Connect with us

Dina Bhavishya

ದಿನಭವಿಷ್ಯ: 03-12-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಕಾರ್ತಿಕ ಮಾಸ,
ಕೃಷ್ಣ ಪಕ್ಷ, ಏಕಾದಶಿ ತಿಥಿ, ಸೋಮವಾರ.

ಮೇಷ: ನಂಬಿಕಸ್ಥರಿಂದಲೇ ಮೋಸ, ಮನಸ್ಸಿನಲ್ಲಿ ಭಯ ಆತಂಕ, ಆತ್ಮೀಯ ವ್ಯಕ್ತಿಗಳ ಭೇಟಿ, ಚಿನ್ನಾಭರಣ ಖರೀದಿ ಯೋಗ, ಗೌರವ ಕೀರ್ತಿ ಲಾಭ.

ವೃಷಭ: ಉನ್ನತ ಅಧಿಕಾರ ಪ್ರಾಪ್ತಿ, ಮಾಡೋ ಕೆಲಸಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿಯ ದಿನ, ಪಿತ್ರಾರ್ಜಿತ ಆಸ್ತಿ ಲಭಿಸುವುದು, ದೂರ ಪ್ರಯಾಣ ಸಾಧ್ಯತೆ.

ಮಿಥುನ: ದೇವತಾ ಕಾರ್ಯಗಳಲ್ಲಿ ಓಡಾಟ, ಸಂಗಾತಿಯಿಂದ ಬುದ್ಧಿಮಾತು, ಶತ್ರುಗಳಿಗೆ ತೊಂದರೆಯಾಗುವುದು, ಕುತಂತ್ರದಿಂದ ಹಣ ಸಂಪಾದನೆ, ವೃಥಾ ತಿರುಗಾಟದಿಂದ ನಷ್ಟ.

ಕಟಕ: ಸ್ತ್ರೀಯರಿಂದ ಶುಭ ಫಲ, ಶೀತ ರೋಗ ಬಾಧೆ, ನೀವಾಡುವ ಮಾತಿನಲ್ಲಿ ಎಚ್ಚರಿಕೆ, ಗೌರವಕ್ಕೆ ಧಕ್ಕೆ ಸಾಧ್ಯತೆ, ಇಲ್ಲ ಸಲ್ಲದ ಅಪವಾದ.

ಸಿಂಹ: ಆರೋಗ್ಯದಲ್ಲಿ ಏರುಪೇರು, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಕೀಲು ನೋವು, ಅನ್ಯರಿಗೆ ತೊಂದರೆ ಮಾಡುವ ಸಾಧ್ಯತೆ, ಮಾನಸಿಕವಾದ ಒತ್ತಡ, ಆತುರ ಸ್ವಭಾವದಿಂದ ಸಂಕಷ್ಟ.

ಕನ್ಯಾ: ಸಮಾಜದಲ್ಲಿ ಉತ್ತಮ ಗೌರವ, ಕೆಲಸ ಕಾರ್ಯಗಳಲ್ಲಿ ಪ್ರಗತಿ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ವಿವಿಧ ಕ್ಷೇತ್ರದಲ್ಲಿ ಉದ್ಯೋಗಾವಕಾಶ.

ತುಲಾ: ಮನಸ್ಸಿನಲ್ಲಿ ಆತಂಕ, ಸರಿ ತಪ್ಪುಗಳ ಬಗ್ಗೆ ಚಿಂತಿಸಿ, ನಿರ್ಧಾರಗಳಲ್ಲಿ ಭಾರಿ ಎಚ್ಚರಿಕೆ, ನೆಮ್ಮದಿ ಇಲ್ಲದ ಜೀವನ ನಿಮ್ಮದಾಗುವುದು.

ವೃಶ್ಚಿಕ: ಹೊಗಳಿಕೆ ಮಾತಿಗೆ ಮರುಳಾಗಬೇಡಿ, ಆದಾಯಕ್ಕಿಂತ ಹೆಚ್ಚು ಖರ್ಚು, ಶತ್ರುಗಳ ನಾಶ, ನೆರೆಹೊರೆಯವರಿಂದ ಕುತಂತ್ರದಿಂದ ಸಂಕಷ್ಟ, ಸ್ಥಿರಾಸ್ತಿ ವಿಚಾರಗಳಲ್ಲಿ ಕಲಹ.

ಧನಸ್ಸು: ಸಾಮಾಜಿಕ ಕ್ಷೇತ್ರದಲ್ಲಿ ಗೌರವ, ಪರಿಶ್ರಮಕ್ಕೆ ತಕ್ಕ ಫಲ, ಹಣಕಾಸು ಲಾಭ, ಉದ್ಯೋಗದಲ್ಲಿ ಒತ್ತಡ-ಕಿರಿಕಿರಿ, ಸ್ತ್ರೀಯರಿಗೆ ಸಮಸ್ಯೆ ಎದುರಾಗುವುದು.

ಮಕರ: ಅನಗತ್ಯ ವಿಚಾರಗಳಿಂದ ದೂರಿವಿರಿ, ಬೇಡವಾದ ವಿಷಯಗಳ ಬಗ್ಗೆ ಚಿಂತನೆ, ಅನಾವಶ್ಯಕ ವಸ್ತುಗಳ ಖರೀದಿ, ಭೂಮಿಯಿಂದ ಅನುಕೂಲ, ಭವಿಷ್ಯದ ಬಗ್ಗೆ ದೀರ್ಘಾಲೋಚನೆ.

ಕುಂಭ: ರಫ್ತು ವ್ಯವಹಾರಸ್ಥರಿಗೆ ಲಾಭ, ವಿಶ್ರಾಂತಿಯಿಲ್ಲದ ಕೆಲಸ ಕಾರ್ಯಗಳು, ಕೆಲಸಲದಲ್ಲಿ ಅಧಿಕವಾದ ಒತ್ತಡ, ರಾಜಕಾರಣಿಗಳಿಗೆ ಮನ್ನಣೆ, ಕೆಲಸ ಕಾರ್ಯದಲ್ಲಿ ನಿರ್ವಿಘ್ನ.

ಮೀನ: ಮೇಲಾಧಿಕಾರಿಗಳಿಂದ ಪ್ರಶಂಸೆ, ವಿಪರೀತವಾದ ಕೆಲಸ, ಒತ್ತಡ ಜೀವನದಿಂದ ವಿಶ್ರಾಂತಿ ಪಡೆಯುವಿರಿ, ಆರೋಗ್ಯದಲ್ಲಿ ಏರುಪೇರು, ಶತ್ರುಗಳಿಂದ ದೂರ ಉಳಿಯುವಿರಿ, ಇಷ್ಟಾರ್ಥಗಳು ಸಿದ್ಧಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *