ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ಪ್ರಥಮಿ,
ಮಧ್ಯಾಹ್ನ 2:00 ನಂತರ ದ್ವಿತೀಯಾ ತಿಥಿ,
ಶನಿವಾರ, ಮೂಲಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:23 ರಿಂದ 10:49
ಗುಳಿಕಕಾಲ: ಬೆಳಗ್ಗೆ 6:32 ರಿಂದ 7:57
ಯಮಗಂಡಕಾಲ: ಮಧ್ಯಾಹ್ನ 1:41 ರಿಂದ 3:07
Advertisement
ಮೇಷ: ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ತಾಯಿ ಕಡೆಯಿಂದ ಧನಾಗಮನ, ಸ್ಥಿರಾಸ್ತಿ-ವಾಹನದಿಂದ ಅನುಕೂಲ.
Advertisement
ವೃಷಭ: ಉದ್ಯೋಗ ನಷ್ಟದ ಭೀತಿ, ಮನಸ್ಸಿನಲ್ಲಿ ಆತಂಕ, ಆಕಸ್ಮಿಕ ಸಮಸ್ಯೆ ಎದುರಾಗುವುದು, ತಾಯಿಗೆ ಅನಾರೋಗ್ಯ.
Advertisement
ಮಿಥುನ: ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಬರವಣಿಗೆಯಲ್ಲಿ ವ್ಯತ್ಯಾಸ, ಅನಿರೀಕ್ಷಿತ ಸಮಸ್ಯೆ, ಸ್ವಯಂಕೃತ್ಯಗಳಿಂದ ನಷ್ಟ, ಕುಟುಂಬಸ್ಥರಿಂದ ನಿಂದನೆ.
Advertisement
ಕಟಕ: ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅತಿಯಾದ ಮೋಹ, ವಿಕೃತ ಆಸೆಗಳು ಹೆಚ್ಚಾಗುವುದು, ಕುಟುಂಬದಲ್ಲಿ ಸಂಕಷ್ಟ, ಆರೋಗ್ಯದಲ್ಲಿ ಏರುಪೇರು.
ಸಿಂಹ: ಮಕ್ಕಳಿಗಾಗಿ ಅಧಿಕ ಖರ್ಚು, ಭಾವನೆಗಳಿಗೆ ಪೆಟ್ಟು, ಮಕ್ಕಳಲ್ಲಿ ಬೇಜವಾಬ್ದಾರಿತನ, ವಿಕೃತ ಮನಸ್ಥಿತಿ.
ಕನ್ಯಾ: ಸ್ನೇಹಿತರಿಂದ ಸಾಲ ಸಹಾಯ, ಹಣಕಾಸು ಸಮಸ್ಯೆ, ಸ್ಥಿರಾಸ್ತಿ ನಷ್ಟ ಮಾಡಿಕೊಳ್ಳುವಿರಿ, ವಸ್ತ್ರಾಭರಣ ಕಳೆದುಕೊಳ್ಳುವ ಸಂದರ್ಭ, ನಿದ್ರೆಯಲ್ಲಿ ಸುಖ ಜೀವನದ ಕನಸು.
ತುಲಾ: ಜೂಜು-ರೇಸ್ಗಳಿಂದ ಹಣ ಸಂಪಾದನೆ, ಮಕ್ಕಳಿಂದ ನೋವು, ಸಂಕಷ್ಟ ಎದುರಾಗುವುದು, ಪ್ರೇಮ ವಿಚಾರದಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಅಡೆತಡೆ.
ವೃಶ್ಚಿಕ: ಸ್ಥಿರಾಸ್ತಿ ವಿಚಾರದಲ್ಲಿ ಮೋಸ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಮನಸ್ಸಿನಲ್ಲಿ ಆತಂಕ.
ಧನಸ್ಸು: ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಸ್ಥಿರಾಸ್ತಿ ವ್ಯವಹಾರದಲ್ಲಿ ಎಚ್ಚರ, ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಆಕಸ್ಮಿಕ ಪ್ರಯಾಣ ಮಾಡುವಿರಿ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಆರ್ಥಿಕ ಸಂಕಷ್ಟ, ಸಂಗಾತಿಗೆ ಆತುರ ಸ್ವಭಾವ, ಅನಗತ್ಯ ಕಲಹ, ಒತ್ತಡಗಳಿಂದ ನಿದ್ರಾಭಂಗ, ಯಂತ್ರೋಪಕರಣಗಳಿಂದ ನಷ್ಟ.
ಕುಂಭ: ಸ್ಥಿರಾಸ್ತಿ ಮೇಲೆ ಸಾಲ ಕೇಳುವಿರಿ, ವಾಹನ ಅಡಮಾನವಿಡುವ ಸಾಧ್ಯತೆ, ಕೆಲಸಗಾರರ ಕೊರತೆ ನಿವಾರಣೆ, ಬಾಡಿಗೆದಾರರ ಸಮಸ್ಯೆ ಶಮನ.
ಮೀನ: ಮೋಜು-ಮಸ್ತಿಗಾಗಿ ಅಧಿಕ ಖರ್ಚು, ಅನಗತ್ಯ ಹಣವ್ಯಯ, ಉದ್ಯೋಗದಲ್ಲಿ ನಿರಾಸಕ್ತಿ, ಕೆಲಸ ಕಾರ್ಯಗಳಲ್ಲಿ ನಿರುತ್ಸಾಹ, ಮಾಟ ಮಂತ್ರದ ಭೀತಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv