ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಚತುರ್ಥಿ ತಿಥಿ,
ಗುರುವಾರ, ಶತಾಭಿಷ ನಕ್ಷತ್ರ
ಗುಳಿಕಕಾಲ: ಬೆಳಗ್ಗೆ 9:38 ರಿಂದ 11:04
ಯಮಗಂಡಕಾಲ: ಬೆಳಗ್ಗೆ 6:47 ರಿಂದ 8:12
Advertisement
ಮೇಷ: ಸ್ಥಿರಾಸ್ತಿ-ವಾಹನದಿಂದ ಲಾಭ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ತಾಯಿ ಕಡೆಯಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮನಸ್ಸಿನಲ್ಲಿ ಗೊಂದಲ-ಆತಂಕ, ದೈವ ಕಾರ್ಯ-ಪ್ರಯಾಣಕ್ಕೆ ಅಡೆತಡೆ, ದಾನ ಧರ್ಮ ಕಾರ್ಯಕ್ಕೆ ಅಧಿಕ ಖರ್ಚು.
Advertisement
ವೃಷಭ: ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅತೀ ವೇಗದ ಚಾಲನೆಯಿಂದ ತೊಂದರೆ, ವಿಪರೀತ ಧೈರ್ಯ, ಸಾಹಸದ-ಆತುರದ ಮನಸ್ಥಿತಿ, ಉದ್ಯೋಗ ಬದಲಾವಣೆಯ ಆಲೋಚನೆ, ಸ್ನೇಹಿತರಿಂದ ಅನುಕೂಲ, ಶುಭ ಕಾರ್ಯಗಳಲ್ಲಿ ಪ್ರಗತಿ, ಹಣಕಾಸು ವಿಚಾರವಾಗಿ ಕಲಹ.
Advertisement
ಮಿಥುನ: ನೀವಾಡುವ ಮಾತಿನಿಂದ ತೊಂದರೆ, ಕುಟುಂಬಸ್ಥರಿಂದಲೇ ನೋವು, ಆರ್ಥಿಕ ಸಂಕಷ್ಟಗಳು, ಸಾಲದ ಸಹಾಯ ಲಭಿಸುವುದು, ವಿದೇಶ ಪ್ರಯಾಣ ಯೋಗ, ಚಿನ್ನಾಭರಣ ಕಳವು ಸಾಧ್ಯತೆ, ಅಲರ್ಜಿ,ಅಜೀರ್ಣ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.
Advertisement
ಕಟಕ: ಸ್ವಂತ ಉದ್ಯಮದಲ್ಲಿ ನಷ್ಟ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಮಕ್ಕಳಿಂದ ಅನುಕೂಲ, ಮಕ್ಕಳಿಗಾಗಿ ಅಧಿಕ ಖರ್ಚು, ಗ್ಯಾಸ್ಟ್ರಿಕ್,ದೃಷ್ಠಿ ದೋಷ, ದೈಹಿಕ ನೋವು, ಸಾಲ ಬಾಧೆಗಳಿಂದ ನಿದ್ರಾಭಂಗ, ಪಿತ್ರಾರ್ಜಿತ ಆಸ್ತಿ ನಷ್ಟದ ಭೀತಿ, ಗುರುಗಳು-ಶಕ್ತಿ ದೇವತೆಯ ದರ್ಶನ.
ಸಿಂಹ: ಸ್ಥಿರಾಸ್ತಿ ವಾಹನಕ್ಕಾಗಿ ಅಧಿಕ ಖರ್ಚು, ಮಾತೃವಿನಿಂದ ಲಾಭ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ನಷ್ಟ, ಆರ್ಥಿಕ ಸಂಕಷ್ಟ, ನಷ್ಟ, ನಿರಾಸೆಗಳಿಂದ ವ್ಯಥೆ, ಅತಿಯಾದ ಒಳ್ಳೆಯತನದಿಂದ ತೊಂದರೆ, ಕೊಟ್ಟ ಸಾಲ ಹಣ ಹಿಂತಿರುಗಿಸುವುದಿಲ್ಲ.
ಕನ್ಯಾ: ವ್ಯಾಪಾರ-ಉದ್ಯೋಗಕ್ಕಾಗಿ ತಿರುಗಾಟ, ಸ್ಥಿರಾಸ್ತಿಯ ಪತ್ರ ವ್ಯವಹಾರಗಳಲ್ಲಿ ತೊಡಗುವಿರಿ, ಶುಭ ಕಾರ್ಯ ಯೋಗ, ಅದೃಷ್ಟ ಒಲಿದು ಬರುವುದು, ಸ್ನೇಹಿತರು-ನಂಬಿಕಸ್ಥರಿಂದ ಮೋಸ, ತೀರ್ಥಕ್ಷೇತ್ರ ದರ್ಶನ, ದಾಯಾದಿಗಳಿಂದ ತೊಂದರೆ, ಸಹೋದರಿಯಿಂದ ಸಮಸ್ಯೆ, ಇಲ್ಲ ಸಲ್ಲದ ಅಪವಾದ.
ತುಲಾ: ಉದ್ಯೋಗ ಬದಲಾಯಿಸುವ ಪರಿಸ್ಥಿತಿ, ಆರ್ಥಿಕ ಅನುಕೂಲ, ಸಾಲದ ಸಮಸ್ಯೆ ಬಗೆಹರಿಯುವುದು, ಬಂಧುಗಳ ಆಗಮನ, ನೆರೆಹೊರೆಯವರಿಂದ ಧನ ಸಹಾಯ, ನೀವಾಡುವ ಮಾತುಗಳಿಂದ ವೈಮನಸ್ಸು, ಶತ್ರುತ್ವ ಹೆಚ್ಚಾಗುವುದು, ಉದ್ಯೋಗ ಸ್ಥಳದಲ್ಲಿ ನಷ್ಟ, ಗ್ಯಾಸ್ಟ್ರಿಕ್,ಅಜೀರ್ಣ, ದೈಹಿಕ ಬಾಧೆ, ನೀರಿನ ವ್ಯತ್ಯಾಸದಿಂದ ಅನಾರೋಗ್ಯ.
ವೃಶ್ಚಿಕ: ಸ್ವಂತ ಉದ್ಯಮದಲ್ಲಿ ಪ್ರಗತಿ, ವ್ಯಾಪಾರ-ವ್ಯವಹಾರದಲ್ಲಿ ಬೆಳವಣಿಗೆ, ಶತ್ರುಗಳಲ್ಲಿ ಸ್ನೇಹ ಬಾಂಧವ್ಯ, ಮಕ್ಕಳಿಂದ ನೋವು, ಭವಿಷ್ಯದ ಬಗ್ಗೆ ಚಿಂತನೆ, ಮಾನಸಿಕ ಗೊಂದಲ, ತಂದೆಯಿಂದ ಧನ ಸಹಾಯ, ಶುಭ ಕಾರ್ಯಗಳಿಗೆ ಪ್ರಯಾಣ, ಸ್ಥಿರಾಸ್ತಿ-ವಾಹನದ ಮೇಲೆ ಹಣ ಹೂಡಿಕೆ, ಅದೃಷ್ಟ ಕೈ ತಪ್ಪುವುದೆಂಬ ಆತಂಕ, ಪ್ರಶಾಂತವಾದ ಭಾವನೆಗಳು ಕೆರಳುವುದು.
ಧನಸ್ಸು: ಸ್ಥಿರಾಸ್ತಿಯಿಂದ ಯೋಗ, ಮಾತೃವಿನಿಂದ ಅದೃಷ್ಟ, ಸ್ಥಿರಾಸ್ತಿ ಮಾರಾಟಕ್ಕೆ ಸೂಚನೆ, ವಾಹನಗಳಿಂದ ಅಧಿಕ ಖರ್ಚು, ದಾಂಪತ್ಯದಲ್ಲಿ ವೈರತ್ವ ಹೆಚ್ಚಾಗುವುದು, ಕೌಟುಂಬಿಕ ಕಲಹಗಳಿಂದ ನಿದ್ರಾಭಂಗ, ಅನಿರೀಕ್ಷಿತ ಸೋಲು, ನಷ್ಟ, ನಿರಾಸೆ, ಅಧಿಕವಾದ ಚಿಂತೆ ಶುರುವಾಗುವುದು.
ಮಕರ: ಸಂಗಾತಿಯಿಂದ ಧನಾಗಮನ ನಿರೀಕ್ಷೆ, ಸಂಶಯಗಳು ಸುಳಿದಾಟ, ನೆರೆಹೊರೆ-ಬಂಧುಗಳಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ನಿದ್ರಾಭಂಗ, ಪಾಲುದಾರಿಕೆಯಲ್ಲಿ ಲಾಭ, ಸಾಲ ತೀರಿಸುವ ಯೋಗ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗಸ್ಥ ಮಕ್ಕಳಿಂದ ಅನುಕೂಲ, ಜನ್ಮ ಸ್ಥಳದಿಂದ ದೂರ ಉಳಿಯುವ ಆಲೋಚನೆ.
ಕುಂಭ: ಸಾಲ ದೊರೆಯುವ ಸಾಧ್ಯತೆ, ಆಹಾರ, ನೀರು, ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ, ಉದರ ಬಾಧೆ, ಉದ್ಯೋಗದಲ್ಲಿ ಪ್ರಗತಿ, ಗುಪ್ತ ಧನಾಗಮನ, ನೀರಿನ ಪ್ರದೇಶಗಳಲ್ಲಿ ಎಚ್ಚರ, ಸಂತಾನ ದೋಷ, ಬಡ್ತಿ ವಿಚಾರದಲ್ಲಿ ಪ್ರಗತಿ, ಶುಭ ಹಾರೈಕೆ, ಪ್ರಶಂಸೆ ಲಭಿಸುವುದು, ಕಾಲಿಗೆ ಪೆಟ್ಟಾಗುವ ಸಾಧ್ಯತೆ.
ಮೀನ: ಮಕ್ಕಳ ಜೀವನದಲ್ಲಿ ಪ್ರಗತಿ, ಮೊಂಡುತನ-ಹಠಮಾರಿತನ, ಅಹಂಭಾವ ಹೆಚ್ಚಾಗುವುದು, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಗೊಂದಲಗಳಿಗೆ ಮುಕ್ತಿ ಲಭಿಸುವುದು, ದೇವರು-ಗುರುಗಳ ಅನುಗ್ರಹದಿಂದ ಲಾಭ, ಉದ್ಯೋಗ ನಿಮಿತ್ತ ಪ್ರಯಾಣ, ತಂದೆಯಿಂದ ಅದೃಷ್ಟದ ಯೋಗ, ಆರ್ಥಿಕ ಸಮಸ್ಯೆ ಬಗೆಹರಿಯವುದು, ದಾಯಾದಿ ಕಲಹಗಳಿಗೆ ಮುಕ್ತಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv