ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಚೈತ್ರ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಶನಿವಾರ, ಮೂಲಾ ನಕ್ಷತ್ರ
ಮಧ್ಯಾಹ್ನ 2:33 ನಂತರ ಪೂರ್ವಾಷಾಢ ನಕ್ಷತ್ರ
ರಾಹುಕಾಲ: ಬೆಳಗ್ಗೆ 9:21 ರಿಂದ 10:53
ಗುಳಿಕಕಾಲ: ಬೆಳಗ್ಗೆ 6:16 ರಿಂದ 7:49
ಯಮಗಂಡಕಾಲ: ಮಧ್ಯಾಹ್ನ 1:58 ರಿಂದ 3:30
Advertisement
ಮೇಷ: ಮಿತ್ರರೊಂದಿಗೆ ಕಲಹ, ವಾಗ್ವಾದಗಳಿಂದ ಮನಃಸ್ತಾಪ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಪ್ರೇಮ ವಿಚಾರದಲ್ಲಿ ಗೌರವಕ್ಕೆ ಧಕ್ಕೆ, ಮೃಷ್ಟಾನ್ನ ಭೋಜನ ಸವಿಯಲು ಆಸೆ.
Advertisement
ವೃಷಭ: ಪತ್ರ ವ್ಯವಹಾರದಲ್ಲಿ ಅಡೆತಡೆ, ಪ್ರಯಾಣದಲ್ಲಿ ಸಮಸ್ಯೆ, ಉದ್ಯೋಗದಲ್ಲಿ ನಿರಾಸಕ್ತಿ, ಮಾನಸಿಕ ಒತ್ತಡ, ವಸ್ತ್ರಾಭರಣ ಕಳೆದುಕೊಳ್ಳುವಿರಿ, ಅಲಂಕಾರಿಕ ವಸ್ತುಗಳಿಂದ ತೊಂದರೆ.
Advertisement
ಮಿಥುನ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ರದ್ದಾಗುವುದು, ಆಸೆ ಆಕಾಂಕ್ಷೆಗಳಿಗೆ ಪೆಟ್ಟು, ಸಂತಾನ ದೋಷ ಕಾಡುವುದು, ಆರೋಗ್ಯದಲ್ಲಿ ವ್ಯತ್ಯಾಸ.
Advertisement
ಕಟಕ: ತಾಯಿಯೊಂದಿಗೆ ಮನಃಸ್ತಾಪ, ಮನೆಯಲ್ಲಿ ಕಲಹದ ವಾತಾವರಣ, ಸ್ಥಿರಾಸ್ತಿ ತಗಾದೆ, ಕೋರ್ಟ್ ಕೇಸ್ಗಳಿಂದ ಮುಕ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಆಯುಷ್ಯಕ್ಕೆ ಕಂಟಕ ಸಾಧ್ಯತೆ, ಮನಸ್ಸಿನಲ್ಲಿ ಕೆಟ್ಟಾಲೋಚನೆ,
ಸಿಂಹ: ಸ್ವಯಂಕೃತ್ಯಗಳಿಂದ ನಷ್ಟ, ದಾಂಪತ್ಯದಲ್ಲಿ ಕಲಹ, ಸ್ತ್ರೀಯರಿಂದ ನೋವು, ಮಕ್ಕಳಿಂದ ನಿಂದನೆ, ಪಾಲುದಾರರಿಂದ ತೊಂದರೆ,
ಕನ್ಯಾ: ಆಹಾರ-ತಂಪು ಪಾನೀಯಗಳ ವ್ಯತ್ಯಾಸದಿಂದ ಅನಾರೋಗ್ಯ, ಅನಿರೀಕ್ಷಿತ ಸಾಲ ಮಾಡುವ ಪರಿಸ್ಥಿತಿ, ಕೆಲಸಗಾರರೊಂದಿಗೆ ಕಲಹ, ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿಗಳ ಕಲಹ, ದೈವ-ಗುರು ನಿಂದನೆ ಮಾಡುವಿರಿ, ಕಾನೂನು ಬಾಹಿಯ ಚಟುವಟಿಕೆ ಮಾಡುವಿರಿ.
ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಉದ್ಯಮ ಪ್ರಾರಂಭಕ್ಕೆ ಚಿಂತೆ, ವಾಹನ ಅಪಘಾತಗಳಾಗುವ ಸಾಧ್ಯತೆ, ಮಕ್ಕಳು ಬಿದ್ದು ಪೆಟ್ಟು ಮಾಡಿಕೊಳ್ಳುವರು, ಗರ್ಭಿಣಿಯರು ಎಚ್ಚರಿಕೆಯಲ್ಲಿರುವುದು ಒಳಿತು, ವ್ಯಾಪಾರಿಗಳಿಗೆ ಅನುಕೂಲ.
ವೃಶ್ಚಿಕ: ವಿಪರೀತ ಖರ್ಚು, ಮನೆಯಲ್ಲಿನ ವಸ್ತುಗಳು ಕಳವು, ಈ ದಿನ ಎಚ್ಚರಿಕೆ ಅಗತ್ಯ, ಅಧಿಕ ಉಷ್ಣ ಬಾಧೆ, ಚರ್ಮ ವ್ಯಾದಿ ಕಾಡುವುದು.
ಧನಸ್ಸು: ಆತ್ಮೀಯರಿಂದ ದೂರವಾಗುವಿರಿ, ಪ್ರಯಾಣದಲ್ಲಿ ಶತ್ರುಕಾಟ, ವಸ್ತ್ರುಗಳನ್ನು ಕಳೆದುಕೊಳ್ಳುವಿರಿ, ಮಕ್ಕಳಿಂದ ಲಾಭ, ಉತ್ತಮ ಅವಕಾಶಗಳು ಪ್ರಾಪ್ತಿ, ಶೀತ-ಕಫ, ಗಂಟಲು ಬಾಧೆ, ದುಶ್ಚಟಗಳಿಂದ ಅನಾರೋಗ್ಯ.
ಮಕರ: ಪ್ರೇಮಿಗಳಲ್ಲಿ ಮನಃಸ್ತಾಪ, ಭಾವನೆಗಳಿಗೆ ಪೆಟ್ಟು, ಸಂಗಾತಿಯಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಒತ್ತಡ.
ಕುಂಭ: ಸ್ಥಿರಾಸ್ತಿ ವಿಚಾರದಲ್ಲಿ ಕಲಹ, ಆರೋಗ್ಯ ಸಮಸ್ಯೆ, ಸಾಲ ಮಾಡುವ ಪರಿಸ್ಥಿತಿ, ಸ್ವಂತ ಉದ್ಯಮಸ್ಥರಿಗೆ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಆಲೋಚನೆ ಹೆಚ್ಚಾಗುವುದು.
ಮೀನ: ಮಕ್ಕಳಿಂದ ಆಕಸ್ಮಿಕ ಅವಘಢ, ಅನಿರೀಕ್ಷಿತ ಸಮಸ್ಯೆ ಎದುರಾಗುವುದು, ದೂರ ಪ್ರದೇಶದಿಂದ ಧನಾಗಮನ, ವಿಶ್ರಾಂತಿ ವೇತನ-ವಿಮೆ ಹಣ ಪ್ರಾಪ್ತಿ.