Connect with us

Dina Bhavishya

ದಿನಭವಿಷ್ಯ: 01-11-2018

Published

on

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣ ಪಕ್ಷ, ಅಷ್ಟಮಿ ತಿಥಿ,
ಗುರುವಾರ, ಆಶ್ಲೇಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:34 ರಿಂದ 3:02
ಗುಳಿಕಕಾಲ: ಬೆಳಗ್ಗೆ 9:11 ರಿಂದ 10:39
ಯಮಗಂಡಕಾಲ: ಬೆಳಗ್ಗೆ 6:16 ರಿಂದ 7:43

ಮೇಷ: ಸೇವಾವೃತ್ತಿಯ ಉದ್ಯೋಗ ಪ್ರಾಪ್ತಿ, ಸೋಲು, ನಷ್ಟ, ನಿರಾಸೆ, ಮಾನಹಾನಿ, ಗೌರವಕ್ಕೆ ಧಕ್ಕೆ, ದುಷ್ಟ ಆಲೋಚನೆಗಳು, ಚರ್ಮ ತುರಿಕೆ, ಕಾಲು ಸೆಳೆತ, ಮಾಟ-ಮಂತ್ರದ ಭೀತಿ, ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ, ವಯೋವೃದ್ಧರಿಂದ ಬೈಗುಳ, ಕೆಲಸಗಾರರು-ಬಾಡಿಗೆದಾರರಿಂದ ಕಿರಿಕಿರಿ.

Advertisement
Continue Reading Below

ವೃಷಭ: ಆಕಸ್ಮಿಕ ಪ್ರಯಾಣ, ಉದ್ಯೋಗದಲ್ಲಿ ಒತ್ತಡ, ದಾಂಪತ್ಯದಲ್ಲಿ ಮನಃಸ್ತಾಪ, ಮಕ್ಕಳಿಗೆ ಪೆಟ್ಟು-ಭವಿಷ್ಯದ ಚಿಂತೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಪತ್ರ ವ್ಯವಹಾರಗಳು ಮಾಡುವಿರಿ, ಸ್ಥಳ ಬದಲಾಯಿಸುವ ಆಲೋಚನೆ.

ಮಿಥುನ: ಸ್ವಯಂಕೃತ ಅಪರಾಧದಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಆಸೆಗಳಿಂದ ಸಂಕಷ್ಟ, ಸ್ಥಿರಾಸ್ತಿ ನಷ್ಟ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಸಾಲ ಮಾಡುವ ಪರಿಸ್ಥಿತಿ.

ಕಟಕ: ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಶತ್ರುಗಳ ನಾಶ, ನಿದ್ರೆಯಲ್ಲಿ ಕೆಟ್ಟ ಕನಸು, ವಯೋವೃದ್ಧರಿಗೆ ಸಹಾಯ, ಮಕ್ಕಳಿಗಾಗಿ ಅಧಿಕ ಖರ್ಚು, ದಾಂಪತ್ಯದಲ್ಲಿ ಒತ್ತಡ, ಸಂಗಾತಿ ನಡವಳಿಕೆಯಿಂದ ಬೇಸರ, ಅನಿರೀಕ್ಷಿತವಾಗಿ ಭಾವನೆಗಳಿಗೆ ಧಕ್ಕೆ,
ನೆರೆಹೊರೆಯವರಿಂದ ಸಹಾಯ.

ಸಿಂಹ: ಸ್ಥಿರಾಸ್ತಿಯಿಂದ ಲಾಭ, ದೂರದ ವ್ಯಕ್ತಿಗಳಿಂದ ಆರ್ಥಿಕ ಸಹಾಯ, ಮಕ್ಕಳ ನಡವಳಿಕೆಯಿಂದ ಬೇಸರ, ಅಧಿಕವಾದ ನಿದ್ರೆ, ಆರೋಗ್ಯದಲ್ಲಿ ಏರುಪೇರು, ಪ್ರೀತಿ ಪ್ರೇಮದಲ್ಲಿ ಮೋಸ, ಕುಟುಂಬದಲ್ಲಿ ಶತ್ರುತ್ವ, ಸ್ನೇಹಿತರಿಂದ ನಷ್ಟ.

ಕನ್ಯಾ: ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಕೆಲಸ ಕಾರ್ಯಗಳಲ್ಲಿ ಎಳೆದಾಟ, ಸ್ಥಳ ಬದಲಾವಣೆಗೆ ಆಲೋಚನೆ, ಸ್ಥಿರಾಸ್ತಿಗಾಗಿ ಸಾಲ ಮಾಡುವ ಚಿಂತೆ, ಮಿತ್ರರಿಂದ ಅನುಕೂಲ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆಲೋಚನೆಗಳಿಂದ ಸೋಲು, ಸಾಲಗಾರರಿಂದ ಕಿರಿಕಿರಿ.

ತುಲಾ: ಮಕ್ಕಳಿಂದ ಧನಾಗಮನ, ಕುಟುಂಬದಲ್ಲಿ ಭಾವನೆಗಳಿಗೆ ಮನ್ನಣೆ, ಸ್ಥಿರಾಸ್ತಿ-ವಾಹನದ ಮೇಲೆ ಹಣ ಹೂಡಿಕೆ, ಉದ್ಯೋಗ ಬದಲಾವಣೆಗೆ ಚಿಂತೆ, ಉತ್ತಮ ಅವಕಾಶಗಳು ಪ್ರಾಪ್ತಿ, ನಂಬಿಕಸ್ಥರಿಂದ ಮೋಸ-ನೋವು, ಗುಪ್ತ ವಿಚಾರಗಳಿಗೆ ಅಧಿಕ ಖರ್ಚು, ಸ್ವತಃ ಕಡಿವಾಣ ಹಾಕಿಕೊಳ್ಳುವಿರಿ.

ವೃಶ್ಚಿಕ: ವ್ಯಾಪಾರೋದ್ಯಮಕ್ಕೆ ಸಾಲ ಬಯಸುವಿರಿ, ಸೋಲು-ನಷ್ಟ, ನಿರಾಸೆಗಳಿಂದ ಬೇಸರ, ಆಯುಷ್ಯಕ್ಕೆ ಕಂಟಕವಾಗುವ ಸಾಧ್ಯತೆ, ಭವಿಷ್ಯದ ಚಿಂತನೆಯಿಂದ ಹಳೇ ನೆನಪು ಕಾಡುವುದು, ಕುಟುಂಬದಲ್ಲಿ ಕಲಹ, ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸು: ಸಂಗಾತಿಯಿಂದ ಬೇಸರ, ದಾಂಪತ್ಯದಲ್ಲಿ ಅನುಮಾನ, ಉದ್ಯೋಗದಲ್ಲಿ ಕಿರಿಕಿರಿ-ನಷ್ಟ, ಪಾಲುದಾರಿಕೆಯಲ್ಲಿ ತೊಂದರೆ, ಮುಂದಾಲೋಚನೆ ಇಲ್ಲದೇ ಕೆಲಸ ಮಾಡುವಿರಿ, ಮಾನಸಿಕ ಚಿಂತೆ, ಹಿರಿಯರ ಆರೋಗ್ಯಕ್ಕಾಗಿ ಖರ್ಚು.

ಮಕರ: ಸಾಲದ ಸಹಾಯ ಲಭಿಸುವುದು, ತಂದೆಯಿಂದ ಲಾಭ, ಹಿರಿಯ ವ್ಯಕ್ತಿಗಳಲ್ಲಿ ಅನಾರೋಗ್ಯ, ಕಿವಿ ನೋವು, ವಿಶ್ರಾಂತಿ ಮಾಡಲು ಮನಸ್ಸು,
ಶತ್ರು-ಸೇವಕರಿಂದ ಲಾಭ, ಸಂಗಾತಿಯೊಂದಿಗೆ ಶತ್ರುತ್ವ, ವಿಶೇಷವಾದ ಅರಿವು-ಮುಂದಾಲೋಚನೆ, ದೂರ ಪ್ರಯಾಣ, ಮೊಮ್ಮಕ್ಕಳಿಂದ ಅನುಕೂಲ,
ಮಾಡುವ ಕಾರ್ಯದಲ್ಲಿ ಜಯ.

ಕುಂಭ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ಕಾರ್ಮಿಕರು-ಬಾಡಿಗೆದಾರರ ಕೊರತೆ ನಿವಾರಣೆ, ಸಂತಾನ ದೋಷ ಬಾಧಿಸುವುದು, ಜೂಜು-ರೇಸ್ ಲಾಟರಿಗಳಿಂದ ನಷ್ಟ, ಮಾನಸಿಕ ವ್ಯಥೆಯಿಂದ ನಿದ್ರಾಭಂಗ, ಕಿರಿಯ ವ್ಯಕ್ತಿಗಳಿಂದ ಉದ್ಯೋಗದಲ್ಲಿ ಒತ್ತಡ.

ಮೀನ: ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಸ್ಥಿರಾಸ್ತಿ-ವಾಹನ ಖರೀದಿ ಚಿಂತೆ, ಶುಭ ಯೋಗ ಪ್ರಾಪ್ತಿ, ಮಕ್ಕಳಿಂದ ಲಾಭ, ಕೋರ್ಟ್ ಕೇಸ್‍ಗಳಲ್ಲಿ ಜಯ, ರಕ್ತ ಸಂಬಂಧಿಗಳಿಂದ ಅನುಕೂಲ, ಪಿತ್ರಾಜಿತ ಆಸ್ತಿ ಸಮಸ್ಯೆ ನಿವಾರಣೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *