Connect with us

Dina Bhavishya

ದಿನಭವಿಷ್ಯ: 09-12-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಶುಕ್ಲ ಪಕ್ಷ, ದ್ವಿತೀಯಾ ತಿಥಿ,
ಭಾನುವಾರ, ಮೂಲಾ ನಕ್ಷತ್ರ,

ರಾಹುಕಾಲ: ಸಂಜೆ 4:34 ರಿಂದ 5:59
ಗುಳಿಕಕಾಲ: ಮಧ್ಯಾಹ್ನ 3:08 ರಿಂದ 4:34
ಯಮಗಂಡಕಾಲ: ಮಧ್ಯಾಹ್ನ 12:16 ರಿಂದ 1:42

ಮೇಷ: ಕುಟುಂಬದಲ್ಲಿ ಸಂತೋಷ, ತಾಳ್ಮೆ ಅತ್ಯಗತ್ಯ, ಪ್ರಭಾವಿ ವ್ಯಕ್ತಿಗಳ ಭೇಟಿ, ಕೆಲಸ ಕಾರ್ಯದಲ್ಲಿ ವಿಳಂಬ, ಮನಸ್ಸಿನಲ್ಲಿ ಗೊಂದಲ, ಅಧಿಕ ತಿರುಗಾಟ.

ವೃಷಭ: ಸ್ನೇಹಿತರ ಭೇಟಿ, ಹಳೇ ಸಾಲ ಮರುಪಾವತಿ, ದಾಂಪತ್ಯದಲ್ಲಿ ಪ್ರೀತಿ, ವೈಯುಕ್ತಿಕ ಕೆಲಸಗಳಲ್ಲಿ ಜಯ, ದುಷ್ಟ ಜನರಿಂದ ದೂರವಿರಿ,ಶತ್ರುಗಳ ಬಾಧೆ, ಉದ್ಯೋಗದಲ್ಲಿ ಕಿರಿಕಿರಿ.

ಮಿಥುನ: ಎಲ್ಲರ ಮನಸ್ಸು ಗೆಲ್ಲುವಿರಿ, ಅಮೂಲ್ಯ ವಸ್ತುಗಳ ಖರೀದಿ, ಮಾನಸಿಕ ನೆಮ್ಮದಿ, ಯಾರನ್ನೂ ಹೆಚ್ಚು ನಂಬಬೇಡಿ, ಆಲಸ್ಯ ಮನೋಭಾವ, ಅತಿಯಾದ ಕೋಪ, ಆರೋಗ್ಯದಲ್ಲಿ ಏರುಪೇರು, ಹಿತ ಶತ್ರುಗಳ ಬಾಧೆ.

ಕಟಕ: ಸಹೋದ್ಯೋಗಿಗಳ ಜೊತೆ ಆತ್ಮೀಯತೆ, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಗೆ ಪರಿಶ್ರಮ, ವ್ಯವಹಾರ ಆರಂಭಕ್ಕೆ ಒಳ್ಳೆ ಸಮಯ, ದೂರ ಪ್ರಯಾಣ.

ಸಿಂಹ: ಇತರರ ಮಾತಿನಿಂದ ಕಲಹ, ಮಾತಿನ ಚಕಮಕಿ, ಇಲ್ಲ ಸಲ್ಲದ ಅಪವಾದ, ಗೌರವಕ್ಕೆ ಧಕ್ಕೆ, ಸಣ್ಣ ವಿಚಾರಗಳಿಂದ ಮನಃಸ್ತಾಪ, ತೀರ್ಥಯಾತ್ರೆ ದರ್ಶನ, ಅನಗತ್ಯ ಹಸ್ತಕ್ಷೇಪ ಸಲ್ಲದು.

ಕನ್ಯಾ: ಕುಟುಂಬದ ಜವಾಬ್ದಾರಿ ಹೆಚ್ಚಾಗುವುದು, ಅನ್ಯ ಜನರಲ್ಲಿ ವೈಮನಸ್ಸು, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ, ಮಕ್ಕಳಿಂದ ನಿಂದನೆ, ಸ್ವಯಂಕೃತ ಅಪರಾಧಗಳಿಂದ ಮನೋವ್ಯಥೆ.

ತುಲಾ: ಅನ್ಯರಲ್ಲಿ ವೈಮನಸ್ಸು, ಪರರ ಧನ ಪ್ರಾಪ್ತಿ, ದ್ರವ್ಯ ಲಾಭ, ಸುಖ ಭೋಜನ ಪ್ರಾಪ್ತಿ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಕಷ್ಟ ಕಾರ್ಪಾಣ್ಯಗಳು ಹೆಚ್ಚಾಗುವುದು, ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿ.

ವೃಶ್ಚಿಕ: ಅಪರಿಚಿತರಿಂದ ಕಲಹ, ಮಾತಿನಲ್ಲಿ ಹಿಡಿತವಿರಲಿ, ಅತಿಯಾದ ನಿದ್ರೆ, ಮಹಿಳೆಯರಿಗೆ ವಿಶೇಷವಾದ ಲಾಭ, ಅಧಿಕವಾದ ಖರ್ಚು, ಪ್ರಿಯ ಜನರ ಭೇಟಿ, ಮಾನಸಿಕ ನೆಮ್ಮದಿ.

ಧನಸ್ಸು: ಸ್ತ್ರೀಯರಿಗೆ ಅನುಕೂಲ, ಮಾತೃವಿನಿಂದ ಸಹಾಯ, ಸ್ಥಳ ಬದಲಾವಣೆ, ಆರೋಗ್ಯದಲ್ಲಿ ವ್ಯತ್ಯಾಸ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಉದ್ಯೋಗದಲ್ಲಿ ಪ್ರಗತಿ, ಅಲ್ಪ ಆದಾಯ, ಅಧಿಕವಾದ ಖರ್ಚು.

ಮಕರ: ಆತ್ಮೀಯರ ಆಗಮನದಿಂದ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ ಲಭಿಸುವುದು, ಬಾಕಿ ಹಣ ಕೈ ಸೇರಲಿದೆ, ಮಾನಸಿಕ ನೆಮ್ಮದಿ, ಆಧ್ಯಾತ್ಮಿಕ ವಿಚಾರದಲ್ಲಿ ಹಿರಿಯರ ಬೆಂಬಲ.

ಕುಂಭ: ಆತ್ಮೀಯರಿಂದ ಸಹಾಯ, ವಾಹನ ಅಪಘಾತ ಸಾಧ್ಯತೆ, ಉದ್ಯೋಗದಲ್ಲಿ ಕಿರಿಕಿರಿ, ಭೂಮಿ ಖರೀದಿ ಯೋಗ, ಉತ್ತಮ ಬುದ್ಧಿಶಕ್ತಿ, ಸಂಗಾತಿಯ ಸಲಹೆ ಪಡೆಯುವುದು ಉತ್ತಮ.

ಮೀನ: ರಾಜಕೀಯ ಸಭೆ-ಸಮಾರಂಭಗಳಲ್ಲಿ ಭಾಗಿ, ಗೆಳೆಯರಿಂದ ಅನರ್ಥ, ದೈವಿಕ ಚಿಂತನೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ವ್ಯಾಪಾರದಲ್ಲಿ ಏರುಪೇರು, ಕಾರ್ಯದಲ್ಲಿ ವಿಳಂಬ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಋಣ ಬಾಧೆ.

 ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *