Dina BhavishyaLatestMain Post

ದಿನಭವಿಷ್ಯ: 07-12-2018

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಅಮಾವಾಸ್ಯೆ,
ಮಧ್ಯಾಹ್ನ 12:50 ನಂತರ ಪ್ರಥಮಿ
ಶುಕ್ರವಾರ, ಜ್ಯೇಷ್ಠ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:48 ರಿಂದ 12:14
ಗುಳಿಕಕಾಲ: ಬೆಳಗ್ಗೆ 7:56 ರಿಂದ 9:22
ಯಮಗಂಡಕಾಲ: ಮಧ್ಯಾಹ್ನ 3:06 ರಿಂದ 4:32

ಮೇಷ: ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮರೆವು ಸಮಸ್ಯೆ, ಅತ್ತೆ-ಸೊಸೆ ಮಧ್ಯೆ ಮನಃಸ್ತಾಪ, ಕುಟುಂಬದಲ್ಲಿ ಕಲಹ, ಉದ್ಯೋಗದಲ್ಲಿ ಕಿರಿಕಿರಿ, ಈ ದಿನ ಅಶುಭ ಫಲ.

ವೃಷಭ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಂಧುಗಳಿಂದ ಬೇಸರ, ನೆರೆಹೊರೆಯವರಿಂದ ಕಿರಿಕಿರಿ, ಆಕಸ್ಮಿಕ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ.

ಮಿಥುನ: ಉದ್ಯೋಗ ಪ್ರಾಪ್ತಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ವಿಧ್ಯಾರ್ಥಿಗಳಲ್ಲಿ ಸಾಧಿಸುವ ಹಂಬಲ, ಸ್ವಂತ ಉದ್ಯಮ, ವ್ಯವಹಾರದಲ್ಲಿ ಲಾಭ.

ಕಟಕ: ವಿದ್ಯಾರ್ಥಿಗಳು ಕಲಹ ಮಾಡಿಕೊಳ್ಳುವರು, ಸ್ತ್ರೀಯರಿಗೆ ಸೊಂಟ-ಕುತ್ತಿಗೆ ನೋವು, ಚರ್ಮ ರೋಗ, ನೀರು ವ್ಯತ್ಯಾಸದಿಂದ ಅನಾರೋಗ್ಯ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಭವಿಷ್ಯದ ಬಗ್ಗೆ ಚಿಂತನೆ.

ಸಿಂಹ: ವಿದ್ಯಾರ್ಥಿಗಳಿಗೆ ಓದಿನಲ್ಲಿ ನಿರಾಸಕ್ತಿ, ಅತಿಯಾದ ಸೋಮಾರಿತನ, ಗ್ಯಾಸ್ಟ್ರಿಕ್ ಸಮಸ್ಯೆ, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ಪ್ರಯಾಣ.

ಕನ್ಯಾ: ವಿದ್ಯಾರ್ಥಿಗಳಲ್ಲಿ ಉನ್ನತ ವಿದ್ಯಾಭ್ಯಾಸದ ಆಲೋಚನೆ, ಮಹಿಳೆಯರಿಗೆ ಮಿತ್ರರಿಂದ ನೋವು, ಸಂಕಟಗಳ ಬಾಧೆ, ಉದ್ಯೋಗ ಬದಲಾವಣೆ, ಉತ್ತಮ ಅವಕಾಶಗಳು ಲಭಿಸುವುದು.

ತುಲಾ: ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮ ಅವಕಾಶ, ಮಹಿಳೆಯರ ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ನೀವಾಡುವ ಮಾತಿನಿಂದ ತೊಂದರೆಗೆ ಸಿಲುಕುವಿರಿ, ಸಹೋದ್ಯೋಗಿಗಳಿಗಾಗಿ ಖರ್ಚು, ಕುಟುಂಬಕ್ಕಾಗಿ ಅಧಿಕ ವೆಚ್ಚ ಮಾಡುವಿರಿ.

ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಆಲಸ್ಯ ಮೊಂಡುತನ, ಆರೋಗ್ಯದಲ್ಲಿ ಸಮಸ್ಯೆ, ಜೀವನದಲ್ಲಿ ಬೇಸರ, ಗೌರವಕ್ಕೆ ಧಕ್ಕೆ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಪ್ರಯಾಣದಲ್ಲಿ ಕಿರಿಕಿರಿ.

ಧನಸ್ಸು: ಅನಿರೀಕ್ಷಿತ ಘಟನೆಗಳಿಂದ ವ್ಯಥೆ, ವಿಶ್ರಾಂತಿ ಬಯಸುವಿರಿ, ವಿದ್ಯಾರ್ಥಿಗಳಲ್ಲಿ ಉತ್ಸಾಹ, ಉದ್ಯೋಗದ ಆಸೆ ಈಡೇರುವುದು.

ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ವಿಪರೀತ ರಾಜಯೋಗ, ಚರ್ಮ ತುರಿಕೆ, ಅಜೀರ್ಣ ಸಮಸ್ಯೆ, ವಾತಾವರಣ ವ್ಯತ್ಯಾಸದಿಂದ ಅನಾರೋಗ್ಯ.

ಕುಂಭ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಕೆಲಸ ಮಾಡುವ ಹಂಬಲ, ಮಹಿಳೆಯರಿಗೆ ಮಿತ್ರರಿಂದ ಅನುಕೂಲ, ಕೋರ್ಟ್ ಕೇಸ್‍ಗಳಿಗೆ ಹಾಜರು, ಉದ್ಯೋಗ ಸ್ಥಳದಲ್ಲಿ ಶತ್ರುಕಾಟ, ಮಿತ್ರರಿಂದ ಸಾಂತ್ವನದ ನುಡಿ.

ಮೀನ: ಪ್ರೇಮದ ಬಲೆಗೆ ಸಿಲುಕುವಿರಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಐಷಾರಾಮಿ ಜೀವನಕ್ಕೆ ಮನಸ್ಸು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ನೆರೆಹೊರೆಯವರೊಂದಿಗೆ ಕಲಹ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *

Back to top button