ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಚತುರ್ಥಿ ತಿಥಿ,
ಮಧ್ಯಾಹ್ನ 11:02 ನಂತರ ಪಂಚಮಿ ತಿಥಿ,
ಶುಕ್ರವಾರ, ಮೂಲಾ ನಕ್ಷತ್ರ
ರಾಹುಕಾಲ: ಬೆಳಗ್ಗೆ 10:46 ರಿಂದ 12:20
ಗುಳಿಕಕಾಲ: ಬೆಳಗ್ಗೆ 7:37 ರಿಂದ 9:11
ಯಮಗಂಡಕಾಲ: ಮಧ್ಯಾಹ್ನ 3:29 ರಿಂದ 5:04
Advertisement
ಮೇಷ: ಮಾತೃವಿನಿಂದ ಲಾಭ, ಮಿತ್ರರಿಂದ ಮೋಸ, ಪ್ರಯಾಣದಲ್ಲಿ ಎಚ್ಚರಿಕೆ, ದುಶ್ಚಟಗಳು ಅಧಿಕ, ಮಾನ ಅಪಮಾನಕ್ಕೆ ಗುರಿ, ತಂದೆ ಜೊತೆ ಜಗಳ.
Advertisement
ವೃಷಭ: ಪ್ರಯಾಣದಲ್ಲಿ ಅಡೆತಡೆ, ಆಕಸ್ಮಿಕ ಧನಾಗಮನ, ಉದ್ಯೋಗದಲ್ಲಿ ಕಿರಿಕಿರಿ, ಮಾನಸಿಕ ವೇದನೆ, ಸ್ಥಿರಾಸ್ತಿ ವಿಚಾರಗಳಲ್ಲಿ ಆತಂಕ, ದ್ವಿಚಕ್ರ ವಾಹನದಿಂದ ಪೆಟ್ಟು.
Advertisement
ಮಿಥುನ: ಅನಗತ್ಯ ತಿರುಗಾಟ, ವಿಪರೀತ ಧನವ್ಯಯ, ಬಂಧುಗಳಿಂದ ನಿಂದನೆ, ಮೌನಕ್ಕೆ ಶರಣಾಗುವಿರಿ, ವ್ಯಾಪಾರ ವ್ಯವಹಾರಕ್ಕೆ ಸಹಕಾರ, ಪಿತ್ರಾರ್ಜಿತ ಆಸ್ತಿಯಲ್ಲಿ ಆತಂಕ.
Advertisement
ಕಟಕ: ಸ್ವಯಂಕೃತ್ಯಗಳಿಂದ ಸಮಸ್ಯೆ, ತಪ್ಪು ನಿರ್ಧಾರಗಳಿಂದ ಸಂಕಷ್ಟ, ಹಣಕಾಸು ಸಮಸ್ಯೆ, ಬಂಧುಗಳಿಂದ ಕಿರಿಕಿರಿ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ, ಆರೋಗ್ಯ ವಿಚಾರದಲ್ಲಿ ಆತಂಕ, ನಿದ್ದೆಯಲ್ಲಿ ಕೆಟ್ಟ ಕನಸುಗಳು.
ಸಿಂಹ: ದಾಂಪತ್ಯದಲ್ಲಿ ವಿರಸ, ಮನಸ್ಸಿಗೆ ಬೇಸರ, ಭವಿಷ್ಯದ ಬಗ್ಗೆ ಆತಂಕ, ನಿದ್ರಾಭಂಗ, ಮಿತ್ರರ ಬೇಡದ ವಿಚಾರಗಳಲ್ಲಿ ತೊಡಗುವಿರಿ, ಆರ್ಥಿಕ ಸಹಾಯ ಮುಂದೂಡಿಕೆ, ಮಕ್ಕಳಲ್ಲಿ ಬಾಲಗ್ರಹ ದೋಷ.
ಕನ್ಯಾ: ಆತುರ ನಿರ್ಧಾರದಿಂದ ನಷ್ಟ, ಸ್ಥಿರಾಸ್ತಿ ವಾಹನ ನಷ್ಟ, ಶತ್ರು ಕಾಟ, ಸಾಲ ಬಾಧೆ, ಮಾನಸಿಕ ಚಿಂತೆ, ಕೆಲಸ ಕಾರ್ಯಗಳಲ್ಲಿ ಸಮಸ್ಯೆ, ಉದ್ಯೋಗದಲ್ಲಿ ಲಾಭ, ಸ್ವಯಂಕೃತ್ಯಗಳಿಂದ ನಷ್ಟ.
ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಮಕ್ಕಳಿಗಾಗಿ ಖಚು, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ, ಸಂತಾನ ದೋಷ, ಮಕ್ಕಳ ಬೆಳವಣಿಗೆಗೆ ಅಡೆತಡೆ.
ವೃಶ್ಚಿಕ: ಕೆಲಸಗಳಲ್ಲಿ ನಿರಾಸಕ್ತಿ, ಮಾನಸಿಕ ವೇದನೆ, ತಾಯಿಗೆ ಅನಾರೋಗ್ಯ, ಸ್ಥಿರಾಸ್ತಿ ವಿಚಾರದಲ್ಲಿ ಆತಂಕ, ಮನೆಯಲ್ಲಿ ಮಾಟ ಮಂತ್ರದ ಭೀತಿ, ದ್ವಿಚಕ್ರ ವಾಹನಗಳಿಂದ ತೊಂದರೆ, ಮಿತ್ರರಿಂದ ಧನಾಗಮನ.
ಧನಸ್ಸು: ಆಕಸ್ಮಿ ದುರ್ಘಟನೆ, ಪ್ರಯಾಣ ಸಾಧ್ಯತೆ, ಕೆಲಸಗಳಲ್ಲಿ ಹಿನ್ನಡೆ, ಜಿಗುಪ್ಸೆ, ಉದ್ಯೋಗದಲ್ಲಿ ನಿರಾಸಕ್ತಿ, ತಂದೆ ನಡವಳಿಕೆಯಿಂದ ಹಿಂಸೆ, ದೇವರ ಕಾರ್ಯದಲ್ಲಿ ಲೋಪ, ಮನಸ್ಸಿನಲ್ಲಿ ಆತಂಕ, ಭವಿಷ್ಯದ ಬಗ್ಗೆ ಅಸಡ್ಡೆ.
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಅನಗತ್ಯ ಮಾತಿನಿಂದ ಕಿರಿಕಿರಿ, ಕುಟುಂಬದಲ್ಲೇ ವಿರೋಧ, ಸಂಗಾತಿಗೆ ಅನಾರೋಗ್ಯ, ನಿದ್ರಾಭಂಗ, ಶತ್ರು-ಸಾಲ ಬಾಧೆ, ಬಂಧುಗಳಿಂದ ನೋವು.
ಕುಂಭ: ಚರ್ಮ ತುರಿಕೆ, ರಕ್ತದೋಷ, ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಲಾಭ, ಮನಸ್ಸಿನಲ್ಲಿ ಭಯ, ಅಧಿಕ ಬಡ್ಡಿಗೆ ಸಾಲ ಮಾಡುವಿರಿ.
ಮೀನ: ಸಂತಾನ ದೋಷ, ಮಕ್ಕಳಲ್ಲಿ ಬೇಜವಾಬ್ದಾರಿತನ, ನಿದ್ರಾಭಂಗ, ಮನೋರಂಜನೆ ಇಲ್ಲದೇ ಬೇಸರ, ಸ್ನೇಹಿತರಿಂದ ಅಪವಾದ, ಉದ್ಯೋಗ ಸ್ಥಳದಲ್ಲಿ ಕಳಂಕ, ಶತ್ರು ದಮನ, ಕಾರ್ಯಗಳಲ್ಲಿ ಜಯ.