃಸ್ತಾಪ, ಉತ್ತಮ ಬುದ್ಧಿಶಕ್ತಿ, ಹಿತ ಶತ್ರುಗಳಿಂದ ತೊಂದರೆ.
Advertisement
ಮಿಥುನ: ಮನೆಯಲ್ಲಿ ಅಶಾಂತಿ, ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಪ್ರಗತಿ, ವಿವಾಹ ಯೋಗ, ಅಧಿಕವಾದ ಖರ್ಚು, ಅನ್ಯರಲ್ಲಿ ಕಲಹ-ನಿಷ್ಠೂರ, ಋಣ ಬಾಧೆ, ಆರೋಗ್ಯದಲ್ಲಿ ಏರುಪೇರು, ಸೈಟ್ ಖರೀದಿಸುವ ಆಲೋಚನೆ.
Advertisement
ಕಟಕ: ಆತ್ಮೀಯರಿಂದ ಸಹಾಯ, ವಾಹನ ಚಾಲನೆಯಲ್ಲಿ ಎಚ್ಚರ, ತೀರ್ಥಯಾತ್ರೆಗೆ ಹಣ ವಿನಿಯೋಗ, ಉದ್ಯೋಗದಲ್ಲಿ ಕಿರಿಕಿರಿ, ನಂಬಿಕಸ್ಥರಿಂದ ದ್ರೋಹ, ಸ್ಥಿರಾಸ್ತಿ ಖರೀದಿಗೆ ಮನಸ್ಸು.
ಸಿಂಹ: ಸ್ತ್ರೀಯರಿಗೆ ಲಾಭ, ಮಾತೃವಿನಿಂದ ನೆರವು, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಇಲ್ಲ ಸಲ್ಲದ ಅಪವಾದ, ಸ್ಥಳ ಬದಲಾವಣೆ, ಅಮೂಲ್ಯ ವಸ್ತುಗಳ ಕಳೆದುಕೊಳ್ಳುವಿರಿ, ಅವಮಾನ-ಅಪಕೀರ್ತಿ.
ಕನ್ಯಾ: ಆತ್ಮೀಯರ ಆಗಮನ, ಮನಸ್ಸಿಗೆ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ, ಬಾಕಿ ಹಣ ವಸೂಲಿ, ಆಧ್ಯಾತ್ಮಿಕ ವಿಚಾರದಲ್ಲಿ ಹಿರಿಯರ ಬೆಂಬಲ.
ತುಲಾ: ಋಣ ಬಾಧೆ, ವಾಹನ ಅಪಘಾತ ಸಾಧ್ಯತೆ, ಕೈಕಾಲಿಗೆ ಪೆಟ್ಟಾಗುವ ಸಂಭವ, ಕೋರ್ಟ್ ಕೇಸ್ಗಳಲ್ಲಿ ತೊಂದರೆ, ಮನಸ್ಸಿನಲ್ಲಿ ಭಯ, ಕಾರ್ಯದಲ್ಲಿ ವಿಳಂಬ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ದೂರ ಪ್ರಯಾಣ.
ವೃಶ್ಚಿಕ: ವಾಹನ ರಿಪೇರಿ, ವ್ಯವಹಾರದಲ್ಲಿ ಏರುಪೇರು, ಆದಾಯಕ್ಕಿಂತ ಖರ್ಚು ಹೆಚ್ಚು, ವ್ಯಾಸಂಗದಲ್ಲಿ ತೊಂದರೆ, ಯತ್ನ ಕಾರ್ಯದಲ್ಲಿ ಭಂಗ, ಶೀತ ಸಂಬಂಧಿತ ರೋಗ, ಋಣ ಬಾಧೆ.
ಧನಸ್ಸು: ಸ್ವಪ್ರಯತ್ನದಿಂದ ಕಾರ್ಯ ಸಿದ್ಧಿ, ಯಂತ್ರೋಪಕರಣಗಳಿಂದ ಲಾಭ, ಸ್ನೇಹಿತರ ಭೇಟಿ, ಅಧಿಕವಾದ ಖರ್ಚು, ವಿದ್ಯೆಯಲ್ಲಿ ಅಭಿವೃದ್ಧಿ,ವಿವಾಹ ಯೋಗ, ಚಂಚಲ ಮನಸ್ಸು, ಬಂಧುಗಳಿಂದ ಕಲಹ, ಸ್ತ್ರೀಯರಿಗೆ ಲಾಭ.
ಮಕರ: ದಾನ-ಧರ್ಮದಲ್ಲಿ ಆಸಕ್ತಿ, ಶತ್ರು ಧ್ವಂಸ, ಸುಖ ಜೀವನ ಪ್ರಾಪ್ತಿ, ಕಾರ್ಯದಲ್ಲಿ ಬದಲಾವಣೆ, ಮೃತ್ಯು ಭಯ, ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯೆಯಲ್ಲಿ ಆಸಕ್ತಿ, ವಿದೇಶ ಪ್ರಯಾಣ, ಮಾತಿನ ಮೇಲೆ ಹಿಡಿತ ಅಗತ್ಯ.
ಕುಂಭ: ರಾಜಕೀಯ ಕ್ಷೇತ್ರದಲ್ಲಿ ಪಾಲ್ಗೊಳ್ಳುವಿರಿ, ಕೃಷಿಕರಿಗೆ ಲಾಭ, ಗೆಳೆಯರಿಂದ ಅನರ್ಥ, ಭೂ ಲಾಭ, ಮನಸ್ಸಿನಲ್ಲಿ ಗೊಂದಲ, ಬಂಧು-ಮಿತ್ರರು ಸಮಾಗಮ, ಪ್ರೀತಿ ವಾತ್ಸಲ್ಯ ವೃದ್ಧಿ, ದೈವಿಕ ಚಿಂತನೆ, ಭಾಗ್ಯ ವೃದ್ಧಿ.
ಮೀನ: ಸಿನಿಮಾ ಕ್ಷೇತ್ರದವರಿಗೆ ಸುಸಮಯ, ನೆರೆಹೊರೆಯವರ ಜೊತೆ ಸುತ್ತಾಟ, ಹಣಕಾಸು ವೆಚ್ಚ, ಸುಗಂಧ ದ್ರವ್ಯ ವ್ಯಾಪಾರಿಗಳಿಗೆ ಲಾಭ,ಷೇರು ವ್ಯವಹಾರಗಳಲ್ಲಿ ನಷ್ಟ, ಈ ವಾರ ಎಚ್ಚರಿಕೆಯ ನಡೆ ಅಗತ್ಯ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv