Connect with us

Dina Bhavishya

ದಿನಭವಿಷ್ಯ: 07-10-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಭಾದ್ರಪದ ಮಾಸ,
ಕೃಷ್ಣ ಪಕ್ಷ, ಭಾನುವಾರ.

ಮೇಷ: ಮನೆ ವಾತಾವರಣದಲ್ಲಿ ಅಶಾಂತಿ, ಮನಸ್ಸಿನಲ್ಲಿ ನಾನಾ ಅಲೋಚನೆ, ಮಾನಸಿಕ ವ್ಯಥೆ, ಮುಂಗೋಪ ಹೆಚ್ಚಾಗುವುದು, ಕೆಲಸ ಕಾರ್ಯಗಳಲ್ಲಿ ವಿಳಂಬ, ಆತುರ ನಿರ್ಧಾರದಿಂದ ಸಂಕಷ್ಟ, ಯೋಚಿಸಿ ಕೆಲಸದಲ್ಲಿ ಮುನ್ನಡೆಯುವುದು ಉತ್ತಮ.

ವೃಷಭ: ಹಣ ಬಂದರೂ ಉಳಿಯುವುದಿಲ್ಲ, ಅಧಿಕವಾದ ಖರ್ಚು, ಆತ್ಮೀಯರಲ್ಲಿ ವೈಮನಸ್ಸು, ಅನ್ಯರೊಂದಿಗೆ ವಾದ-ವಿವಾದ, ಕುಟುಂಬದಲ್ಲಿ ಕಲಹ ಮಾಡುವ ಸಾಧ್ಯತೆ, ನೀವಾಡುವ ಮಾತಿನ ಮೇಲೆ ಹಿಡಿತ ಅಗತ್ಯ, ಕಷ್ಟಗಳು ಬಂದರೂ ಎದುರಿಸುವಿರಿ.

ಮಿಥುನ: ಉನ್ನತ ವಿದ್ಯಾಭ್ಯಾಸದ ಯೋಗ, ಮಕ್ಕಳಿಗೆ ಓದಿನಲ್ಲಿ ಅಧಿಕವಾದ ಆಸಕ್ತಿ, ಸ್ನೇಹಿತರಿಂದ ಖರ್ಚು ನಷ್ಟ ಅನುಭವಿಸುವಿರಿ, ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವಿರಿ, ಇಷ್ಟಾರ್ಥಗಳು ಸಿದ್ಧಿಯಾಗುವುದು, ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರಿಕೆ.

ಕಟಕ: ಅಧಿಕವಾದ ಶೀತ ಬಾಧೆ, ಆರೋಗ್ಯಕ್ಕಾಗಿ ಹಣವ್ಯಯ, ಷೇರು ವ್ಯವಹಾರಗಳಲ್ಲಿ ನಷ್ಟ, ಹಣಕಾಸು ವಿಚಾರವಾಗಿ ಎಚ್ಚರ, ಈ ವಾರ ಬಂಡವಾಳ ಹೂಡಿಕೆ ಬೇಡ,ಎಷ್ಟೇ ಐಶ್ವರ್ಯವಿದ್ದರೂ ನೆಮ್ಮದಿಗೆ ಭಂಗ, ಮನಸ್ಸಿನಲ್ಲಿ ಆತಂಕ-ನೋವು ಬಾಧಿಸುವುದು.

ಸಿಂಹ: ಹಣಕಾಸು ಸಮಸ್ಯೆ ಇದ್ರೂ ನೆಮ್ಮದಿ ಬಯಸುವಿರಿ, ಇಷ್ಟಾರ್ಥ ಸಿದ್ಧಿಗಾಗಿ ಅಧಿಕವಾದ ತಿರುಗಾಟ, ಮನಸ್ಸಿನಲ್ಲಿ ಅಲ್ಪ ಆತಂಕ-ಗೊಂದಲ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಅನಗತ್ಯ ಅಧಿಕವಾದ ಖರ್ಚು ಮಾಡುವಿರಿ, ಕುಟುಂಬದಲ್ಲಿ ಅಧಿಕವಾದ ಕೋಪ, ವಾದ-ವಿವಾದಗಳಿಂದ ದೂರ ಉಳಿಯುವುದು ಉತ್ತಮ.

ಕನ್ಯಾ; ದಾಯಾದಿಗಳೊಂದಿಗೆ ವೈಮನಸ್ಸು, ಬಂಧುಗಳಿಂದ ನಿಂದನೆ-ಅವಮಾನ, ವ್ಯವಹಾರದಲ್ಲಿ ನಿಧಾನಗತಿ, ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ, ಹಣಕಾಸು ವಿಚಾರದಲ್ಲಿ ತಗಾದೆ, ತಪ್ಪು ಮಾಡಿ ದಂಡ ಕಟ್ಟುವ ಪ್ರಸಂಗ, ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಲಾಭ.

ತುಲಾ: ಹಣಕಾಸು ವಿಚಾರದಲ್ಲಿ ಯೋಚನೆ, ವ್ಯವಹಾರ ಆರಂಭಕ್ಕೆ ಯೋಜನೆ ರೂಪಿಸುವಿರಿ, ಮಾನಸಿಕವಾಗಿ ವೇದನೆ ಪಡುವಿರಿ, ಮನಸ್ಸಿನಲ್ಲಿ ಭಯ-ಆತಂಕ, ಮನೆಯಲ್ಲಿ ಗೊಂದಲಮಯ ವಾತಾವರಣ, ಅತಿಯಾದ ದುಃಖ ಕಾಡುವುದು, ಹಿರಿಯರಿಂದ ಉತ್ತಮ ಸಲಹೆ ಲಭಿಸುವುದು.

ವೃಶ್ಚಿಕ: ನಾನಾ ವಿಚಾರಗಳ ಬಗ್ಗೆ ಚರ್ಚೆ, ಹಣಕಾಸು ವಿಚಾರವಾಗಿ ನಷ್ಟ ಸಾಧ್ಯತೆ, ದೇಹದಲ್ಲಿ ಆಲಸ್ಯ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಸ್ನೇಹಿತರೊಂದಗೆ ಕಲಹ-ವಾಗ್ವಾದ, ಶತ್ರುತ್ವ ಹೆಚ್ಚಾಗುವುದು, ಷೇರು ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ಧನಸ್ಸು; ಯತ್ನ ಕಾರ್ಯದಲ್ಲಿ ಯಶಸ್ಸು ಗಳಿಸುವಿರಿ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುವುದು, ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ, ಹಣಕಾಸು-ಆಹಾರ ದಾನ ಸಾಧ್ಯತೆ,
ಅಪರಿಚಿತ ಅಪರೂಪದ ವ್ಯಕ್ತಿಯನ್ನು ಭೇಟಿಯಾಗುವಿರಿ, ನೆಮ್ಮದಿ ಜೀವನಕ್ಕೆ ಮನಸ್ಸು ಹಾತೊರೆಯುವುದು.

ಮಕರ: ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ದೂರ ಪ್ರಯಾಣ ಸಾಧ್ಯತೆ, ವಿದೇಶದಲ್ಲಿ ಉದ್ಯೋಗಾವಕಾಶ, ಮಾಡುತ್ತಿರುವ ಕೆಲಸದಲ್ಲಿ ಒತ್ತಡ, ಕುಟುಂಬದಲ್ಲಿ ಸಹಕಾರ, ಗೆಳೆಯರಿಂದ ಬುದ್ಧಿ ಮಾತು, ಹಿತ ಶತ್ರುಗಳ ಕಾಟ.

ಕುಂಭ: ಅನ್ಯರೊಂದಿಗೆ ದ್ವೇಷ, ಚಂಚಲವಾದ ಮನಸ್ಸು, ಶತ್ರುಗಳ ಬಾಧೆ ಹೆಚ್ಚು, ಅನ್ಯರ ಕುತಂತ್ರಕ್ಕೆ ಬಲಿಯಾಗುವಿರಿ, ನಂಬಿಕಸ್ಥರಿಂದ ಮೋಸ ಸಾಧ್ಯತೆ, ವಿದ್ಯಾರ್ಥಿಗಳಿಗೆ ಅಪಯಶಸ್ಸು, ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ.

ಮೀನ: ಸೈಟ್-ವಾಹನದಿಂದ ಲಾಭ, ಪಿತ್ರಾರ್ಜಿತ ಆಸ್ತಿ ತಗಾದೆ ನಿವಾರಣೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಗುರುಗಳಿಂದ ಸೂಕ್ತ ಸಲಹೆ, ಹಿರಿಯರಿಂದ ಬುದ್ಧಿ ಮಾತು,ಆರೋಗ್ಯದಲ್ಲಿ ವ್ಯತ್ಯಾಸ, ನೆಮ್ಮದಿ ಇಲ್ಲದ ಜೀವನವಾಗುವುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *